Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಾಜಸ್ಥಾನದಲ್ಲಿ ನಿರುದ್ಯೋಗಿ ಯುವತಿಯರಿಗೆ 2,500 ರೂ. ಇನ್ನೂ ನೀಡಿಲ್ಲ ಯಾಕೆ – ಕಾಂಗ್ರೆಸ್‌ಗೆ ಬಿಜೆಪಿ ಪ್ರಶ್ನೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ರಾಜಸ್ಥಾನದಲ್ಲಿ ನಿರುದ್ಯೋಗಿ ಯುವತಿಯರಿಗೆ 2,500 ರೂ. ಇನ್ನೂ ನೀಡಿಲ್ಲ ಯಾಕೆ – ಕಾಂಗ್ರೆಸ್‌ಗೆ ಬಿಜೆಪಿ ಪ್ರಶ್ನೆ

Bengaluru City

ರಾಜಸ್ಥಾನದಲ್ಲಿ ನಿರುದ್ಯೋಗಿ ಯುವತಿಯರಿಗೆ 2,500 ರೂ. ಇನ್ನೂ ನೀಡಿಲ್ಲ ಯಾಕೆ – ಕಾಂಗ್ರೆಸ್‌ಗೆ ಬಿಜೆಪಿ ಪ್ರಶ್ನೆ

Public TV
Last updated: January 16, 2023 5:28 pm
Public TV
Share
3 Min Read
Priyanka Gandhi 5
SHARE

ಬೆಂಗಳೂರು: ಕಾಂಗ್ರೆಸ್ (Congress) ಆಡಳಿತ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ದೌರ್ಜನ್ಯಗಳನ್ನೇ ಪ್ರಶ್ನಿಸದ ಪ್ರಿಯಾಂಕಾ ಗಾಂಧಿ (Priyanka Gandhi) ಅವರು ಈಗ `ಗೃಹಲಕ್ಷ್ಮೀ’ ಯೋಜನೆ ಜಾರಿಗೊಳಿಸುವ ಭರವಸೆ ನೀಡಿರೋದು `ಕಾಂಗ್ರೆಸ್ ಗ್ಯಾರಂಟಿ ಸುಳ್ಳಿನ ಸರಣಿ’ಯ ಮುಂದುವರಿದ ಭಾಗ ಎಂದು ಬಿಜೆಪಿ (BJP) ತಿರುಗೇಟು ನೀಡಿದೆ.

priyanka gandhi 4

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಮಹಿಳಾ ಕಾಂಗ್ರೆಸ್‌ನ ‘ನಾ ನಾಯಕಿ’ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಾಜ್ಯ ಕಾಂಗ್ರೆಸ್‌ನ ಮಹಿಳಾ ಪ್ರಣಾಳಿಕೆಯ ಕೆಲವು ಪ್ರಮುಖ ವಿಚಾರಗಳನ್ನು ಘೋಷಣೆ ಮಾಡಿದರು. ಇದೇ ವೇಳೆ? ಗೃಹ ಲಕ್ಷ್ಮಿ’ ಬಾಂಡ್ ಅನ್ನು ಪ್ರಿಯಾಂಕಾ ಗಾಂಧಿ ಪ್ರದರ್ಶಿಸಿದರು. ಇದಕ್ಕೆ ಸರಣಿ ಟ್ವೀಟ್‌ಗಳ ಮೂಲಕ ಬಿಜೆಪಿ ತಿರುಗೇಟು ನೀಡಿದೆ. ಇದನ್ನೂ ಓದಿ: ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ, ಮಹಿಳೆಗೆ ಪ್ರತಿ ತಿಂಗಳು 2,000 ರೂ.: ಪ್ರಿಯಾಂಕಾ ಗಾಂಧಿ

Priyanka Gandhi

ಟ್ವೀಟ್‌ನಲ್ಲಿ ಏನಿದೆ?
ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಸಬಲಿಕರಣ ಬಿಡಿ, ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯಗಳನ್ನೇ ಎಂದೂ ಪ್ರಶ್ನಿಸದ ಪ್ರಿಯಾಂಕಾ ಗಾಂಧಿ ಇದೀಗ ಗೃಹಲಕ್ಷ್ಮಿ ಎಂಬ ಯೋಜನೆ ಜಾರಿಗೊಳಿಸುತ್ತೇವೆ ಎಂದಿರುವುದು ಕಾಂಗ್ರೆಸ್’ನ ಗ್ಯಾರಂಟಿ ಸುಳ್ಳಿನ ಸರಣಿಯ ಮುಂದುವರಿದ ಭಾಗ. ಈ ಡೋಂಗಿತನದ ಅರಿವು ರಾಜ್ಯದ ಜನರಿಗಿದೆ.

ನಿರುದ್ಯೋಗಿ ಯುವಕ ಯುವತಿಯರಿಗೆ 2,500 ರೂ. ಮಾಸಾಶನ ಕೊಡುತ್ತೇವೆ ಎಂದು ಛತ್ತೀಸ್‌ಘಡದಲ್ಲಿಯೂ ಇದೇ ಕಾಂಗ್ರೆಸ್ ಪಕ್ಷ ಹೇಳಿತ್ತು. ಆದರೆ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ಸಿಗರಿಗೆ ಅದರ ನೆನಪೇ ಇರಲಿಲ್ಲ. ವಿಧವೆಯರಿಗೆ ತಿಂಗಳಿಗೆ 1,000 ಮಾಸಿಕ ಪಿಂಚಣಿ ಕತೆಯೂ ಅಷ್ಟೇ, ಚುನಾವಣಾ ಘೋಷಣೆಗೆ ಮಾತ್ರ ಸೀಮಿತ.

5/6

— BJP Karnataka (@BJP4Karnataka) January 16, 2023

ಛತ್ತೀಸ್ಗಡದಲ್ಲಿ ನಿರುದ್ಯೋಗಿ ಯುವತಿಯರಿಗೆ 2,500 ರೂ. ಮಾಸಿಕ ಭತ್ಯೆ ಕೊಡ್ತಿಲ್ಲ, ವಿಧವೆಯರಿಗೆ ಮಾಸಿಕ 1,000 ರೂ. ಪೆನ್ಷನ್ ಕೊಡ್ತಿಲ್ಲ, ಹಿಮಾಚಲ ಪ್ರದೇಶದಲ್ಲಿ 18-60 ವರ್ಷದ ಮಹಿಳೆಯರಿಗೆ 1,500ರೂ. ನೆರವು – ಸಿಕ್ತಿಲ್ಲ. ರಾಜಸ್ಥಾನದಲ್ಲಿ ನಿರುದ್ಯೋಗಿ ಯುವತಿಯರಿಗೆ 3,500 ರೂ. ಮಾಸಿಕ ನಿರುದ್ಯೋಗ ಭತ್ಯೆ, ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಯಾವುದೂ ಇಲ್ಲ. ಇದನ್ನೂ ಓದಿ: ಚುನಾವಣೆ ಬಂದ್ಮೇಲೆ ಬಿಜೆಪಿಯವರು ಮಸೀದಿ, ಮಂದಿರ, ಪಾಕಿಸ್ತಾನ ಅಷ್ಟೇ ತೋರಿಸೋದು: ಸತೀಶ್ ಜಾರಕಿಹೊಳಿ

ಈ ಮೊದಲು‌ ಕಾಲೇಜು ವಿದ್ಯಾರ್ಥಿಗಳನ್ನು ನೀವು ವಂಚಿಸಿದ್ದೀರಿ. ವಿದ್ಯಾರ್ಥಿಗಳಿಗೆ ‌ಕಾಲೇಜಿಗೆ ಹೋಗಲು ಅನುಕೂಲವಾಗಲು ಬಡ್ಡಿ ರಹಿತ ಸಾಲ ನೀಡುತ್ತೇವೆ ಎಂದು @INCIndia ಮಧ್ಯಪ್ರದೇಶದಲ್ಲಿ‌ ಹೇಳಿತ್ತು. ಚುನಾವಣೆ ಕಳೆದ ಮೇಲೆ ಅದರ ಬಗ್ಗೆ ತುಟಿಪಿಟಿಕ್ ಎನ್ನಲಿಲ್ಲ. ಮಹಿಳೆಯರಿಗೆ ನೀಡಿದ ಸ್ಮಾರ್ಟ್ ಫೋನ್ ಭರವಸೆಯೂ ಹಾಗೆಯೇ.

