ಬೆಂಗಳೂರು: ಅಧಿಕಾರದುದ್ದಕ್ಕೂ ನಿದ್ರೆ ಮಾಡುತ್ತಾ 1 ಲಕ್ಷ ಕೋಟಿಗೂ ಅಧಿಕ ಮೊತ್ತದ ಸಾಲ ಮಾಡಿ, ರಾಜ್ಯವನ್ನೇ ಸಾಲದ ಶೂಲಕ್ಕೇರಿಸಿದ್ದು ಸಿದ್ದರಾಮಯ್ಯ (Siddaramaiah) ಎಂದು ಬಿಜೆಪಿ (BJP) ತಿರುಗೇಟು ನೀಡಿದೆ.
ವಿಪಕ್ಷ ನಾಯಕ @siddaramaiah ಅವರಿಗೆ ತಾವು ಮಾಡಿದ ಸಾಲದ ಬಗ್ಗೆ ಜಾಣ ಮರೆವು ಏಕೆ?
2013 – 20 ಸಾವಿರ ಕೋಟಿ
2014 – 21 ಸಾವಿರ ಕೋಟಿ
2015 – 21 ಸಾವಿರ ಕೋಟಿ
2016 – 28 ಸಾವಿರ ಕೋಟಿ
2017 – 35 ಸಾವಿರ ಕೋಟಿ
ನಿಮಗೆ ಮರೆತು ಹೋಗಿರಬಹುದು, ರಾಜ್ಯದ ಜನತೆ ಮರೆತಿಲ್ಲ.#ಸಾಲರಾಮಯ್ಯ
— BJP Karnataka (@BJP4Karnataka) October 12, 2022
Advertisement
ಸಾಲರಾಮಯ್ಯ ಹ್ಯಾಷ್‌ಟ್ಯಾಗ್‌ನೊಂದಿಗೆ ಟ್ವೀಟ್ (Tweet) ಮಾಡಿರುವ ಬಿಜೆಪಿ, ಭಾರತ್ ಜೋಡೋ ಯಾತ್ರೆ (Bharat Jodo Yatra) ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದೆ. ಯುಪಿಎ (UPA) ಆಡಳಿತದಲ್ಲಿ ಭಯೋತ್ಪಾದಕ ದಾಳಿಗಳು ನಡೆದರೂ ಉಗ್ರವಾದದ ವಿರುದ್ಧ ಕ್ರಮ ಜರುಗಿಸಲಿಲ್ಲ. ಇದು ಕಾಂಗ್ರೆಸ್‌ನ (Congress) ನಿಜವಾದ ಗುಣ – ಇದು ಭಾರತ್ ಜೋಡೋ ಅಲ್ಲ ಭಾರತ್ ತೋಡೋ ಎಂದು ಹೇಳಿದೆ. ಇದನ್ನೂ ಓದಿ: ಬುಮ್ರಾ ಬದಲು ಶಮಿ, ಚಹರ್ ಔಟ್ – ಆಸ್ಟ್ರೇಲಿಯಾಗೆ ಹಾರಲಿದ್ದಾರೆ ಶಾರ್ದೂಲ್, ಸಿರಾಜ್
Advertisement
ಅಧಿಕಾರದುದ್ದಕ್ಕೂ ನಿದ್ದೆ ಮಾಡುತ್ತಾ 1 ಲಕ್ಷ ಕೋಟಿಗೂ ಅಧಿಕ ಮೊತ್ತದ ಸಾಲ ಮಾಡಿ ರಾಜ್ಯವನ್ನೇ ಸಾಲದ ಶೂಲಕ್ಕೇರಿಸಿದ್ದು ಹೇಗೆ ಮರೆಯಲು ಸಾಧ್ಯ @siddaramaiah?
ಕಾಂಗ್ರೆಸ್ಸಿನ ತುಘಲಕ್ ದರ್ಬಾರಿನಲ್ಲಿ ಪ್ರತಿಯೊಬ್ಬ ಪ್ರಜೆಯ ಮೇಲೆಯೂ ₹ 44,769/- ಸಾಲದ ಹೊರೆ ಹೊರೆಸಿದ್ದನ್ನು ಮರೆತಿರಾ?#ಸಾಲರಾಮಯ್ಯ
— BJP Karnataka (@BJP4Karnataka) October 12, 2022
Advertisement
ಬಿಜೆಪಿ ಟ್ವೀಟ್‌ನಲ್ಲಿ ಏನಿದೆ?
