ಬೆಂಗಳೂರು: ಬೂತ್ ಸಶಕ್ತಗೊಳಿಸಲು ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು. ಶಿವಾಜಿನಗರ ಕ್ಷೇತ್ರದಲ್ಲಿ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾರ್ಯಕರ್ತರನ್ನ ಹುರಿದುಂಬಿಸಿದರು.
ಶಿವಾಜಿನಗರ ವಿಧಾನಸಭಾ ಕ್ಷೇತ್ರ ವಸಂತನಗರ ವಾರ್ಡ್ ಬೂತ್ ನಂ.50 ಇಲ್ಲಿಂದ ವಿಜಯ ಸಂಕಲ್ಪ ಪ್ರಾರಂಭವಾಗುತ್ತಿದೆ. ಬೂತ್ ಮಟ್ಟದ ವಿಜಯ ಸಾಧ್ಯವಾಗಿಸಲು ಬೂತ್ ಮಟ್ಟದ ಅಭಿಯಾನವನ್ನು ಕೈಗೊಳ್ಳಲು ರಾಷ್ಟ್ರ ಮತ್ತು ರಾಜ್ಯಾಧ್ಯಕ್ಷರ ಸೂಚನೆಯ ಮೇರೆಗೆ ಚಾಲನೆಯನ್ನು ನೀಡಲಾಗಿದೆ. ಅತ್ಯಂತ ಕಷ್ಟವಾದ ಕ್ಷೇತ್ರ ಎನಿಸಿರುವ ಶಿವಾಜಿನಗರದಿಂದ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ಶಿವಾಜಿನಗರದಲ್ಲಿ ಒಂದು ಕಾಲದಲ್ಲಿ ಬಿಜೆಪಿ (BJP) ಗೆದ್ದಿತ್ತು. ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಹಿಂದೆ ಗೆದ್ದಿದ್ದರು. ನಿರ್ಮಲ್ ಕುಮಾರ್ ಸುರಾನಾ ಚಿಕ್ಕಪೇಟೆಯಲ್ಲಿ ಪಿಸಿ ಮೋಹನ್ ಗೆದ್ದಿದ್ದರು. ಶಿವಾಜಿನಗರ ಕ್ಷೇತ್ರದ ವಿಜಯಕ್ಕಾಗಿ ಇಲ್ಲಿ ಬಂದಿದೇನೆ. ಇದಕ್ಕೆ ಹೆಚ್ಚಿನ ಸಮಯವನ್ನು ಕೊಡುತಿದ್ದು, ಕರೆದಾಗ ಬಂದು ಕೆಲಸ ಕಾರ್ಯಗಳನ್ನು ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಗಮನವನ್ನು ನೀಡಲಾಗುವುದು ಎಂದರು. ಇದನ್ನೂ ಓದಿ: ಕಾಂಗ್ರೆಸ್ ಪಕ್ಷದಲ್ಲಿ ನೋ ಮ್ಯಾಚ್ ಫಿಕ್ಸಿಂಗ್ – ಶೇ.95 ಹಾಲಿ ಶಾಸಕರಿಗೆ ಟಿಕೆಟ್ ಫಿಕ್ಸ್: ಡಿಕೆಶಿ
Advertisement
Advertisement
ಗೆಲ್ಲಲು ಬೂತ್ ಸಶಕ್ತವಾಗಬೇಕು. ಶಿವಾಜಿನಗರದಲ್ಲಿ ಬಿಜೆಪಿ ಗೆದ್ದರೆ, ಕರ್ನಾಟಕದಲ್ಲಿ 130ಕ್ಕಿಂತ ಹೆಚ್ಚು ಸ್ಥಾನಗಳು ಬಿಜೆಪಿಗೆ ಬಂದೇ ಬರುತ್ತದೆ. ಇದೊಂದು ಒಂದು ರಾಜಕೀಯ ಸಂಕೇತ ಎಂದು ತಿಳಿಸಿದರು.
