ನವದೆಹಲಿ: ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ತೆಲಂಗಾಣದ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಅವರನ್ನು ಪಕ್ಷದ ಕೇಂದ್ರ ಶಿಸ್ತು ಪಾಲನಾ ಸಮಿತಿ ಅಮಾನತುಗೊಳಿಸಿದೆ.
ಪ್ರವಾದಿ ಕುರಿತು ಅವಹೇಳನಕಾರಿ ಕಾಮೆಂಟ್‌ಗಳಿಗಾಗಿ ರಾಜಾ ಸಿಂಗ್ ವಿರುದ್ಧ ಇಂದು ಬೆಳಗ್ಗೆ ಪ್ರಕರಣವನ್ನು ದಾಖಲಿಸಲಾಗಿತ್ತು. ನಂತರ ಅವರನ್ನು ಬಂಧಿಸಲಾಯಿತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ, 295, ಮತ್ತು 505 ರ ಅಡಿಯಲ್ಲಿ ದಬೀರ್‌ಪುರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನ – ತೆಲಂಗಾಣದ ಬಿಜೆಪಿ ಶಾಸಕ ಅರೆಸ್ಟ್
Advertisement
Advertisement
ಶಾಸಕನಿಗೆ ಅಮಾನತು ಆದೇಶ ಪತ್ರ ರವಾನಿಸಿರುವ ಬಿಜೆಪಿ, ನಿಮ್ಮ ಹೇಳಿಕೆಗಳು ಪಕ್ಷದ ನೀತಿಗೆ ವಿರುದ್ಧವಾಗಿವೆ ಎಂದು ಎಂದು ತಿಳಿಸಿದೆ.
Advertisement
ನೀವು ವಿವಿಧ ವಿಷಯಗಳಲ್ಲಿ ಪಕ್ಷದ ನಿಲುವಿಗೆ ವಿರುದ್ಧವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೀರಿ, ಇದು ನಿಯಮ 115ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.
Advertisement
ಶಿಸ್ತು ಪಾಲನಾ ಸಮಿತಿಯ ಮುಖ್ಯಸ್ಥ ಓಂ ಪಾಠಕ್ ಅವರು ಬರೆದಿರುವ ಅಮಾನತು ಪತ್ರದಲ್ಲಿ, ನಿಮ್ಮನ್ನು ಪಕ್ಷದಿಂದ ಮತ್ತು ನಿಮ್ಮ ಜವಾಬ್ದಾರಿಗಳು/ನಿಯೋಜನೆಗಳಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ನಿಮಗೆ ತಿಳಿಸಲು ನನಗೆ ಸೂಚಿಸಲಾಗಿದೆ. ನಿಮ್ಮನ್ನು ಪಕ್ಷದಿಂದ ಏಕೆ ಹೊರಹಾಕಬಾರದು ಎಂಬ ಬಗ್ಗೆ 10 ದಿನಗಳಲ್ಲಿ ಕಾರಣವನ್ನು ನೀಡಿ. ನಿಮ್ಮ ಉತ್ತರ ಸೆ.2ರೊಳಗೆ ಸಂಬಂಧಪಟ್ಟವರಿಗೆ ತಲುಪಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: BJPಗೆ ಶಾಂತಿ ನೆಲೆಸುವುದು ಇಷ್ಟವಿಲ್ಲ, ಪ್ರವಾದಿ – ಮುಸ್ಲಿಮರನ್ನು ದ್ವೇಷಿಸುತ್ತಲೇ ಇದೆ: ಓವೈಸಿ ಕಿಡಿ
ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡುವ ವೀಡಿಯೋವನ್ನು ಸಿಂಗ್ ಬಿಡುಗಡೆ ಮಾಡಿದ್ದರು. ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸೋಮವಾರ ರಾತ್ರಿ ನಗರ ಪೊಲೀಸ್ ಕಮಿಷನರ್ ಸಿ.ವಿ.ಆನಂದ್ ಅವರ ಕಚೇರಿ ಮತ್ತು ಹೈದರಾಬಾದ್‌ನ ಇತರ ಭಾಗಗಳಲ್ಲಿ ಪ್ರತಿಭಟನೆಗಳು ನಡೆದವು.