ಬೆಂಗಳೂರು: ಶಬರಿಮಲೆ ದೇಗುಲಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನೀಡುವ ಸುಪ್ರೀಂಕೋರ್ಟ್ ಆದೇಶದ ಬಳಿಕ ಮಹಿಳೆಯರ ದೇಗುಲ ಪ್ರವೇಶಕ್ಕೆ ಭಕ್ತರಿಂದ ವಿರೋಧ ವ್ಯಕ್ತವಾಗಿತ್ತು. ಸಂಪ್ರದಾಯ ಮುರಿಯಲು ಅವಕಾಶ ಕೊಡುವುದಿಲ್ಲ ಅಂತ ಹಿಂದೂ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು.
ಕೇರಳ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಗಲಾಟೆ ನಡೆದಿತ್ತು. ಘಟನೆ ಬಳಿಕ ಕೇರಳ ಸರ್ಕಾರ ಸಂಪ್ರದಾಯದ ವಿರೋಧಿಯಾಗಿದೆ ಅಂತ ಕೇಸರಿ ಪಕ್ಷ ಆರೋಪಿಸಿತ್ತು. ಈ ಬೆನ್ನಲ್ಲೇ ಮಂಡಲಪೂಜೆಗೆ ಶಬರಿಮಲೆ ದೇಗುಲ ಓಪನ್ ಆಗಿರೋದ್ರಿಂದ ಇಂದಿನಿಂದ 5 ದಿನಗಳ ಕಾಲ ಕಾಸರಗೋಡುವಿನಿಂದ ಪತನಂತಿಟ್ಟದವರೆಗೆ ಬಿಜೆಪಿ ರಥಯಾತ್ರೆಯನ್ನು ಆರಂಭಿಸಿದೆ.
Advertisement
ಶಬರಿಮಲೆ ದೇವಸ್ಥಾನದ ಸಂಪ್ರದಾಯಗಳನ್ನು ಉಳಿಸಿ ಅನ್ನೋ ಘೋಷಣೆಯೊಂದಿಗೆ ಬಿಜೆಪಿ ರಥಯಾತ್ರೆ ಆರಂಭಿಸಿದೆ. ಕೇರಳದಲ್ಲಿ ನಾಸ್ತಿಕ ಸರ್ಕಾರವಿದ್ದು ಶಬರಿಮಲೆ ದೇಗುಲದ ಅಪೂರ್ವತೆಯನ್ನು ನಾಶ ಮಾಡಲು ಹೊರಟಿದೆ ಅಂತ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀಧರನ್ ಪಿಳ್ಳೈ ಕಿಡಿಕಾರಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv