ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿಯ ಬಂಧನವಾಗಿರುವುದು ಸಮ್ಮಿಶ್ರ ಸರ್ಕಾರದ ಯಶಸ್ಸು ಎಂದು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಶುಕ್ರವಾರ ಹೇಳಿದ್ದು, ಈ ಕುರಿತು ಇದೀಗ ಬಿಜೆಪಿ ವ್ಯಂಗ್ಯವಾಡಿದೆ.
ತಮಗೆ ತಾವೇ ಕೀರ್ತಿ ಪಡೆದುಕೊಳ್ಳುವ ಮೊದಲು ಹೊಸಪೇಟೆ ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಕಂಪ್ಲಿ ಶಾಸಕ ಗಣೇಶ್ ನನ್ನು ಬಂಧಿಸಿ ನಿಮ್ಮ ಪೌರುಷ ತೋರಿಸಿ ಎಂದು ಚಾಲೆಂಜ್ ಹಾಕಿದ್ದಾರೆ.
Advertisement
Advertisement
ಟ್ವೀಟ್ ನಲ್ಲೇನಿದೆ..?
ಅಣ್ಣಾ ಕುಮಾರಣ್ಣ, ರವಿ ಪೂಜಾರಿಯನ್ನು ಬಂಧಿಸಿದ್ದು ನಮ್ಮ ಸಮ್ಮಿಶ್ರ ಸರ್ಕಾರವೇ ಎಂದು ತಮಗೆ ತಾವೇ ಕೀರ್ತಿ ಪಡೆಯುವ ಮೊದಲು, ಕಂಪ್ಲಿ ಶಾಸಕ ಗಣೇಶ್ರನ್ನು ಬಂಧಿಸಿ ನಿಮ್ಮ ಪೌರುಷ ತೋರಿಸಿ ಎಂದು ಬಿಜೆಪಿ ಟ್ವೀಟ್ ನಲ್ಲಿ ಬರೆದುಕೊಂಡಿದೆ. ಇದನ್ನೂ ಓದಿ: ರವಿ ಪೂಜಾರಿ ಬಂಧನ ಸಮ್ಮಿಶ್ರ ಸರ್ಕಾರದ ಯಶಸ್ಸು: ಸಿಎಂ ಎಚ್‍ಡಿಎಕೆ
Advertisement
ಅಣ್ಣಾ ಕುಮಾರಣ್ಣ, ರವಿ ಪೂಜಾರಿಯನ್ನು ಬಂಧಿಸಿದ್ದು ನಮ್ಮ ಸಮ್ಮಿಶ್ರ ಸರ್ಕಾರವೇ ಎಂದು ತಮಗೆ ತಾವೇ ಕೀರ್ತಿ ಪಡೆಯುವ ಮೊದಲು, ಕಂಪ್ಲಿ ಶಾಸಕ ಗಣೇಶ್ರನ್ನು ಬಂಧಿಸಿ ನಿಮ್ಮ ಪೌರುಷ ತೋರಿಸಿ. pic.twitter.com/CwLU4Mdgex
— BJP Karnataka (@BJP4Karnataka) February 2, 2019
Advertisement
ಒಗ್ಗಟ್ಟು ಪ್ರದರ್ಶಿಸಲು ಕಾಂಗ್ರೆಸ್ ಶಾಸಕರು ಬಿಡದಿಯಲ್ಲಿರುವ ಈಗಲ್ ಟನ್ ರೆಸಾರ್ಟ್ ನಲ್ಲಿ ಉಳಿದಿದ್ದರು. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ಮುಗಿದ ನಂತರ ಕೈ ಶಾಸಕರು ಪಾರ್ಟಿ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು, ಶಾಸಕ ಗಣೇಶ್ ಕೋಪಗೊಂಡು ಬಾಟಲ್ ನಿಂದ ಆನಂದ್ ಸಿಂಗ್ ತಲೆಗೆ ಹೊಡೆದಿದ್ದಾರೆ. ಪರಿಣಾಮ ಆನಂದ್ ಸಿಂಗ್ ಅವರ ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಹಲ್ಲೆಯ ಬಳಿಕ ಗಣೇಶ್ ಪರಾರಿಯಾಗಿದ್ದು, ಶಾಸಕರಿಗಾಗಿ 14 ದಿನಗಳಿಂದ ಪೊಲೀಸರು ಊರೂರು ಹುಡುಕುತ್ತಿದ್ದಾರೆ.
CM @hd_kumaraswamy claiming credit for arrest of criminal Ravi Poojari by West African police is like @H_D_Devegowda claiming credits for killing of Bin Laden by US.
Wake up & first show some guts to stop the crime in Karnataka.
Governing a state isn’t like producing movies. pic.twitter.com/bVusZEsfZl
— BJP Karnataka (@BJP4Karnataka) February 2, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv