ಮುಂಬೈ: ಥಾಣೆ ಜಿಲ್ಲೆಯ ಮೀರಾ- ಭಯಾಂದರ್ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿದ್ದು, 95 ಸ್ಥಾನಗಳ ಪೈಕಿ 65ರಲ್ಲಿ ಜಯಗಳಿಸಿದೆ.
ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರವಿದ್ದರೂ ಬಿಜೆಪಿ ಮತ್ತು ಶಿವಸೇನೆ ಪ್ರತ್ಯೇಕವಾಗಿ ಸ್ಫರ್ಧಿಸಿದ್ದ ಈ ಚುನಾವಣೆಯಲ್ಲಿ ಶಿವಸೇನೆ 22 ಸ್ಥಾನಗಳನ್ನು ಗೆದ್ದುಕೊಂಡಿದೆ.
Advertisement
2012ರ ಚುನಾವಣೆಯಲ್ಲಿ 26 ಸ್ಥಾನಗಳನ್ನು ಗೆದ್ದಿದ್ದ ಎನ್‍ಸಿಪಿ ಈ ಬಾರಿ ಒಂದು ಸ್ಥಾನವನ್ನು ಗೆದ್ದಿಲ್ಲ. ಕಾಂಗ್ರೆಸ್ ಫಲಿತಾಂಶ ಕುಸಿತವಾಗಿದ್ದು, ಕಳೆದ ಬಾರಿ 19 ಸ್ಥಾನ ಗೆದ್ದಿದ್ದರೆ ಈ ಬಾರಿ 10 ಸ್ಥಾನವನ್ನು ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಗಿದೆ.
Advertisement
ಕಳೆದ ಚುನಾವಣೆಯಲ್ಲಿ 1 ಸ್ಥಾನವನ್ನು ಗೆದ್ದಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್‍ಎಸ್) ಈ ಬಾರಿ ಶೂನ್ಯ ಸಂಪಾದಿಸಿದೆ. 2012ರ ಚುನಾವಣೆಯಲ್ಲಿ ಬಿಜೆಪಿ 32 ಸ್ಥಾನವನ್ನು ಗೆದ್ದಿದ್ದರೆ, ಶಿವಸೇನೆ 15 ಸ್ಥಾನಗಳನ್ನು ಗೆದ್ದುಕೊಂಡಿತ್ತು.
Advertisement
ಭಾನುವಾರ ನಡೆದ ಚುನಾವಣೆಯಲ್ಲಿ 509 ಅಭ್ಯರ್ಥಿಗಳು ಕಣದಲ್ಲಿ ಸ್ಪರ್ಧಿಸಿದ್ದರು. ಸರ್ಕಾರದ ಅಭಿವೃದ್ಧಿ ನೋಡಿ ಜನ ಬಿಜೆಪಿಯನ್ನು ಗೆಲ್ಲಿಸಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಫಲಿತಾಂಶದ ಬಳಿಕ ಟ್ವೀಟ್ ಮಾಡಿದ್ದಾರೆ.
Advertisement
Huge win for @BJP4India at #MiraBhayandar !
Now, development is certain.
We will certainly live up to the expectations of people. pic.twitter.com/I9b0odW5FU
— Devendra Fadnavis (@Dev_Fadnavis) August 21, 2017
Congratulations to leaders&karyakartas for spectacular win!
I thank people of #MiraBhayandar for having faith in us!
I assure speedy devpt.
— Devendra Fadnavis (@Dev_Fadnavis) August 21, 2017
#MiraBhayandar Municipal Corptn election victory is because of wave of 'vishwas & vikas' created by PM @narendramodi ji &team BJP's efforts!
— Devendra Fadnavis (@Dev_Fadnavis) August 21, 2017