4/6

— BJP Karnataka (@BJP4Karnataka) January 16, 2023

ಅಳಿವು ಉಳಿವಿನ ಕೊನೆಯ ಹಂತಕ್ಕೆ ತಲುಪಿದಾಗ ಸುಳ್ಳು ಹೇಳುವುದು ಮತ್ತು ಹುಸಿ ಭರವಸೆ ನೀಡುವುದು ಸಹಜವಾಗಿ ಮೈಗೂಡುತ್ತದಂತೆ. ಕರ್ನಾಟಕ ಕಾಂಗ್ರೆಸ್ ಪರಿಸ್ಥಿತಿ ಹಾಗೆಯೇ ಆಗಿದೆ. ಚುನಾವಣೆಗೂ ಮುನ್ನ ಯೋಜನೆಗಳ ಸಾಧ್ಯಾಸಾಧ್ಯತೆ ಅರಿಯದೆ ಪ್ರಚಾರಕ್ಕಾಗಿ ಘೋಷಿಸುವುದು ಈಗ ಕಾಂಗ್ರೆಸ್‌ಗೆ ಅಭ್ಯಾಸವಾಗಿಬಿಟ್ಟಿದೆ.

ಅಭ್ಯಾಸ ಬಲದಲ್ಲಿ ಮುಂದುವರಿದಿರುವ ರಾಷ್ಟ್ರೀಯ ಕಾಂಗ್ರೆಸ್ ಕರ್ನಾಟಕದಲ್ಲೂ ಅದನ್ನೇ ಮಾಡುತ್ತಿದೆ. ಪ್ರಚಾರಕ್ಕೆ ಬೇಕಾಗಿ ಗೃಹಲಕ್ಷ್ಮಿ ಎಂಬ ಪರಿಕಲ್ಪನೆಯನ್ನು ಪ್ರಿಯಾಂಕಾ ಗಾಂಧಿ ಹರಿಬಿಟ್ಟಿದ್ದಾರೆ. ಉದ್ಯೋಗ ಸೃಷ್ಟಿಯ ಕಡೆಗೆ ರಾಜ್ಯ ದಾಪುಗಾಲಿಡುತ್ತಿರುವಾಗ ಕರ್ನಾಟಕ ಕಾಂಗ್ರೆಸ್ ನಿರುದ್ಯೋಗ ಬಯಸುತ್ತಿದೆ.

ಛತ್ತೀಸ್ಗಡ: ನಿರುದ್ಯೋಗಿ ಯುವತಿಯರಿಗೆ ₹2,500 ಮಾಸಿಕ ಭತ್ಯೆ – ❌
ವಿಧವೆಯರಿಗೆ ಮಾಸಿಕ ₹1,000 ಪೆನ್ಷನ್ – ❌

ಹಿಮಾಚಲ: 18-60 ವರ್ಷದ ಮಹಿಳೆಯರಿಗೆ ₹1,500 ನೆರವು – ❌

ರಾಜಸ್ಥಾನ: ನಿರುದ್ಯೋಗಿ ಯುವತಿಯರಿಗೆ ₹3,500 ಮಾಸಿಕ ನಿರುದ್ಯೋಗ ಭತ್ಯೆ – ❌
ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ -❌#PriyankaKeFakePromises
1/6

— BJP Karnataka (@BJP4Karnataka) January 16, 2023

ಈ ಮೊದಲು ಕಾಲೇಜು ವಿದ್ಯಾರ್ಥಿಗಳನ್ನು ನೀವು ವಂಚಿಸಿದ್ದೀರಿ. ವಿದ್ಯಾರ್ಥಿಗಳಿಗೆ ಕಾಲೇಜಿಗೆ ಹೋಗಲು ಅನುಕೂಲವಾಗಲು ಬಡ್ಡಿ ರಹಿತ ಸಾಲ ನೀಡುತ್ತೇವೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಮಧ್ಯಪ್ರದೇಶದಲ್ಲಿ ಹೇಳಿತ್ತು. ಚುನಾವಣೆ ಕಳೆದ ಮೇಲೆ ಅದರ ಬಗ್ಗೆ ತುಟಿಪಿಟಿಕ್ ಎನ್ನಲಿಲ್ಲ. ಮಹಿಳೆಯರಿಗೆ ನೀಡಿದ ಸ್ಮಾರ್ಟ್ ಫೋನ್ ಭರವಸೆಯೂ ಹಾಗೆಯೇ.

