ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಬಿಜೆಪಿ (BJP) ಕಿಡಿಕಾರಿದೆ. ಕಾಂಗ್ರೆಸ್ (Congress) ಆಳ್ವಿಕೆಯಲ್ಲಿ ಇಡೀ ಕರ್ನಾಟಕಕ್ಕೆ ಗ್ರಹಣ ಹಿಡಿದಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ರಾಜ್ಯದಲ್ಲಿ @INCKarnataka ಬಂದಿದೆ ಕರ್ನಾಟಕಕ್ಕೆ ಗ್ರಹಣ ಹಿಡಿದಿದೆ:
???? ಕಾವೇರಿಗೆ ಗ್ರಹಣ
???? ವಿದ್ಯುತ್ಗೆ ಗ್ರಹಣ
???? ಅಭಿವೃದ್ಧಿಗೆ ಗ್ರಹಣ
???? ಅನ್ನಭಾಗ್ಯಕ್ಕೆ ಗ್ರಹಣ
???? ಕೈಗಾರಿಕೆಗಳಿಗೆ ಗ್ರಹಣ
???? ಕುಡಿಯುವ ನೀರಿಗೆ ಗ್ರಹಣ
???? ಕೃಷಿ ಉತ್ಪನ್ನಗಳಿಗೆ ಗ್ರಹಣ
???? ಬ್ರ್ಯಾಂಡ್ ಬೆಂಗಳೂರಿಗೆ ಗ್ರಹಣ
30 ವರ್ಷಗಳ ಹಿಂದಿನ “ಆ ದಿನಗಳ… pic.twitter.com/xYOlVKRSbd
— BJP Karnataka (@BJP4Karnataka) October 29, 2023
Advertisement
ಸಿಎಂ ಸಿದ್ದರಾಮಯ್ಯ ಅವರ ನೆರಳಿನ ಫೋಟೋವನ್ನು ಎಕ್ಸ್ನಲ್ಲಿ ಹಾಕಿಕೊಂಡು ವಿವಿಧ ಯೋಜನೆಗಳಿಗೆ ಗ್ರಹಣ ಹಿಡಿದಿದೆ ಎಂದು ಬಿಜೆಪಿ ಬರೆದುಕೊಂಡಿದೆ. ಅಲ್ಲದೇ ಕಾವೇರಿಗೆ, ವಿದ್ಯುತ್ಗೆ, ಅಭಿವೃದ್ಧಿಗೆ, ಅನ್ನಭಾಗ್ಯಕ್ಕೆ, ಕೈಗಾರಿಕೆಗಳಿಗೆ, ಕುಡಿಯುವ ನೀರಿಗೆ, ಕೃಷಿ ಉತ್ಪನ್ನಗಳಿಗೆ ಹಾಗೂ ಬ್ರ್ಯಾಂಡ್ ಬೆಂಗಳೂರಿಗೆ ಗ್ರಹಣ ಹಿಡಿದೆದೆ. ಕರ್ನಾಟಕ ಮತ್ತೆ ಅಭಿವೃದ್ಧಿಯಲ್ಲಿ ಸಾಗಿದೆ ಎಂದು ಬಿಜೆಪಿ ಹೇಳಿಕೊಂಡಿದೆ. ಇದನ್ನೂ ಓದಿ: KEA ಪರೀಕ್ಷೆ- ಉದ್ದ ತೋಳಿನ ಶರ್ಟ್ ಧರಿಸಿದ್ದ ಪರೀಕ್ಷಾರ್ಥಿಗಳಿಗೆ ಶಾಕ್
Advertisement
Advertisement
ಸರ್ಕಾರ ಜೇಬುಗಳ್ಳತನಕ್ಕೆ ಇಳಿದಿದೆ, ಎಚ್ಚರಿಕೆ ಎಂದು ಬಸ್ಗಳಲ್ಲಿ ಹಾಕಬೇಕು. ಸಾಮಾನ್ಯ ಬಸ್ಗಳ ದರವನ್ನೂ ನಾಲ್ಕೇ ತಿಂಗಳಲ್ಲಿ 20% ರಷ್ಟು ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರ ಹಗಲು ದರೋಡೆಗೆ ಇಳಿದಿದೆ. ಮೊದಲು 160 ರೂ. ನಲ್ಲಿ ಮುಗಿಯುತ್ತಿದ್ದ ಪ್ರಯಾಣಕ್ಕೆ ಈಗ 200 ರೂ, ಮಾಡಿ ಕೈ ಸುಟ್ಟುಕೊಳ್ಳಬೇಕಾಗಿದೆ. ಇನ್ನು ಒಂದೇ ತಿಂಗಳಲ್ಲಿ ಸ್ಥಗಿತಗೊಳ್ಳಲಿರುವ ಶಕ್ತಿ ಯೋಜನೆಯ ಎಲ್ಲಾ ಹೊರೆಯನ್ನೂ ಕರ್ನಾಟಕದ ಜನ ಹೊರಬೇಕಿರುವುದು ನಿಶ್ಚಿತ ಎಂದು ಹೇಳಿಕೊಂಡಿದೆ.
Advertisement
ಇದರೊಂದಿಗೆ ಸರ್ಕಾರ ನೇರವಾಗಿ ಪರೀಕ್ಷಾ ಅಕ್ರಮಕ್ಕೆ ಕುಮ್ಮಕ್ಕು ಕೊಡುತ್ತಿದೆ. ನೇಮಕಾತಿ ಪರೀಕ್ಷೆಯಲ್ಲೂ ಸಹ ಕಲೆಕ್ಷನ್ಗೆ ಇಳಿದಿದೆ. ಕರ್ನಾಟಕ 30 ವರ್ಷಗಳ ಹಿಂದಿನ `ಆ ದಿನಗಳ ಗ್ರಹಣ’ ಇದೀಗ ಸಿದ್ದರಾಮಯ್ಯರವರ ಸರ್ಕಾರದ ಕೃಪೆಯಿಂದ ಕರ್ನಾಟಕಕ್ಕೆ ಮತ್ತೊಮ್ಮೆ ಬಂದಿದೆ ಎಂದು ಬಿಜೆಪಿ ಕಿಡಿಕಾರಿದೆ. ಇದನ್ನೂ ಓದಿ: ಎಫ್ಡಿಎ ಪರೀಕ್ಷೆ ಅಕ್ರಮ – ಸರ್ಕಾರಕ್ಕೆ ಮಾಹಿತಿ ಇದ್ದರೂ ನಿರ್ಲಕ್ಷ್ಯ
Web Stories