ಬೆಂಗಳೂರು: ವಿಜಯಪುರದ (Vijapura) ದ್ಯಾಬೇರಿ ಗ್ರಾಮದ ವಾಗ್ದೇವಿ ದೇವಿಯ ದರ್ಶನವನ್ನು ಕಾಟಾಚಾರಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಮಾಡಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿ ಸಿದ್ದರಾಮಯ್ಯನವರು ಮಸೀದಿ, ದರ್ಗಾಗಳಿಗೆ ಹೋಗಿ ಅವರು ನೀಡಿದ್ದೆಲ್ಲವನ್ನೂ ಮೈ ಮೇಲೆ ಹಾಕಿಕೊಳ್ಳುತ್ತಾರೆ. ಆದರೆ ದೇವಿ ದರ್ಶನ ಮಾಡಲು ಸಮಯವಿಲ್ಲ ಎಂದು ಹೇಳಿ ತರಾಟೆಗೆ ತೆಗೆದುಕೊಂಡಿದೆ.
Advertisement
ಭೇದಗಳನ್ನು ಮರೆತು ಭಾರತೀಯರೆಲ್ಲರೂ ಒಟ್ಟಾಗಿ ರಾಮಮಂದಿರ ನಿರ್ಮಾಣವನ್ನು ಸಂಭ್ರಮಿಸುತ್ತಿರುವುದು @INCKarnataka ಸರ್ಕಾರಕ್ಕೆ ಸಹಿಸಲಾಗುತ್ತಿಲ್ಲ.
ಸದಾ ಕೋಮುದ್ವೇಷ ಹಬ್ಬಿಸಿ ಅದರಿಂದ ಲಾಭ ಮಾಡಿಕೊಳ್ಳುತ್ತಿದ್ದ ಕಾಂಗ್ರೆಸ್ ಈಗ ಹಸಿದಿದೆ. ತನ್ನ ಹಸಿವು ನೀಗಿಸಲು ಸಮಾಜದ ಶಾಂತಿಯನ್ನೇ ಭಕ್ಷಿಸಲು ತಯಾರಾಗಿದೆ. #RamaVirodhiCongress pic.twitter.com/lnHrJ6U9mL
— BJP Karnataka (@BJP4Karnataka) January 3, 2024
Advertisement
ಬಿಜೆಪಿ ಪೋಸ್ಟ್‌ನಲ್ಲಿ ಏನಿದೆ?
ಅಲ್ಪಸಂಖ್ಯಾತರಿಗೆ (Minorities) 10 ಸಾವಿರ ಕೋಟಿ ನೀಡಿ, ರಾಮಮಂದಿರಕ್ಕೆ (Ram Mandir) ಒಂದು ರೂ. ಸಹ ದೇಣಿಗೆ ನೀಡದ ಚುನಾವಣಾ ಹಿಂದೂ ಸಿಎಂ ಸಿದ್ದರಾಮಯ್ಯರವರ ಅಸಲಿ ಮುಖ ಇದು.
Advertisement
ವಿಜಯಪುರದ ದ್ಯಾಬೇರಿ ಗ್ರಾಮದ ವಾಗ್ದೇವಿ ದೇವಿಯ ದರ್ಶನವನ್ನು ಕಾಟಾಚಾರಕ್ಕೆ ಮಾಡಿದ ಹಿಂದೂ ವಿರೋಧಿ ಸಿದ್ದರಾಮಯ್ಯರವರು ಪ್ರಭು ಶ್ರೀರಾಮರ ಅಪರಾವತಾರವಂತೆ.
Advertisement
ಹಿಂದೂಗಳಿಗೆ ವಿನಾಕಾರಣ ಶಿಕ್ಷೆ, ಅಲ್ಪಸಂಖ್ಯಾತರಿಗೆ ಸದಾ ಶ್ರೀರಕ್ಷೆ – ಇದು ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದ ಆಡಳಿತದ ಧ್ಯೇಯ.#RamaVirodhiCongress#CongressFailsKarnataka pic.twitter.com/aj869RdxzQ
— BJP Karnataka (@BJP4Karnataka) January 3, 2024
ಸಿಎಂ ಸಿದ್ದರಾಮಯ್ಯನವರೇ ಮಸೀದಿ, ದರ್ಗಾಗಳಿಗೆ ಹೋಗಿ ಅವರು ನೀಡಿದ್ದೆಲ್ಲವನ್ನೂ ಮೈ ಮೇಲೆ ಹಾಕಿಕೊಂಡು ಫೋಸು ಕೊಡುವ ನಿಮಗೆ, ದೇವಿಯ ಬಳಿ ನಾಡಿನ ಒಳಿತಿಗಾಗಿ ಭಕ್ತಿಯಿಂದ ಕೈ ಮುಗಿಯುವಷ್ಟು ಸಮಯವಿಲ್ಲ. ಹಿಂದೂ ಧರ್ಮ, ಹಿಂದೂ ದೈವ ಹಾಗೂ ಹಿಂದೂಗಳನ್ನು ಕಂಡರೆ ಈ ಪರಿ ಅಸಡ್ಡೆ ಏಕೆ?
ವಿಡಿಯೋದಲ್ಲಿ ಏನಿದೆ?
ಸಿದ್ದರಾಮಯ್ಯ ಮತ್ತು ಎಂಬಿ ಪಾಟೀಲ್ ವಿಜಯಪುರದ ದ್ಯಾಬೇರಿ ಗ್ರಾಮದ ವಾಗ್ದೇವಿ ದೇವಿ ದೇವಸ್ಥಾನಕ್ಕೆ ಬಂದಿರುತ್ತಾರೆ. ದೇವಸ್ಥಾನದ ಒಳಗಡೆ ಎಂಬಿ ಪಾಟೀಲ್ ಹೋದ ಬಳಿಕ ಅವರು ಮುಖ್ಯಮಂತ್ರಿಗಳನ್ನು ಒಳಗೆ ಬನ್ನಿ ಎಂದು ಕರೆಯುತ್ತಾರೆ. ಇದಕ್ಕೆ ಸಿಎಂ ಬರಲ್ಲ ಎಂದು ಹೇಳುತ್ತಾರೆ. ಈ ವೇಳೆ ಎಂಬಿ ಪಾಟೀಲ್ ಕೈ ಮುಗಿದು ಬನ್ನಿ ಬನ್ನಿ ಎಂದು ಮನವಿ ಮಾಡುತ್ತಾರೆ. ಇದಕ್ಕೆ ಸಿದ್ದರಮಯ್ಯ ಕೈ ಸನ್ನೆಯ ಮೂಲಕ ನಾನು ಬರುವುದಿಲ್ಲ ಎಂದು ಹೇಳುತ್ತಾರೆ.