Advertisement
ಪ್ರತಿಯೊಂದು ಬೂತ್‌ನ್ನು ಸಶಕ್ತಗೊಳಿಸಲು ಎಲ್ಲಾ ಪ್ರಮುಖರ ಸಭೆ ಕರೆದು, 100 ಸಕ್ರಿಯವಾಗಿ ಕೆಲಸ ಮಾಡುವ ಕೀ ಮತದಾರರನ್ನು ಒಳಗೊಂಡ ಬೂತ್‌ಮಟ್ಟದ ಸಮಿತಿಯನ್ನು ರಚಿಸಿ ಪ್ರತಿಯೊಂದು ಬೂತಿನಲ್ಲಿ ಎಸ್.ಸಿ/ಎಸ್.ಟಿ, ಹಿಂದುಳಿದ ವರ್ಗಗಳು, ಮಹಿಳೆಯರು ಮತ್ತು ಯುವಕರ ಮೋರ್ಚಾಗಳನ್ನು ಸ್ಥಾಪಿಸಿ ಸಕ್ರಿಯವಾಗಿ ಕೆಲಸ ಮಾಡಿ. ಪೇಜ್ ಸಮಿತಿಗಳಲ್ಲಿ ಪೇಜ್ ಪ್ರಮುಖರಿದ್ದಾರೆ. ಇಲ್ಲಿ ಬರುವ ಸಮಿತಿಯನ್ನು ರಚಿಸಿ ನಿರಂತರವಾಗಿ ಮೂರು ತಿಂಗಳು ಕೆಲಸ ಮಾಡಬೇಕು. ಪ್ರತಿ ಮನೆಗೂ ಭೇಟಿ ನೀಡಿ 4 ಬಾರಿ ಭೇಟಿ ನೀಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆ ಹಾಗೂ ಕಾಂಗ್ರೆಸ್ಸಿನ ಜನವಿರೋಧಿ ನೀತಿಯನ್ನು ತಿಳಿಸುವ ಕೆಲಸವನ್ನು ಮಾಡಬೇಕು. 5ನೇ ಬಾರಿ ಚುನಾವಣೆಗೆ ಮುನ್ನ ಮತ ಕೇಳಲು ಹೋಗಬೇಕು. ಶಿವಾಜಿನಗರದಲ್ಲಿ ಈ ಬಾರಿ ಬಿಜೆಪಿ ಬಾವುಟ ಹಾರಿಸಬೇಕು. ಬಿಜೆಪಿ ಕಾರ್ಯಕರ್ತರಾಗಿ ಹೆಮ್ಮೆಯಿಂದ ಜನರ ಬಳಿಗೆ ಹೋಗಲು ಸಾಧ್ಯವಿದೆ ಎಂದು ಹೇಳಿದರು.
Advertisement
ವಿಶ್ವದಲ್ಲಿಯೇ ಬಿಜೆಪಿ ಅತಿ ದೊಡ್ಡ ಪಕ್ಷ. ಅತಿ ಹೆಚ್ಚು ಜನ ನಮ್ಮ ತತ್ವ, ಸಿದ್ಧಾಂತ ಮತ್ತು ಕಾರ್ಯಕ್ರಮಗಳನ್ನು ಒಪ್ಪಿರುವುದರಿಂದ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸದಸ್ಯರಾಗಿದ್ದಾರೆ. ದೇಶಭಕ್ತ, ಸಶಕ್ತ ನಾಯಕತ್ವವನ್ನು ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದಾರೆ. ಭಾರತದ ಭದ್ರತೆಯ ಜೊತೆಗೆ ಭಾರತದ ಪ್ರಗತಿ, ಆರ್ಥಿಕ, ಸಾಮಾಜಿಕ, ಪ್ರಗತಿಯ ಜೊತೆಗೆ ವಿಶ್ವಮಾನ್ಯ ಭಾರತವನ್ನು ರೂಪಿಸಿರುವ ನಾಯಕರು ಎಂದರು. ಇದನ್ನೂ ಓದಿ: ದಿನಕ್ಕೊಂದು ವೇಷ ಹಾಕುವ ಪಾರ್ಟಿ ನಮ್ಮದಲ್ಲ: ಸಿ.ಟಿ ರವಿ
