ಪಾಟ್ನಾ: ಬಿಹಾರದಲ್ಲಿ ಎನ್‌ಡಿಎ ಕೂಟದ (NDA Alliance) ಸೀಟು ಹಂಚಿಕೆ ಸೂತ್ರ ಅಂತಿಮವಾಗಿದ್ದು, ಬಿಜೆಪಿ 17 ಹಾಗೂ ಜೆಡಿಯು (ಜನತಾ ದಳ ಯುನೈಟೆಡ್) ಪಕ್ಷ 16 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ (Vinod Tawde) ತಿಳಿಸಿದ್ದಾರೆ.
बिहार में सभी सीटों पर NDA पूरी ताकत से चुनाव लड़ेगी और हम सभी सीटों पर जीत दर्ज करेंगे।
बिहार में भाजपा 17 सीटों पर, जनता दल (यू) 16 सीटों पर, लोक जनशक्ति पार्टी 5 सीटों पर, हिंदुस्तानी आवाम मोर्चा 1 सीट पर और राष्ट्रीय लोक मोर्चा 1 सीट पर चुनाव लड़ेगी।
श्री @TawdeVinod pic.twitter.com/UAnjAzgSiT
— BJP (@BJP4India) March 18, 2024
Advertisement
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಟ್ಟು 40 ಲೋಕಸಭಾ ಕ್ಷೇತ್ರಗಳ ಬಲ ಹೊಂದಿರುವ ಬಿಹಾರದಲ್ಲಿ ಬಿಜೆಪಿ 17, ಜನತಾ ದಳ (ಯುನೈಟೆಡ್) (BJP And JDU) 16, ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ 5, ಜಿತನ್ ರಾಮ್ ಮಾಂಝಿ ನೇತೃತ್ವದ ಹಿಂದೂಸ್ತಾನಿ ಅವಾಮ್ ಮೋರ್ಚಾ ಮತ್ತು ಉಪೇಂದ್ರ ಕುಶ್ವಾಹಾ ನೇತೃತ್ವದ ರಾಷ್ಟ್ರೀಯ ಲೋಕ ಮೋರ್ಚಾ ತಲಾ ಒಂದು ಸ್ಥಾನಗಳಲ್ಲಿ ಸ್ಪರ್ಧಿಸಲಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆರು ರಾಜ್ಯಗಳ ಗೃಹ ಕಾರ್ಯದರ್ಶಿಗಳ ಪದಚ್ಯುತಿಗೊಳಿಸಿ ಚುನಾವಣಾ ಆಯೋಗ ಆದೇಶ!
Advertisement
Advertisement
ಕ್ಷೇತ್ರ ಹಂಚಿಕೆ:
ಸೀಟು ಹಂಚಿಕೆ ಮಾತುಕತೆಯ ಪ್ರಕಾರ, ಪಶ್ಚಿಮ ಚಂಪಾರಣ್, ಪೂರ್ವಿ ಚಂಪಾರಣ್, ಔರಂಗಾಬಾದ್, ಮಧುಬನಿ, ದರ್ಭಾಂಗ, ಮುಜಾಫರ್‌ಪುರ, ಮಹಾರಾಜ್‌ಗಂಜ್, ಸರನ್, ಬೇಗುಸರಾಯ್, ನಾವಡಾ, ಪಾಟ್ನಾ ಸಾಹಿಬ್, ಪಟ್ಲಿಪುತ್ರ, ಆರಾ, ಬಕ್ಸಾರ್ ಮತ್ತು ಸಸಾರಾಮ್ ಕ್ಷೇತ್ರಗಳಲ್ಲಿ ಬಿಜೆಪಿ, ವಾಲ್ಮೀಕಿನಗರ, ಸೀತಾಮಧಿ, ಝಂಜರ್‌ಪುರ್, ಸುಪೌಲ್, ಕಿಶನ್‌ಗಂಜ್, ಕತಿಹಾರ್, ಪೂರ್ಣಿಯಾ, ಮಾಧೇಪುರ, ಗೋಪಾಲ್‌ಗಂಜ್, ಸಿವಾನ್, ಭಾಗಲ್ಪುರ್, ಬಂಕಾ, ಮುಂಗೇರ್, ನಲಂದಾ, ಜೆಹಾನಾಬಾದ್ ಮತ್ತು ಶೆಯೋಹಾರ್ ಕ್ಷೇತ್ರಗಳಲ್ಲಿ ಜೆಡಿಯು ಸ್ಪರ್ಧಿಸಲಿದೆ. ವೈಶಾಲಿ, ಹಾಜಿಪುರ, ಸಮಸ್ತಿಪುರ, ಖಗರಿಯಾ ಮತ್ತು ಜಮುಯಿ ಕ್ಷೇತ್ರಗಳಲ್ಲಿ ಎಲ್‌ಜೆಪಿ ಸ್ಪರ್ಧಿಸಲಿದೆ ಎಂದು ತಿಳಿಸಿದ್ದಾರೆ. ಆದ್ರೆ ಬಿಹಾರ ಬಿಜೆಪಿ ಘಟಕದ ಮುಖ್ಯಸ್ಥ ಸಾಮ್ರಾಟ್ ಚೌಧರಿ ಎಲ್‌ಜೆಪಿ ಬಣದೊಂದಿಗೆ ಸೀಟು ಹಂಚಿಕೆ ಅಂತಿಮವಾಗಿಲ್ಲ, ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
Advertisement
ಲೋಕಸಭೆ ಚುನಾವಣೆ ಏಪ್ರಿಲ್ 19 ರಿಂದ ಜೂನ್ 1 ರವರೆಗೆ ಏಳು ಹಂತಗಳಲ್ಲಿ ನಡೆಯಲಿದ್ದು, ಜೂನ್ 4 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಇದನ್ನೂ ಓದಿ: ನಾನು ಹಿಂದೂ ಧರ್ಮದ ʼಶಕ್ತಿʼಯ ಉಪಾಸಕ- ರಾಗಾ ವಿರುದ್ಧ ಮೋದಿ ವಾಗ್ದಾಳಿ
40 ಸ್ಥಾನಗಳಲ್ಲಿ ಗೆಲುವು ಖಚಿತ:
ಈ ಬಾರಿ ಬಿಹಾರದ 40 ಕ್ಷೇತ್ರಗಳಲ್ಲಿಯೂ ಎನ್‌ಡಿಎ ಮೈತ್ರಿಕೂಟ ಗೆಲುವು ಸಾಧಿಸುತ್ತದೆ ಎಂಬ ವಿಶ್ವಾಸ ಇದೆ ಎಂದು ಜೆಡಿಯು ಸಂಜಯ್ ಝಾ ತಿಳಿಸಿದ್ದಾರೆ. ಇದನ್ನೂ ಓದಿ: Mandya Lok Sabha 2024: ಸಕ್ಕರೆ ನಾಡಿನ ಜನ ಸಿಹಿ ತಿನ್ನಿಸೋದು ಯಾರಿಗೆ?