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಾವು ಮಾಡಿದ ಸಾಲದ ಬಗ್ಗೆ ಜಾಣ ಮರೆವು ಏಕೆ? ನಿಮ್ಮ ಸಾಲದ ಇತಿಹಾಸ ತೆರೆದಿಡುತ್ತಿದ್ದೇವೆ. ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದ ಜನತೆಗೆ ಸಿಹಿ ಸುದ್ದಿ – ದೆಹಲಿಗೆ ನಿತ್ಯ ವಿಮಾನ
Advertisement
ನಿಮಗೆ ಮರೆತು ಹೋಗಿರಬಹುದು, ರಾಜ್ಯದ ಜನತೆ ಮರೆತಿಲ್ಲ. ಅಧಿಕಾರದುದ್ದಕ್ಕೂ ನಿದ್ದೆ ಮಾಡುತ್ತಾ 1 ಲಕ್ಷ ಕೋಟಿಗೂ ಅಧಿಕ ಮೊತ್ತದ ಸಾಲ ಮಾಡಿ ರಾಜ್ಯವನ್ನೇ ಸಾಲದ ಶೂಲಕ್ಕೇರಿಸಿದ್ದು ಹೇಗೆ ಮರೆಯಲು ಸಾಧ್ಯ? ಕಾಂಗ್ರೆಸ್ಸಿನ ತುಘಲಕ್ ದರ್ಬಾರಿನಲ್ಲಿ ಪ್ರತಿಯೊಬ್ಬ ಪ್ರಜೆಯ ಮೇಲೆಯೂ 44,769 ರೂ. ಸಾಲದ ಹೊರೆ ಹೊರೆಸಿದ್ದನ್ನು ಮರೆತಿರಾ? ಮೋದಿ ಸರ್ಕಾರ ಸಾಲ ಮಾಡಿ ತನ್ನ ಪರಿವಾರದ ಜೋಳಿಗೆ ತುಂಬಿಸಿಕೊಂಡಿಲ್ಲ `ನಕಲಿ ಗಾಂಧಿ (Gandhi Family) ಪರಿವಾರದಂತೆ. ದೇಶವಿಂದು ವೈಭವದಿಂದ ಕಂಗೊಳಿಸುತ್ತಿದೆ, ಕಾಂಗ್ರೆಸ್ಸಿಗರಿಗೆ ಹೊಟ್ಟೆಕಿಚ್ಚೇಕೆ? ಎಂದು ಕುಟುಕಿದೆ. ಅಲ್ಲದೇ ಸಿದ್ದರಾಮಯ್ಯ ಅವರ ಅವಧಿಯಲ್ಲಾದ ಸಾಲದ ವಿವರಣೆಯನ್ನೂ ನೀಡಿದೆ.
ಮಾನ್ಯ @siddaramaiah ಅವರೇ, ನಿಮ್ಮ ಸಾಲದ ಇತಿಹಾಸ ತೆರೆದಿಡುತ್ತಿದ್ದೇವೆ.
ಮೋದಿ ಸರ್ಕಾರ ಸಾಲ ಮಾಡಿ ತನ್ನ ಪರಿವಾರದ ಜೋಳಿಗೆ ತುಂಬಿಸಿಕೊಂಡಿಲ್ಲ "ನಕಲಿ ಗಾಂಧಿ ಪರಿವಾರದಂತೆ".
ದೇಶವಿಂದು ವೈಭವದಿಂದ ಕಂಗೊಳಿಸುತ್ತಿದೆ, ಕಾಂಗ್ರೆಸ್ಸಿಗರಿಗೆ ಹೊಟ್ಟೆಕಿಚ್ಚೇಕೆ?#ಸಾಲರಾಮಯ್ಯ pic.twitter.com/2uU1sSuD26
— BJP Karnataka (@BJP4Karnataka) October 12, 2022
ಅವಧಿ- ಎಷ್ಟು ಸಾಲ?
2013 – 20 ಸಾವಿರ ಕೋಟಿ
2014 – 21 ಸಾವಿರ ಕೋಟಿ
2015 – 21 ಸಾವಿರ ಕೋಟಿ
2016 – 28 ಸಾವಿರ ಕೋಟಿ
2017 – 35 ಸಾವಿರ ಕೋಟಿ