ದಿಸ್ಪುರ: ಅಸ್ಸಾಂನ ಗುವಾಹಟಿ ಪಾಲಿಕೆ ಚುನಾವಣೆಯ ಮತ ಎಣಿಕೆ ನಡೆದಿದ್ದು, ಬಿಜೆಪಿ ಮತ್ತು ಮಿತ್ರಪಕ್ಷ ಅಸೊಮ್ ಗಾನ ಪರಿಷದ್ (ಎಜಿಪಿ) ಕ್ಲೀನ್ ಸ್ವೀಪ್ ಸಾಧಿಸಿದೆ. 60ರ ಪೈಕಿ 58 ವಾರ್ಡ್‌ಗಳಲ್ಲಿ ಭರ್ಜರಿ ಜಯ ಸಾಧಿಸಿದೆ.
ಅಸ್ಸಾಂನ ಅತಿದೊಡ್ಡ ನಗರ ಮತ್ತು ಈಶಾನ್ಯ ಭಾಗದ ಗುವಾಹಟಿಯಲ್ಲಿ ಬಿಜೆಪಿ 52 ಸ್ಥಾನಗಳನ್ನು ಗಳಿಸಿದರೆ, ಎಜಿಪಿ 6 ಸ್ಥಾನಗಳನ್ನು ಗೆದ್ದಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷವು ಈ ಹಿಂದೆ ಕಳೆದ ತಿಂಗಳು ನಡೆದ ನಗರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಇದನ್ನೂ ಓದಿ: ಟಿಕ್‍ಟಾಕ್, ಪಬ್‍ಜಿ ಯುವಕರ ದಾರಿ ತಪ್ಪಿಸುತ್ತೆ – ಬ್ಯಾನ್ ಮಾಡಿದ ತಾಲಿಬಾನ್
Advertisement
Advertisement
ಬಿಜೆಪಿಯ ನಂತರ ರಾಜ್ಯ ವಿಧಾನಸಭೆಯಲ್ಲಿ ಎರಡನೇ ಅತಿದೊಡ್ಡ ಪಕ್ಷವಾದ ವಿರೋಧ ಪಕ್ಷ ಕಾಂಗ್ರೆಸ್ ಒಂದೇ ಒಂದು ಸ್ಥಾನ ಗೆಲ್ಲುವಲ್ಲಿ ವಿಫಲವಾಗಿದೆ. ಆದರೆ ಆಮ್ ಆದ್ಮಿ ಪಕ್ಷ (ಎಎಪಿ) ಗುವಾಹಟಿಯಲ್ಲಿ ಒಂದು ಸ್ಥಾನವನ್ನು ಗೆಲ್ಲುವ ಮೂಲಕ ಖಾತೆ ತೆರೆದಿದೆ. ಅಸ್ಸಾಂ ಜಾತಿಯ ಪಕ್ಷ (ಎಜೆಪಿ) ಕೂಡ ಒಂದು ಸ್ಥಾನ ಗೆದ್ದಿದೆ.
Advertisement
ಈ ಬಾರಿ ಒಟ್ಟು ವಾರ್ಡ್‌ಗಳ ಸಂಖ್ಯೆಯನ್ನು 60ಕ್ಕೆ ಹೆಚ್ಚಿಸಲಾಗಿದ್ದು, ಶೇ.50ರಷ್ಟು ಸ್ಥಾನ ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾಗಿದೆ. 60 ವಾರ್ಡ್‌ಗಳಿಗೆ ಒಟ್ಟು 200 ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿಯ ಮೂವರು ಅಭ್ಯರ್ಥಿಗಳು (ವಾರ್ಡ್ 5, 6 ಮತ್ತು 22) ಅವಿರೋಧವಾಗಿ ಗೆದ್ದಿದ್ದಾರೆ. ಇದನ್ನೂ ಓದಿ: ಹನುಮಾನ್ ಚಾಲೀಸಾ ವಿಚಾರಕ್ಕೆ ಗದ್ದಲ ಸೃಷ್ಟಿ- 6 ಮಂದಿ ಶಿವಸೇನಾ ಕಾರ್ಯಕರ್ತರು ಅರೆಸ್ಟ್
Advertisement
ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಿಗೆ ಐತಿಹಾಸಿಕ ಗೆಲುವು ನೀಡಿದ್ದಕ್ಕಾಗಿ ನಾನು ಗುವಾಹಟಿಯ ಜನರಿಗೆ ತಲೆಬಾಗುತ್ತೇನೆ. ಈ ಬೃಹತ್ ಜನಾದೇಶದೊಂದಿಗೆ, ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ನಮ್ಮ ಅಭಿವೃದ್ಧಿ ಪಯಣದಲ್ಲಿ ಜನರು ತಮ್ಮ ನಂಬಿಕೆಯನ್ನು ಪುನರುಚ್ಚರಿಸಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ.