– ವಯನಾಡು ಕರ್ನಾಟಕಕ್ಕೆ ಸೇರಿತೇ? ಕೆಎಸ್‌ಟಿಡಿಸಿ ಕೇರಳಕ್ಕೆ ಸೇರಿದ್ಯಾ ಅಂತ ತರಾಟೆ
ಬೆಂಗಳೂರು: ಕೆಎಸ್‌ಟಿಡಿಸಿಯಿಂದ (KSTDC) ವಯನಾಡು (Wayanad) ಪ್ರವಾಸ ಪ್ಯಾಕೇಜ್ ಘೋಷಿಸಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.
ನಮ್ಮ KSTDC ಇರುವುದು ಕರ್ನಾಟಕಕ್ಕೋ, ಕೇರಳಕ್ಕೋ ತಿಳಿಯುತ್ತಿಲ್ಲ! ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಹೆಚ್.ಕೆ.ಪಾಟೀಲ್ ಅವರೇ, ನಮ್ಮ ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ ಕಾಣಲಿಲ್ಲವೇ? ನಿಮ್ಮ ಪ್ರಿಯಾಂಕಾ ಗಾಂಧಿಯನ್ನು ಮೆಚ್ಚಿಸಲು ನಮ್ಮ ಕರುನಾಡನ್ನೇ ಕಡೆಗಣಿಸುತ್ತಿದ್ದೀರಾ? ವಯನಾಡಿನ ಜನರಿಗೆ ಮನೆ, ಆನೆ ದಾಳಿಯಿಂದ ಸತ್ತವರಿಗೆ ಪರಿಹಾರ, ಇಷ್ಟೆಲ್ಲಾ ಮಾಡಿದ ಮೇಲೆ ಈಗ ವಯನಾಡನ್ನೇ ಕರ್ನಾಟಕಕ್ಕೆ ಸೇರಿಸಲು ಹೇಳಿ. ಏಕೆಂದರೆ ನಿಮ್ಮ ಆಡಳಿತ ಈಗ ಕರ್ನಾಟಕ ಸರ್ಕಾರಕ್ಕಿಂತಲೂ ವಯನಾಡು ಸೇವಾ ಕೇಂದ್ರದಂತಾಗಿದೆ ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿ ಸರ್ಕಾರವನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ಇದನ್ನೂ ಓದಿ: ಬಿಜೆಪಿಯವರಿಗೆ ದುರ್ಬುದ್ಧಿ – ವಯನಾಡ್ ಪ್ರಿಯಾಂಕಾ ಗಾಂಧಿ ಕ್ಷೇತ್ರ ಅಂತ ಆರೋಪ ಮಾಡ್ತಿದ್ದಾರೆ: ರಾಮಲಿಂಗಾರೆಡ್ಡಿ
ನಮ್ಮ KSTDC ಇರುವುದು ಕರ್ನಾಟಕಕ್ಕೋ, ಕೇರಳಕ್ಕೋ ತಿಳಿಯುತ್ತಿಲ್ಲ!
ಸಿಎಂ @siddaramaiah ಮತ್ತು ಸಚಿವ @HKPatilINC ಅವರೇ, ನಮ್ಮ ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ ಕಾಣಲಿಲ್ಲವೇ? ನಿಮ್ಮ ಪ್ರಿಯಾಂಕಾ ಗಾಂಧಿಯನ್ನು ಮೆಚ್ಚಿಸಲು ನಮ್ಮ ಕರುನಾಡನ್ನೇ ಕಡೆಗಣಿಸುತ್ತಿದ್ದೀರಾ?
ವಯನಾಡಿನ ಜನರಿಗೆ ಮನೆ, ಆನೆ ದಾಳಿಯಿಂದ… pic.twitter.com/ZPe5KHCsOf
— BJP Karnataka (@BJP4Karnataka) October 29, 2025
ಆರ್.ಅಶೋಕ್ ಎಕ್ಸ್ ಪೋಸ್ಟ್‌ನಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ವಯನಾಡಿನ ಜಿಲ್ಲಾಧಿಕಾರಿ ಮತ್ತು ನಿಧಿ ಸಂಗ್ರಹಕಾರನಂತೆ ವರ್ತಿಸುವ ಮುಖ್ಯಮಂತ್ರಿಯನ್ನು ಕರ್ನಾಟಕ ಎಷ್ಟು ದಿನ ಸಹಿಸಿಕೊಳ್ಳುತ್ತದೆ. ನೀವು ಕರ್ನಾಟಕದ ತೆರಿಗೆದಾರರ 10 ಕೋಟಿ ಹಣವನ್ನು ವಯನಾಡಿಗೆ ಮಿಂಚಿನ ವೇಗದಲ್ಲಿ ಹಸ್ತಾಂತರಿಸಿದ್ದೀರಿ. ಆನೆಯಿಂದ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ 15 ಲಕ್ಷ ದಾನ ಮಾಡಿದ್ದೀರಿ. ಭೂಕುಸಿತದ ನಂತರ ವಯನಾಡಿನಲ್ಲಿ 100 ಮನೆಗಳನ್ನು ನಿರ್ಮಿಸುವುದಾಗಿ ನೀವು ಘೋಷಿಸಿದ್ದೀರಿ. ನೀವು ವಯನಾಡಿನ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕರ್ನಾಟಕದ ಸ್ವಂತ ಪ್ರವಾಸೋದ್ಯಮ ನಿಗಮವಾದ ಏSಖಿಆಅ ಅನ್ನು ಬಳಸಿದ್ದೀರಿ ಎಂದು ಕಿಡಿಕಾರಿದ್ದಾರೆ.
ಉತ್ತರ ಕರ್ನಾಟಕ ಮುಳುಗುತ್ತಿದೆ, ರೈತರು ಬಳಲುತ್ತಿದ್ದಾರೆ, ಮನೆಗಳು ಕೊಚ್ಚಿ ಹೋಗಿವೆ, 12.5 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ, ಪರಿಹಾರವು ಇನ್ನೂ ಫೈಲ್‌ಗಳು, ಸಮೀಕ್ಷೆಗಳು, ನೆಪಗಳು, ಭಾಷಣಗಳು ಮತ್ತು ಫೋಟೋ-ಆಪ್‌ಗಳಲ್ಲಿ ಸಿಲುಕಿಕೊಂಡಿದೆ. ಕಲಬುರಗಿ, ರಾಯಚೂರು, ಯಾದಗಿರಿ, ಬೀದರ್, ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿಗೆ ಪರಿಹಾರ ಮತ್ತು ಪ್ರವಾಹ ಪರಿಹಾರದ ಕೋಟಿ ಎಲ್ಲಿದೆ? ತುರ್ತು ಎಲ್ಲಿದೆ? ನಿಮ್ಮ ಆದ್ಯತೆಗಳೇನು? ಇದನ್ನೂ ಓದಿ: ನಾನು ಯಾವ್ದೇ ಭ್ರಷ್ಟಾಚಾರ ಮಾಡಿಲ್ಲ, ಬಿಜೆಪಿಯವರು ದಾಖಲೆ ಕೊಟ್ಟರೆ ಪರಿಶೀಲಿಸ್ತಿನಿ – ಯು.ಟಿ. ಖಾದರ್
ಸಿಎಂ @siddaramaiah ಅವರೇ,
ಕೇರಳದ ಶಾಸಕನಂತೆ, ವಯನಾಡಿನ ಚಂದಾ ವಸೂಲಿಗಾರನಂತೆ ವರ್ತಿಸುವ ಮುಖ್ಯಮಂತ್ರಿಯನ್ನು ಕರ್ನಾಟಕದ ಜನತೆ ಇನ್ನೆಷ್ಟು ದಿನ ಸಹಿಸಬೇಕು?
✔️ ಎರಡು ತಿಂಗಳ ಹಿಂದಷ್ಟೇ ಕನ್ನಡಿಗರ ತೆರಿಗೆ ಹಣದಿಂದ ₹10 ಕೋಟಿ ರೂಪಾಯಿಯನ್ನ ವಯನಾಡಿಗೆ ಬಿಡುಗಡೆ ಮಾಡಿದಿರಿ.
✔️ ಕೇರಳದಲ್ಲಿ ಆನೆ ದಾಳಿಗೆ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ… https://t.co/kZGo7WYw05
— R. Ashoka (@RAshokaBJP) October 30, 2025
ನಮ್ಮ ಸ್ವಂತ ವಿಪತ್ತು ಪೀಡಿತ ರೈತರಿಗೆ ಹಣವನ್ನು ಸಾಗಿಸಿದ್ದಕ್ಕಿಂತ ವೇಗವಾಗಿ ನೀವು ಬೇರೆ ರಾಜ್ಯಕ್ಕೆ ಹಣವನ್ನು ಸಾಗಿಸಿದ್ದೀರಿ. ಇದು ದಾನವಲ್ಲ. ಇದು ಕುರ್ಚಿಯನ್ನು ಉಳಿಸಿಕೊಳ್ಳಲು ಹೈಕಮಾಂಡ್‌ನ ಸಮಾಧಾನ. ನಕಲಿ ಗಾಂಧಿ ಕುಟುಂಬಕ್ಕೆ ತಲೆಬಾಗುವ, ಹೈಕಮಾಂಡ್‌ನ ಎಟಿಎಂನಂತೆ ನಮ್ಮ ಖಜಾನೆಯನ್ನು ಖರ್ಚು ಮಾಡುವ ಮತ್ತು ತನ್ನ ಮೇಜಿನ ಮೇಲೆ ಆಹಾರವನ್ನು ಇಡುವ ತನ್ನದೇ ರಾಜ್ಯದ ರೈತರನ್ನು ಮರೆತುಬಿಡುವ ಮುಖ್ಯಮಂತ್ರಿ ಕರ್ನಾಟಕಕ್ಕೆ ಅಗತ್ಯವಿಲ್ಲ. ನಾವು ಕರ್ನಾಟಕದ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದ್ದೇವೆ. ದೆಹಲಿಯ ಕೈಗೊಂಬೆಯಲ್ಲ, ವಯನಾಡಿನ ಬ್ರಾಂಡ್ ಅಂಬಾಸಿಡರ್ ಅಲ್ಲ. ಈಗಲೇ ಪೂರ್ಣ ಪರಿಹಾರವನ್ನು ಬಿಡುಗಡೆ ಮಾಡಿ. ನಕಲಿ ಗಾಂಧಿ ಕುಟುಂಬವನ್ನು ಮೆಚ್ಚಿಸಲು ಕರ್ನಾಟಕದ ಹಣವನ್ನು ಲೂಟಿ ಮಾಡುವುದನ್ನು ನಿಲ್ಲಿಸಿ. ಕರ್ನಾಟಕ ಮೊದಲು. ವಯನಾಡ್ ಮೊದಲು ಅಲ್ಲ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕಾದ ಕೆಎಸ್‌ಟಿಡಿಸಿ ವಯನಾಡಿಗೆ ಕನ್ನಡಿಗರನ್ನು ಕರೆಯುತ್ತಿದೆ. ವಯನಾಡು ಕರ್ನಾಟಕಕ್ಕೆ ಸೇರಿತೇ? ಅಥವಾ ಕೆಎಸ್‌ಟಿಡಿಸಿ ಕೇರಳದ್ದಾಯಿತೇ? ತಮ್ಮ ಪಕ್ಷದ ಅಧಿನಾಯಕಿ ಪ್ರಿಯಾಂಕಾ ಗಾಂಧಿಯವರನ್ನು ಮೆಚ್ಚಿಸಲು ಕನ್ನಡ ನಾಡಿನ ಗೌರವವನ್ನು ಅಡವಿಡಲು ಹೊರಟಿದೆ ಕಾಂಗ್ರೆಸ್ ಸರ್ಕಾರ ಎಂದು ಸಿ.ಟಿ.ರವಿ ಆಕ್ರೋಶ ಹೊರಹಾಕಿದ್ದಾರೆ.
 


 
		 
		 
		 
		 
		
 
		 
		 
		 
		