ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ (Belagavi City Corporation) ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಬಿಜೆಪಿ ರಣತಂತ್ರ ರೂಪಿಸಿದ್ದು, ಮರಾಠಾ ಸಮುದಾಯದ ಶೋಭಾ ಸೋಮನಾಚೆ ಮೇಯರ್, ರೇಷ್ಮಾ ಪಾಟೀಲ್ ಉಪಮೇಯರ್ ಆಗಿ ಆಯ್ಕೆ ಮಾಡುವ ಸಾಧ್ಯತೆ ಇದೆ.
Advertisement
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕನ್ನಡ ಭಾಷಿಕ ಸದಸ್ಯರಿಗೆ ಮೇಯರ್ ಸ್ಥಾನ ನೀಡಲು ಕನ್ನಡಪರ ಸಂಘಟನೆಗಳ ಆಗ್ರಹಿಸಿದ್ರೆ ಮತ್ತೊಂದೆಡೆ ಮೇಯರ್ ಸ್ಥಾನಕ್ಕಾಗಿ ಲಿಂಗಾಯತ ಮರಾಠಾ ಸಮುದಾಯ ಮಧ್ಯೆ ಪೈಪೋಟಿ ನಡೆಯುತ್ತಿದೆ. ಸದ್ಯ ಸಭಾನಾಯಕ ಸ್ಥಾನ ಕನ್ನಡ ಭಾಷಿಕ ಸದಸ್ಯ, ಲಿಂಗಾಯತ ಸಮುದಾಯಕ್ಕೆ ಸೇರಿದ್ದು ಮರಾಠಾ ಸಮುದಾಯ ಹಾಗೂ ಮರಾಠಿ ಭಾಷಿಕ ಸದಸ್ಯೆಗೆ ಮೇಯರ್, ಉಪಮೇಯರ್ ಸ್ಥಾನ ಬಹುತೇಕ ಖಚಿತವಾದಂತಿದೆ. ಮರಾಠಾ ಸಮುದಾಯದ ಶೋಭಾ ಸೋಮನಾಚೆ ಮೇಯರ್, ರೇಷ್ಮಾ ಪಾಟೀಲ್ ಉಪಮೇಯರ್ ಆಗಿ ಆಯ್ಕೆ ಸಾಧ್ಯತೆ ಇದೆ.
Advertisement
Advertisement
ಮೇಯರ್, ಉಪಮೇಯರ್ ಆಯ್ಕೆಗೂ ಮುನ್ನವೇ ಸಭಾನಾಯಕನ ಆಯ್ಕೆ ಮಾಡಲಾಗಿದ್ದು ಮಹಾನಗರ ಪಾಲಿಕೆಯ 36ನೇ ವಾರ್ಡ್ ಸದಸ್ಯ ರಾಜಶೇಖರ ಡೋಣಿ ಸಭಾನಾಯಕರನ್ನಾಗಿ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಾಲಿಕೆಯ ಸಭಾನಾಯಕನ ಆಯ್ಕೆ ಮಾಡಲಾಗಿದೆ. ಇದನ್ನೂ ಓದಿ: ಸ್ವಕ್ಷೇತ್ರದ ಗ್ರಾಮಸ್ಥರಿಂದ ಸಚಿವರಿಗೆ ತರಾಟೆ – ಕಕ್ಕಾಬಿಕ್ಕಿಯಾದ ಹಾಲಪ್ಪ ಆಚಾರ್
Advertisement
ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದ್ದು ಬೆಳಗಾವಿಯ ಸಂಕಮ್ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ ಒಮ್ಮತದ ಅಭ್ಯರ್ಥಿ ಆಯ್ಕೆಯ ಕಸರತ್ತು ನಡೆಸಲಾಗಿದೆ. ಇದನ್ನೂ ಓದಿ: ನಾವು ಅಡುಗೆ ಮಾಡುತ್ತಿದ್ದೇವೆ, ಅವರು ಬಡಿಸೋಕೆ ಬರುತ್ತಿದ್ದಾರೆ: ಸಿದ್ದರಾಮಯ್ಯ
ಮುಂಚೆ ಭಾಷಾ ಆಧಾರಿತ ಚುನಾವಣೆ ನಡೆದು ಎಂಇಎಸ್ ಗೆಲುವು ಸಾಧಿಸುತ್ತ ಬಂದಿತ್ತು. ಇದೇ ಮೊದಲ ಬಾರಿ ಪಕ್ಷದ ಚಿಹ್ನೆ ಮೇಲೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆದಿತ್ತು.58 ಸದಸ್ಯರ ಪೈಕಿ 35 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದೆ.2021ರ ಸೆ.3ರಂದು ಚುನಾವಣೆ ನಡೆದು ಸೆ.6ಕ್ಕೆ ಫಲಿತಾಂಶ ಬಂದಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k