ನಿರುದ್ಯೋಗಿ ಯುವಕ – ಯುವತಿಯರಿಗೆ 2,500 ರೂ. ಮಾಸಾಶನ ಕೊಡುತ್ತೇವೆ ಎಂದು ಛತ್ತೀಸ್‌ಘಡದಲ್ಲಿಯೂ ಇದೇ ಕಾಂಗ್ರೆಸ್ ಪಕ್ಷ ಹೇಳಿತ್ತು. ಆದರೆ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ಸಿಗರಿಗೆ ಅದರ ನೆನಪೇ ಇರಲಿಲ್ಲ. ವಿಧವೆಯರಿಗೆ ತಿಂಗಳಿಗೆ 1,000 ಮಾಸಿಕ ಪಿಂಚಣಿ ಕತೆಯೂ ಅಷ್ಟೇ, ಚುನಾವಣಾ ಘೋಷಣೆಗೆ ಮಾತ್ರ ಸೀಮಿತ.

ಅಳಿವು ಉಳಿವಿನ ಕೊನೆಯ ಹಂತಕ್ಕೆ ತಲುಪಿದಾಗ ಸುಳ್ಳು ಹೇಳುವುದು ಮತ್ತು ಹುಸಿ ಭರವಸೆ ನೀಡುವುದು ಸಹಜವಾಗಿ ಮೈಗೂಡುತ್ತದಂತೆ‌. @INCKarnataka ಪರಿಸ್ಥಿತಿ‌ ಹಾಗೆಯೇ ಆಗಿದೆ. ಚುನಾವಣೆಗೂ ಮುನ್ನ ಯೋಜನೆಗಳ ಸಾಧ್ಯಾಸಾಧ್ಯತೆ ಅರಿಯದೆ ಪ್ರಚಾರಕ್ಕಾಗಿ ಘೋಷಿಸುವುದು ಈಗ ಕಾಂಗ್ರೆಸ್‌ಗೆ ಅಭ್ಯಾಸವಾಗಿಬಿಟ್ಟಿದೆ.

2/6

— BJP Karnataka (@BJP4Karnataka) January 16, 2023

ಕರ್ನಾಟಕ ಕಾಂಗ್ರೆಸ್ ರಾಜ್ಯದಲ್ಲಿ ಇನ್ನಷ್ಟು ಯೋಜನೆ ಘೋಷಿಸಲಿ. ಪ್ರತಿಯೊಂದು ಯೋಜನೆಯೂ ಆ ಪಕ್ಷ ಅಸ್ತಿತ್ವಕ್ಕೆ ನಡೆಸುತ್ತಿರುವ ಹೆಣಗಾಟವನ್ನು ಜಗಜ್ಜಾಹೀರು ಮಾಡುತ್ತದೆ. ಜತೆಗೆ ಪ್ರಿಯಾಂಕಾ ಅವರಿಗೆ ಈ ಕ್ಷಣಕ್ಕೆ ಹೇಳಿದ್ದು ಮರುಕ್ಷಣಕ್ಕೆ ನೆನಪಿರುವುದಿಲ್ಲ ಎಂಬುದು ಕರ್ನಾಟಕದ ಜನತೆಗೆ ಗೊತ್ತಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

TAGGED:aiccbjpcongressDK ShivakumarKarnataka Election 2023Na Nayakipriyanka gandhiಕರ್ನಾಟಕ ಎಲೆಕ್ಷನ್ಕಾಂಗ್ರೆಸ್ನಾ ನಾಯಕಿಪ್ರಿಯಾಂಕಾಗಾಂಧಿಬಿಜೆಪಿ
Share This Article
Facebook Whatsapp Whatsapp Telegram

Cinema news

Bigg Boss kannada
BBK 12 | ಸ್ಪಂದನಾ or ಮಾಳು – ಬಿಗ್‌ಬಾಸ್ ಮನೆಯಿಂದ ಆಚೆ ಹೋಗುವವರ‍್ಯಾರು?
Cinema Latest Top Stories TV Shows
Vasishta Simha
ಸಮಾಜದಲ್ಲಿ ಕೆಲವೊಂದಿಷ್ಟು ಕಾಮೆಂಟ್ ಕಲಿವೀರರು ಹುಟ್ಟಿಕೊಂಡಿದ್ದಾರೆ: ವಸಿಷ್ಠ ಸಿಂಹ ಕಿಡಿ
Belgaum Cinema Districts Karnataka Latest Sandalwood States Top Stories
anupama gowda
ಬಿಗ್‌ಬಾಸ್ ಮನೆಗೆ ಮಾಜಿ ಸ್ಪರ್ಧಿ ಅನುಪಮಾ ಗೌಡ ಎಂಟ್ರಿ
Cinema Districts Karnataka Latest Top Stories TV Shows
suraj bigg boss
Bigg Boss: ಕಿಚ್ಚನ ಅನುಪಸ್ಥಿತಿಯಲ್ಲಿ ಬಿಗ್‌ ಬಾಸ್‌ ಮನೆಯಿಂದ ಸೂರಜ್‌ ಔಟ್‌
Cinema Latest Top Stories TV Shows

You Might Also Like

DK Shivakumar 9
Bengaluru City

ಮಹಾತ್ಮ ಗಾಂಧೀಜಿ ಹೆಸರನ್ನ ಇತಿಹಾಸದಿಂದ ಅಳಿಸಲು ಸಾಧ್ಯವಿಲ್ಲ: ಡಿಕೆ ಶಿವಕುಮಾರ್

Public TV
By Public TV
4 minutes ago
Yadagiri chemical water
Bengaluru City

ನೀರಿನ ಬಿಲ್‌ ಬಾಕಿದಾರರಿಗೆ ಬಂಪರ್‌ ಆಫರ್‌ – ಬಡ್ಡಿ, ದಂಡ ಸಂಪೂರ್ಣ ಮನ್ನಾ; ಒನ್ ಟೈಮ್ ಸೆಟಲ್‌ಮೆಂಟ್‌ಗೆ ಗ್ರೀನ್‌ ಸಿಗ್ನಲ್‌

Public TV
By Public TV
8 minutes ago
C.T. Ravi
Chikkamagaluru

ಮುಖ್ಯಮಂತ್ರಿಗಳೇ ನಿಮ್ಮ ರಾಜಕೀಯ ಸ್ವಾರ್ಥಕ್ಕೆ ಕನ್ನಡಿಗರ ಸ್ವಾಭಿಮಾನ ಅಡವಿಡಬೇಡಿ: ಸಿ.ಟಿ.ರವಿ

Public TV
By Public TV
14 minutes ago
DK Shivakumar 5
Bengaluru City

ವೇಣುಗೋಪಾಲ್ ಸರ್ಕಾರದ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ, ಸಲಹೆ ನೀಡಿದ್ದಾರೆ: ಡಿಕೆಶಿ

Public TV
By Public TV
31 minutes ago
Basavaraj Bommai
Districts

ಮಾದಕವಸ್ತು ಹಾವಳಿ – ಸಿಎಂ ಎಚ್ಚೆತ್ತುಕೊಳ್ಳದಿದ್ರೆ ಉಡ್ತಾ ಕರ್ನಾಟಕ ಆಗಲಿದೆ: ಬೊಮ್ಮಾಯಿ

Public TV
By Public TV
55 minutes ago
Hunsure 3
Districts

ಮೈಸೂರು | ಹುಣಸೂರಿನಲ್ಲಿ ಹಾಡಹಗಲೇ ಗನ್‌ ತೋರಿಸಿ ಚಿನ್ನದಂಗಡಿ ದರೋಡೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?