ಬೆಂಗಳೂರು: ಕರ್ನಾಟಕದಲ್ಲಿ ಸರ್ಕಾರ ರಚನೆಗಾಗಿ ಬಿಜೆಪಿ ಬ್ಲಾಕ್ ಮೇಲ್ ತಂತ್ರವನ್ನು ಅನುಸರಿಸುತ್ತಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಸರ್ಕಾರ ರಚನೆಗೆ ಬೇರೆಯವರಿಗೆ ಅವಕಾಶ ನೀಡುವ ಮಾತೇ ಇಲ್ಲ ಅಂತಾ ಪ್ರಧಾನಿ ಮೋದಿ ಹೇಳ್ತಾರೆ ಅಂದ್ರೆ ಎಂತಹ ಲೆವಲ್ ಗೆ ಇಳಿದಿದ್ದಾರೆ ಅನ್ನೋದು ಗೊತ್ತಾಗುತ್ತದೆ. ಕರ್ನಾಟಕದ ಜನತೆ ಅವರಿಗೆ ಸಂಪೂರ್ಣ ಬಹುಮತ ನೀಡಿಲ್ಲ. ಹೀಗಾಗಿ ಸರ್ಕಾರ ರಚನೆಯಿಂದ ದೂರ ಇದ್ರೆ ಸರಿಯಾಗುತ್ತೆ ಅಂತಾ ತಿಳಿಸಿದ್ರು. ಇದನ್ನೂ ಓದಿ: ವೀರಶೈವ ಮುಖಂಡರು ಬಿಜೆಪಿ ಸೇರ್ತಾರಾ ಪ್ರಶ್ನೆಗೆ ಉತ್ತರಿಸಿದ ಶಾಮನೂರು ಶಿವಶಂಕರಪ್ಪ
Advertisement
ವಾಮಾ ಮಾರ್ಗ, ಬ್ಲಾಕ್ ಮೇಲ್, ಕುದುರೆ ವ್ಯಾಪಾರ ಮೂಲಕ ಕಾಂಗ್ರೆಸ್ ಹಾಗು ಜೆಡಿಎಸ್ ಶಾಸಕರನ್ನು ಖರೀದಿಸುವ ಹೇಸಿಗೆ ತರಿಸುವಂತ ವಾತಾವರಣವನ್ನು ಕರ್ನಾಟಕದಲ್ಲಿ ನಿರ್ಮಾಣ ಮಾಡಬೇಡಿ. ಈಗಾಗಲೇ ಕಾಂಗ್ರೆಸ್-ಜೆಡಿಎಸ್ ಒಂದಾಗಿ ಬಹುಮತವನ್ನು ಪಡೆದುಕೊಂಡಿದೆ. ಈ ಹಿಂದೆಯೂ ಕರ್ನಾಟಕದ ಜನರು ಆಪರೇಷನ್ ಕಮಲದಂತಹ ಕೀಳುಮಟ್ಟದ ರಾಜಕೀಯವನ್ನು ನೋಡಿದ್ದಾರೆ. ಒಂದು ವೇಳೆ ಸ್ವಯಂ ಪ್ರೇರಿತವಾಗಿ ಶಾಸಕರು ನಿಮ್ಮ ಬಳಿ ಬಂದ್ರೆ ಕರೆದುಕೊಂಡು ಹೋಗಿ ನಮ್ಮದೇನು ವಿರೋಧವಿಲ್ಲ ಅಂತಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ರು. ಇದನ್ನೂ ಓದಿ: ಸ್ಫೋಟಕ ಮಾಹಿತಿ ಹೊರಗೆಡವಿದ ಕೆ.ಎಸ್ ಈಶ್ವರಪ್ಪ