ಅತ್ಯಂತ ಸಂಘಟಿತರಾದ ಕಾರ್ಯಕರ್ತರ ಪಡೆಯನ್ನು ಪಕ್ಷ ಹೊಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರವಾದ ಕಾರ್ಯಕ್ರಮಗಳನ್ನು ರೂಪಸಿ, ಅನುಷ್ಠಾನಕ್ಕೆ ತಂದಿದೆ. ಸ್ಮಾರ್ಟ್ ಸಿಟಿ ಯೋಜನೆಯನ್ನು ನರೇಂದ್ರ ಮೋದಿಯವರು ಜಾರಿಗೆ ತಂದರು. ಕಾಂಗ್ರೆಸ್ ಕೇಂದ್ರದಲ್ಲಿ ಆಡಳಿತ ಮಾಡಿ ಒಂದು ನಯಾ ಪೈಸೆಯನ್ನೂ ನೀಡಿಲ್ಲ. ಸುಮಾರು 500 ಕೊಟಿ ರೂ.ಗಳನ್ನು ಬೆಂಗಳೂರಿಗೆ ನರೇಂದ್ರ ಮೋದಿಯವರು ನೀಡಿದ್ದಾರೆ. ಬೆಂಗಳೂರಿನ ಶಿವಾಜಿನಗರ, ಭಾರತಿನಗರ, ಗಾಂಧಿನಗರ, ಚಿಕ್ಕಪೇಟೆ ಇದೇ ಪ್ರದೇಶಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಗೊಂಡಿದೆ. ಇಲ್ಲಿಯ ಶಾಸಕರು ಈ ಕಾರ್ಯಕ್ರಮಗಳನ್ನು ನಾವೇ ಮಾಡಿದ್ದು ಎನ್ನುತ್ತಿದ್ದಾರೆ. ಈ ಸತ್ಯವನ್ನು ಜನರಿಗೆ ತಿಳಿಸಬೇಕು ಕಾಂಗ್ರೆಸ್ ವಿರುದ್ಧ ಗುಡುಗಿದರು.
ಸ್ಮಾರ್ಟ್ ಸಿಟಿಯಲ್ಲಿ ಆಗಿರುವ ಕೆಲಸ ಕೇವಲ ಬಿಜೆಪಿಯಿಂದಾಗಿದೆ. ಕಾಂಗ್ರೆಸ್ ಲಾಭ ಮಾಡಿಕೊಳ್ಳುವುದನ್ನು ಬಿಟ್ಟರೆ ಏನೂ ಮಾಡಿಲ್ಲ. 75 ವರ್ಷದಲ್ಲಿ 65 ವರ್ಷ ಕಾಂಗ್ರೆಸ್ ಆಡಳಿತ ಮಾಡಿದೆ. ಇಷ್ಟು ವರ್ಷ ಯಾಕೆ ಮಾಡಿಲ್ಲ. ಶಿವಾಜಿನಗರ ಕ್ಷೇತ್ರವನ್ನು ಒಂದು ಕೊಳಚೆ ಪ್ರದೇಶವಾಗಿ ಇಟ್ಟುಕೊಂಡಿದ್ದರು. ನಮ್ಮ ಸರ್ಕಾರ ಬಂದ ನಂತರ ಸುತ್ತಲಿನ ಕ್ಷೇತ್ರಗಳ ಅಭಿವೃದ್ಧಿಯಾಗುತ್ತಿದೆ. ಬೆಂಗಳೂರಿಗೆ ಎಂಟು ಸಾವಿರ ಕೋಟಿ ಅನುದಾನ ನಗರೋತ್ಥಾಕ್ಕೆ ನೀಡಿದೆ. 2 ಸಾವಿರ ಕೋಟಿ ರೂ.ಗಳನ್ನು ರಾಜಕಾಲುವೆ, ಗಾರ್ಡನ್‌ಗಳಿಗೆ, ರಸ್ತೆಗಳಿಗೆ ದೊಡ್ಡ ಪ್ರಮಾಣದ ಅನುದಾನ ನೀಡಿದೆ ಎಂದರು.
ಫ್ಲೈಓವರ್‌ಗಳನ್ನು ನಿರ್ಮಿಸಲಾಗುತ್ತಿದೆ. ಬೃಹತ್ ಬೆಂಗಳೂರಿಗೆ ಅಭಿವೃದ್ಧಿ ಯೋಜನೆ ಮಾಡಲಾಗುತ್ತಿದೆ. ಮೆಟ್ರೋ 2ನೇ ಹಂತವನ್ನು 2024 ರೊಳಗೆ ಮುಗಿಸಲು ತಿಳಿಸಲಾಗಿದೆ. ಮೆಟ್ರೋ 3ನೇ ಹಂತಕ್ಕೆ 26 ಸಾವಿರ ಕೋಟಿ ರೂ. ಯೋಜನೆ ಕೇಂದ್ರದ ಅನುಮೋದನೆ ದೊರೆತ ತಕ್ಷಣ, ಕಾಮಗಾರಿ ಪ್ರಾರಂಭಿಸಲಾಗುವುದು. ಸಬ್ ಅರ್ಬನ್ ರೈಲು ಯೋಜನೆ 15 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ಪ್ರಧಾನಿಯವರು ಯೋಜನೆಗೆ ಅಡಿಗಲ್ಲು ಹಾಕಿದ್ದಾರೆ. ಸ್ಯಾಟ್‌ಲೈಟ್ ಟೌನ್ ರಿಂಗ್ ರೋಡ್, ಬೆಂಗಳೂರು ಹೊರ ವಲಯದ ರಸ್ತೆಗಳ ಕೆಲಸ ಪ್ರಾರಂಭವಾಗಿದೆ. ಫೆರಿಫೆರಲ್ ರಿಂಗ್ ರಸ್ತೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕೆಲಸ ಕೈಗೊಳ್ಳಲಾಗುವುದು. ಕಾವೇರಿ 5 ನೇ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತಿದೆ. ಬಹಳ ವರ್ಷದಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲ ಯೋಜನೆಗಳನ್ನು ಜನರ ಮುಂದೆ ಇಡಬೇಕು. ಭಾಜಪ ಕಾರ್ಯಕರ್ತರು ಹೆಮ್ಮೆಯಿಂದ ಜನರ ಬಳಿ ಹೋಗಬಹುದು ಎಂದು ಹೇಳಿದರು. ಇದನ್ನೂ ಓದಿ: ನಾವು ಕೋಲಾರವನ್ನ ಗೆದ್ದೇ ಗೆಲ್ಲುತ್ತೇವೆ, ಅದರಲ್ಲಿ ಯಾವುದೇ ಅನುಮಾನವಿಲ್ಲ: ಮುನಿರತ್ನ
ಕಾಂಗ್ರೆಸ್‌ನವರು ಮೊಸರಿನಲ್ಲಿ ಕಲ್ಲನ್ನು ಹುಡುಕುವ ಕೆಲಸವನ್ನು ಮಾಡುತ್ತಾರೆ. ಅವರು ಜನಕಲ್ಯಾಣ ಕಾರ್ಯಕ್ರಮಗಳನ್ನು ಮಾಡದಿರುವ ಕಾರಣ ಜನರು ಕಳೆದ ಬಾರಿ ತಿರಸ್ಕಾರ ಮಾಡಿದ್ದಾರೆ. ಈ ಬಾರಿಯೂ ಜನರು ಕಾಂಗ್ರೆಸ್‌ನ್ನು ತಿರಸ್ಕರಿಸಲಿದ್ದಾರೆ. ಶಿವಾಜಿನಗರ ಕ್ಷೇತ್ರದಲ್ಲಿ ಭಾಜಪ ಅರಳಬೇಕೆಂಬುದು ನಮ್ಮ ಕನಸಾಗಿದೆ. ದೇಶ ಹಾಗೂ ನಾಡಿನ ಸಮಗ್ರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇವೆ. ಬೂತ್ ಮಟ್ಟದ ಸಂಘಟನೆ ಮಾಡುವಾಗಿ ಸ್ಥಳೀಯ ಸಮಸ್ಯೆಗಳೇನು ಎಂಬುದರ ಅರಿವಿರಬೇಕು. ಆಯಾ ವಾರ್ಡಿನಲ್ಲಿರುವ ರಸ್ತೆ, ನೀರಿನ ಸಮಸ್ಯೆ ಬಗ್ಗೆ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಬೂತ್ ಮಟ್ಟದ ಸಂಘಟನೆ ಎಂದರೆ ಎರಡೂ ಕಡೆಯ ಸಂವಹನವಿದ್ದಂತೆ. ಪಕ್ಷದ ಕೆಲಸಗಳನ್ನು ತಿಳಿಸುವುದು ಒಂದೆಡೆಯಾದರೆ. ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ತಿಳಿದು ಪರಿಹಾರ ಒದಗಿಸುವುದು ಒಂದು ಕಡೆ. ಈ ರೀತಿ ಕೆಲಸ ಮಾಡುವ ಧೈರ್ಯವನ್ನೂ ಯಾವ ಪಕ್ಷವೂ ಮಾಡುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಲಾಭ ದೊರೆಯಬೇಕು. ಜನರ ಸುತ್ತಲೂ ಅಭಿವೃದ್ಧಿಯಾಗಬೇಕು. ಸರ್ಕಾರ ಮನೆ ಬಾಗಿಲಿಗೆ ಹೋಗಿ ಕೆಲಸ ಮಾಡಿಕೊಡಲು, ಸೇವಾ ಮನೋಭಾವದಿಂದ ಕೆಲಸ ನಿರ್ವಹಿಸುವ ತತ್ವ ಪಾಲಿಸುವುದು ಭಾರತ ಜನತಾ ಪಕ್ಷದ್ದಾಗಿದೆ ಎಂದು ಮಾತನಾಡಿದರು.
