I.N.D.I.A ಒಕ್ಕೂಟ ಅಧಿಕಾರಕ್ಕೆ ಬಂದ್ರೆ ಮೋದಿ ಜೈಲಿಗೆ – ಮಿಸಾ ಭಾರತಿ

Public TV
1 Min Read
PM Modi

ಪಾಟ್ನಾ: I.N.D.I.A ಒಕ್ಕೂಟ ಅಧಿಕಾರಕ್ಕೆ ಬಂದ ಬಳಿಕ ಕೇಂದ್ರೀಯ ತನಿಖಾ ಏಜೆನ್ಸಿಗಳ ದುರ್ಬಳಕೆ ಹಾಗೂ ಚುನಾವಣಾ ಬಾಂಡ್ ಮೂಲಕ ಅಕ್ರಮ ಹಣ ಸಂಗ್ರಹಿಸಿದ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ (PM Modi) ಅವರನ್ನ ಜೈಲಿಗೆ ಹಾಕಲಾಗುತ್ತದೆ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಅವರ ಪುತ್ರಿ ಮಿಸಾ ಭಾರತಿ (Misa Bharti) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

misa bharti

ಪಾಟಲಿಪುತ್ರ ಕ್ಷೇತ್ರದ ಆರ್‌ಜೆಡಿ ಅಭ್ಯರ್ಥಿ (RJD Candidate) ಮಿಸಾ ಭಾರತಿ ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಪ್ರಧಾನಿ ಮೋದಿ ಬಿಹಾರಕ್ಕೆ ಬಂದಾಗಲೆಲ್ಲಾ ಅವರು ನಮ್ಮ ಕುಟುಂಬದ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಜೆಡಿಎಸ್‌ಗೆ ಬಿಗ್ ಶಾಕ್- ಕಾಂಗ್ರೆಸ್‌ನಿಂದ ಮಿಡ್‍ನೈಟ್ ಆಪರೇಷನ್

ಭ್ರಷ್ಟಾಚಾರ ಎಷ್ಟು ದೊಡ್ಡದು ಎಂದು ನಿಮಗೆ ತಿಳಿದಿದೆಯೇ? ಬಿಜೆಪಿಯು ಕೇಂದ್ರೀಯ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡಿದೆ. ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿ ನಿಜವಾಗಿಯೂ ಭ್ರಷ್ಟಾಚಾರ ಮಾಡಿದೆ. ಹಾಗಾಗಿ ದೇಶದ ಜನ ಇಂಡಿಯಾ ಮೈತ್ರಿ ಕೂಟಕ್ಕೆ ಅಧಿಕಾರದ ಅವಕಾಶ ಮಾಡಿಕೊಟ್ಟರೆ, ಪ್ರಧಾನಿಯಿಂದ ಹಿಡಿದು ಎಲ್ಲ ಬಿಜೆಪಿ ನಾಯಕರೂ ಜೈಲು ಪಾಲಾಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ದೆಹಲಿ ಮುಖ್ಯ ಕಾರ್ಯದರ್ಶಿ ವಿರುದ್ಧ ಎಫ್‌ಐಆರ್‌

ಜೆಪಿ ನಡ್ಡಾ ಕೌಂಟರ್‌ ಅಟ್ಯಾಕ್‌:
ಮಿಸಾ ಭಾರತಿ ಹೇಳಿಕೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ, ಭ್ರಷ್ಟಾಚಾರದ ಆರೋಪದ ಮೇಲೆ ತನಿಖೆ ಎದುರಿಸುತ್ತಿರುವವರು ಮತ್ತು ಜಾಮೀನಿನ ಮೇಲೆ ಹೊರಗಿರುವವರು ಲಾಲು ಕುಟುಂಬದವರು. ಲಾಲು ಪ್ರಸಾದ್‌ ಹಾಗೂ ಮಿಸಾ ಭಾರತಿ ವಿವಿಧ ಹಗರಣದಲ್ಲಿ ಆಪಾದಿತರು. ಕಳಂಕರಹಿತ ರಾಜಕೀಯ ಜೀವನವನ್ನು ಹೊಂದಿರುವ ಮೋದಿ ಮೇಲೆ ಆರೋಪ ಮಾಡುವುದು ಖಂಡನಾರ್ಹ. ಇಂತಹವರಿಗೆ ಜನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಜನತೆಗೆ ಮನವಿ ಮಾಡಿದ್ದಾರೆ.

Share This Article