ನವದೆಹಲಿ: ದೇಶದ ಆರು ರಾಜ್ಯಗಳ ಏಳು ವಿಧಾನಸಭೆಗಳಿಗೆ ನಡೆದ ಉಪಚುನಾವಣೆಯ(By Election) ಫಲಿತಾಂಶ ಹೊರಬಿದ್ದಿದೆ. ಏಳು ಸ್ಥಾನಗಳ ಪೈಕಿ ನಾಲ್ಕರಲ್ಲಿ ಗೆದ್ದು ಬಿಜೆಪಿ(BJP) ತನ್ನ ಹವಾ ಮುಂದುವರೆಸಿದೆ.
ಕಾಂಗ್ರೆಸ್(Congress) ಶೂನ್ಯ ಸಂಪಾದನೆ ಮಾಡಿದ್ದು, ಉಳಿದ ಮೂರು ಸ್ಥಾನಗಳನ್ನು ಶಿವಸೇನೆ, ಆರ್‌ಜೆಡಿ ಮತ್ತು ಟಿಆರ್‌ಎಸ್ ತಲಾ ಒಂದು ಗೆದ್ದುಕೊಂಡಿವೆ. ಇದನ್ನೂ ಓದಿ: ಡಿಸೆಂಬರ್ ಮೂರನೇ ವಾರದಿಂದ ರಾಜ್ಯದಲ್ಲಿ ಅಸಲಿ ರಾಜಕೀಯದಾಟ
Advertisement
Advertisement
ತೀವ್ರ ಕುತೂಹಲ ಮೂಡಿಸಿದ್ದ ತೆಲಂಗಾಣದ ಮುನಗೋಡು ಕ್ಷೇತ್ರದಲ್ಲಿ ಮತ್ತೆ ಕಾರು ಸದ್ದು ಮಾಡಿದೆ. 10 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸೋತಿದ್ದಾರೆ. ಈ ಮೂಲಕ ಇಲ್ಲಿ ಬಿಜೆಪಿ ಮುಖಭಂಗ ಅನುಭವಿಸಿದೆ. ಇದನ್ನೂ ಓದಿ: ತೆಲಂಗಾಣ ಉಪಚುನಾವಣೆ – ಬಿಜೆಪಿ ವಿರುದ್ಧ ಗೆದ್ದು ಬೀಗಿದ ಕೆಸಿಆರ್
Advertisement
ಉತ್ತರ ಪ್ರದೇಶದ ಗೋಲಾ ಗೋರಖ್‍ಪುರ, ಹರಿಯಾಣದ ಆದಾಂಪುರ, ಬಿಹಾರದ ಗೋಪಾಲ್‍ಗಂಜ್, ಒಡಿಶಾದ ಧಾಮ್‍ನಗರದಲ್ಲಿ ಕಮಲ ಅರಳಿದೆ. ಗೋಪಾಲ್‍ಗಂಜ್ ಸೋಲಿನ ಮೂಲಕ ಬಿಹಾರ ಮೈತ್ರಿ ಸರ್ಕಾರ ಮುಜುಗರ ಅನುಭವಿಸಿದೆ. ಒಡಿಶಾದಲ್ಲಿ ಬಿಜೆಡಿಯ ಬಂಡಾಯ ಅಭ್ಯರ್ಥಿ ಕಾರಣ ಬಿಜೆಪಿ ಗೆದ್ದಿದೆ.