ಹುಬ್ಬಳ್ಳಿ: ಬಿಜೆಪಿ (BJP) ಟಿಕೆಟ್ ಕೈ ತಪ್ಪುವ ಭೀತಿ ಹಿನ್ನೆಲೆಯಲ್ಲಿ ಮಾಜಿ ಶಾಸಕ ಹಾಗೂ ಯಡಿಯೂರಪ್ಪ (B.S.Yediyurappa) ಆಪ್ತ ಎಸ್ ಐ ಚಿಕ್ಕನಗೌಡರ (Chikkanagoudar) ಜನ್ಮ ದಿನದ ಸಮಾರಂಭದಲ್ಲಿ ಗೋಳಾಡಿ ಬಿಕ್ಕಿ ಬಿಕ್ಕಿ ಜನರೆದುರು ಕಣ್ಣೀರು ಹಾಕಿದ ಪ್ರಸಂಗ ನಡೆದಿದೆ.
Advertisement
ಈ ಬಾರಿ ಬಿಜೆಪಿ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದ್ದು, ಜನ್ಮ ದಿನದ ಸಮಾರಂಭದಲ್ಲಿ ಗೋಳಾಡಿ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ. ನನ್ನ ಪರಿಸ್ಥಿತಿ ಸರಿ ಇಲ್ಲ, ಆದರೂ ಇದು ಕಡೆ ಸಲ ಚುನಾವಣೆಗೆ ಸ್ಪರ್ಧಿಸುತ್ತೇನೆ. ನಿಮಗೆ ಕಾಲಿಗೆ ಬೀಳ್ತಿನಿ, ಕೈ ಮುಗಿತೀನಿ ಇದೊಂದು ಸಲ ಟಿಕೆಟ್ ನೀಡಿ ಅಂತ ಬಿಜೆಪಿ ವರಿಷ್ಠರನ್ನು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಇತ್ತೀಚೆಗೆ ಕುಂದಗೋಳದಲ್ಲಿ ನಡೆದ ತಮ್ಮ ಜನ್ಮದಿನದ ಸಮಾರಂಭದಲ್ಲಿ ಗೋಳಾಡಿ ಮತ್ತೆ ಟಿಕೆಟ್ ನೀಡುವಂತೆ ಸಾವಿರಾರು ಜನರ ಮುಂದೆ ವೇದಿಕೆ ಮೇಲೆ ಮಂಡಿಯೂರಿ ನಮಸ್ಕಾರ ಮಾಡಿದ್ದಾರೆ. ಇದನ್ನೂ ಓದಿ: ಬೇನಾಮಿ ಆಸ್ತಿ ಗಳಿಕೆ- ಸುನಿಲ್ ಕುಮಾರ್ ವಿರುದ್ಧ ಲೋಕಾಯುಕ್ತಕ್ಕೆ ಮುತಾಲಿಕ್ ದೂರು
Advertisement
Advertisement
ಕುಂದಗೋಳ (Kundgol) ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‍ಗಾಗಿ ಇಬ್ಬರ ನಡುವೆ ಬಿಗ್ ಫೈಟ್ ನಡೆಯುತ್ತಿದ್ದು, ಮಾಜಿ ಸಿಎಂ ಬಿಎಸ್‍ವೈ ಸಂಬಂಧಿ ಚಿಕ್ಕನಗೌಡರ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಆಪ್ತ ಎಮ್.ಆರ್.ಪಾಟೀಲ್ (M.R.Patil) ನಡುವೆ ಟಿಕೆಟ್‍ಗಾಗಿ ತೀವ್ರ ಪೈಪೋಟಿಯಿದೆ. ಟಿಕೆಟ್ ಪಾಟೀಲ್ ಗೆ ಬಹುತೇಕ ಖಚಿತವಾಗಿರುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಚಿಕ್ಕನಗೌಡರ ತಮ್ಮ ಅಳಲು ತೋಡಿಕೊಂಡಿದ್ದಾರೆ.
Advertisement
ಈ ಹಿಂದೆ ಒಟ್ಟು ಮೂರು ಬಾರಿ ಬಿಜೆಪಿಯಿಂದಲೇ ವಿಧಾನ ಸಭೆಗೆ ಆಯ್ಕೆಯಾಗಿದ್ದ ಚಿಕ್ಕನಗೌಡರ, ಕಳೆದ ಎರಡು ಬಾರಿ ಕಡಿಮೆ ಅಂತರದಿಂದ ಸೋಲು ಕಂಡಿದ್ದರು. ಇದನ್ನೂ ಓದಿ: ಲೋಕಾಯುಕ್ತ ಸರ್ವ ಸ್ವತಂತ್ರವಾಗಿ ಕೆಲಸ ಮಾಡ್ಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗ್ಲಿ: ಸಿಎಂ