ಬೆಂಗಳೂರು: ಎತ್ತು ಏರಿಗೆಳೀತು ಕೋಣ ನೀರಿಗಿಳೀತು. ಕರ್ನಾಟಕಕ್ಕೆ ವಿದಾಯ ಹೇಳುವ ಮುನ್ನ ರಾಹುಲ್ ಗಾಂಧಿ (Rahul Gandhi) ಅವರಿಗೆ ಮತ್ತೊಮ್ಮೆ ನೆನಪಿಸುತ್ತಿದ್ದೇವೆ. ಮುಂದಿನ ಯಾತ್ರೆಗೆ ಕರ್ನಾಟಕದಲ್ಲೇ ಇಂಧನ ತುಂಬಿಸಿ ಎಂದು ರಾಹುಲ್ ಗಾಂಧಿ ಮತ್ತು ಡಿಕೆ ಶಿವಕುಮಾರ್ (D.K Shivakumar), ಸಿದ್ದರಾಮಯ್ಯ (Siddaramaiah) ಜೋಡಿಯನ್ನು ಸರಣಿ ಟ್ವೀಟ್ ಮೂಲಕ ಬಿಜೆಪಿ (BJP) ಕಾಲೆಳೆದಿದೆ.
Advertisement
ಎತ್ತು ಏರಿಗೆಳೀತು ಕೋಣ ನೀರಿಗಿಳೀತು. ಕರ್ನಾಟಕಕ್ಕೆ ವಿದಾಯ ಹೇಳುವ ಮುನ್ನ ರಾಹುಲ್ ಗಾಂಧಿ ಅವರಿಗೆ ಮತ್ತೊಮ್ಮೆ ನೆನಪಿಸುತ್ತಿದ್ದೇವೆ. ಮುಂದಿನ ಯಾತ್ರೆಗೆ ಕರ್ನಾಟಕದಲ್ಲೇ ಇಂಧನ ತುಂಬಿಸಿ. ಡಿಸೇಲ್ (Diesel) ದರ/ಲೀ. ಆಂಧ್ರಪ್ರದೇಶ – 99.15 ರೂ., ತೆಲಂಗಾಣ – 97.82 ರೂ., ರಾಜಸ್ಥಾನ – 93.72 ರೂ. ಕರ್ನಾಟಕ – 87.94 ರೂ. ಬಿಜೆಪಿಯೇತರ ರಾಜ್ಯದಲ್ಲಿ ಬೆಲೆ ಏರಿಕೆಯ ಬಿಸಿ ತಾಗಬಹುದು! ಇದನ್ನೂ ಓದಿ: ನ್ಯಾಯ ಸಿಗೋದು ವಿಳಂಬವಾಗ್ತಿರೋದೇ ಜನರಿಗೆ ಬಹುದೊಡ್ಡ ಸಮಸ್ಯೆ: ಮೋದಿ ವಿಷಾದ
Advertisement
Advertisement
ಕೋವಿಡ್ (Covid-19) ಸಂಕಷ್ಟದ ನಡುವೆ ಜಗತ್ತಿನ ಆರ್ಥಿಕತೆ ಮಕಾಡೆ ಮಲಗಿದ್ದರೂ ಭಾರತದ ಆರ್ಥಿಕತೆ ಬೆಳವಣಿಗೆಯ ವೇಗ ಅಮೆರಿಕ (America) ದೇಶಕ್ಕಿಂತಲೂ ಮುಂದಿದೆಯೆಂದು ಐಎಂಎಫ್ (IMF) ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಇಷ್ಟರ ಮೇಲೂ, ಕಾಂಗ್ರೆಸ್ (Congress) ಭಾರತದ ಸಾಧನೆಯನ್ನು ತುಚ್ಛವಾಗಿ ಕಾಣುತ್ತಿದೆ ಎಂದರೆ ಇವರು ಜೋಡಿಸಲು ಹೊರಟಿರುವುದಾದರೂ ಏನನ್ನು?
Advertisement
ಮೇಕ್ ಇನ್ ಇಂಡಿಯಾ (Make in India) ಯೋಜನೆ ಮೂಲಕ ಕೋಲಾರದಲ್ಲಿ ‘ಐ ಫೋನ್’ (IPhone) ತಯಾರಾಗುತ್ತಿದೆ. ಪೆನಕೊಂಡದಲ್ಲಿ ‘ಕಿಯಾ’ (Kia) ಕಾರು ತಯಾರಾಗುತ್ತಿದೆ. ವೈಜಾಗ್‍ನಲ್ಲಿ ‘ಶೋಮಿ’ (Xiaomi) ಮೊಬೈಲ್ ತಯಾರಾಗುತ್ತಿದೆ. ಇಟಲಿಯಿಂದ ಬಂದವರು, ತಮ್ಮ ಆಡಳಿತದ ಅವಧಿಯಲ್ಲಿ ತಮ್ಮ ಕುಟುಂಬದ ಜೋಳಿಗೆ ತುಂಬಿಸಿಕೊಂಡಿದ್ದೇ ಸಾಧನೆಯೇ? ಕಾಂಗ್ರೆಸ್ ಸರ್ಕಾರದ ಆಡಳಿತ ಸ್ವರ್ಗದಂತಿತ್ತು ಎನ್ನುವ ರಾಹುಲ್ ಗಾಂಧಿ ಅವರೇ, ಇದನ್ನೂ ಓದಿ: ಮುರುಘಾ ಮಠಕ್ಕೆ ಹೊಸ ಶ್ರೀಗಳ ನೇಮಕ ಕಾನೂನು ಪ್ರಕಾರ ನಿರ್ಧಾರ: ಬೊಮ್ಮಾಯಿ
ಕರ್ನಾಟಕಕ್ಕೆ ವಿದಾಯ ಹೇಳುವ ಮುನ್ನ @RahulGandhi ಅವರಿಗೆ ಮತ್ತೊಮ್ಮೆ ನೆನಪಿಸುತ್ತಿದ್ದೇವೆ.
ಮುಂದಿನ ಯಾತ್ರೆಗೆ ಕರ್ನಾಟಕದಲ್ಲೇ ಇಂಧನ ತುಂಬಿಸಿ.
ಡಿಸೇಲ್ ದರ/ಲೀ.
ಆಂಧ್ರಪ್ರದೇಶ – 99.15
ತೆಲಂಗಾಣ – 97.82
ರಾಜಸ್ಥಾನ – 93.72
ಕರ್ನಾಟಕ – 87.94
ಬಿಜೆಪಿಯೇತರ ರಾಜ್ಯದಲ್ಲಿ ಬೆಲೆ ಏರಿಕೆಯ ಬಿಸಿ ತಾಗಬಹುದು!#BharatTodoYatra
— BJP Karnataka (@BJP4Karnataka) October 15, 2022
ಯುಪಿಎ ಸರ್ಕಾರ – ಸಾಮಾನ್ಯ ಜನರ ಆದಾಯ 2.5 ಲಕ್ಷ ದಾಟಿದ ಕೂಡಲೇ ಆದಾಯ ತೆರಿಗೆ ಕಟ್ಟಬೇಕಿತ್ತು. ಮೋದಿ (Narendra Modi) ಸರ್ಕಾರ – ಸಾಮಾನ್ಯ ಜನರು 5 ಲಕ್ಷ ಆದಾಯದವರೆಗೂ ತೆರಿಗೆ ಕಟ್ಟ ಬೇಕಿಲ್ಲ. ಯಾವುದು ಸ್ವರ್ಗದ ಆಡಳಿತ, ಯಾವುದು ನರಕದ ಆಡಳಿತ ಎಂದು ಬಿಜೆಪಿ ಪ್ರಶ್ನಿಸಿದೆ.
ಗೊತ್ತಾಯ್ತು. ಅವರನ್ನು ನೋಡಿಯೇ ನಿಮಗೆ ಬೆವರಿಳೀತು!#BharatJodoYatra#BharatJodoInBallari https://t.co/TZkyCXicPe
— Karnataka Congress (@INCKarnataka) October 15, 2022
ಗೊತ್ತಾಯ್ತು. ಅವರನ್ನು ನೋಡಿಯೇ ನಿಮಗೆ ಬೆವರಿಳೀತು ಎಂದು ಬಿಜೆಪಿ ಟ್ವೀಟ್‌ಗೆ ಕಾಂಗ್ರೆಸ್ ತಿರುಗೇಟು ನೀಡಿದೆ.