ರಾಜಕಾರಣದಲ್ಲಿ ಅಧಿಕಾರಕ್ಕೆ ರಾಜಕಾರಣ ಹಾಗೂ ಜನರಿಗಾಗಿ ರಾಜಕಾರಣವಿದೆ. ಕಾಂಗ್ರೆಸ್ (Congress) ಪಕ್ಷ ಅಧಿಕಾರದ ರಾಜಕಾರಣ ಮಾಡಿದೆ. ಜನರನ್ನು ಜಾತಿಮತ ಪಂಥದಿಂದ ಒಡೆಯುವ ನೀತಿಯನ್ನು ಪಾಲಿಸುತ್ತದೆ. ಭಾಜಪ ಪಕ್ಷದ್ದು ಜನರಿಂದ, ಜನರಿಗಾಗಿ ಜನರ ರಾಜಕಾರಣ ಮಾಡುತ್ತದೆ. ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಜನರೊಂದಿಗಿದ್ದು, ಜನರಿಗಾಗಿ ಕೆಲಸ ಮಾಡುವವನು. ದೇಶಾಭಿಮಾನಿಯಾಗಿದ್ದು, ದೇಶಕ್ಕಾಗಿ ಸದಾ ಶ್ರಮಿಸುವವನಾಗಿರುತ್ತಾನೆ. ಪಕ್ಷದ ಸಿದ್ಧಾಂತಗಳಿಗಾಗಿ ಕಟಿಬದ್ಧವಾಗಿ ದುಡಿಯುತ್ತಾನೆ ಎಂದರು. ಇದನ್ನೂ ಓದಿ: ಜೆಡಿಎಸ್ ಸೇರಿದಂತೆ ರಾಜ್ಯದಲ್ಲಿ ಯಾವುದೇ ಪ್ರಾದೇಶಿಕ ಪಕ್ಷ ಪರಿಣಾಮ ಬೀರದು: ಶ್ರೀರಾಮುಲು
ಕಾಂಗ್ರೆಸ್ ಪಕ್ಷ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ. ರಾಜಕೀಯವಾಗಿ ಜೀವಂತವಾಗಿರಲು ಹಾತೊರೆಯುತ್ತಿದೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗಾಗಿದ್ದು, ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಜನರ ಬಗ್ಗೆ ಚಿಂತನೆ ಅವರಿಗಿಲ್ಲ. ನಮ್ಮ ಪಕ್ಷದ ನೀತಿ ಧರ್ಮ ಎಂದಿಗೂ ಬದಲಾಗುವುದಿಲ್ಲ. ಭಾಜಪ ಜನರ ರಾಜಕಾರಣ ಮಾಡುತ್ತಾ ಬಂದಿದೆ. ಶಿವಾಜಿನಗರ ಕ್ಷೇತ್ರದಲ್ಲಿ 13 ಸಾವಿರಕ್ಕಿಂತ ಹೆಚ್ಚಿನ ಮತಗಳಿಂದ ಭಾಜಪ ಗೆಲ್ಲುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.