– ಸಾಮಾನ್ಯರು ಎನ್ನುವವರ ಹೈಫೈ ಜೀವನ ನೋಡಿ ಅಂತ ಟೀಕೆ
ನವದೆಹಲಿ: ಮುಂದಿನ ಮೇ ತಿಂಗಳಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೂ ಮುನ್ನವೇ ಸಿಎಂ ʻಶೇಶ್ ಮಹಲ್ʼ (Sheesh Mahal) ಬಂಗಲೆ ವಿವಾದ ತೀವ್ರಗೊಂಡಿದೆ.
खुद को आम आदमी कहने वाले @ArvindKejriwal की अय्याशी के शीशमहल की सच्चाई हम बताते आए हैं , आज आपको दिखायेंगे भी!
जनता के पैसे खाकर अपने लिए 7-Star Resort का निर्माण करवाया है!
शानदार Gym-Sauna Room-Jacuzzi की कीमत!
• Marble Granite Lighting→ ₹ 1.9 Cr.
•Installation-Civil… pic.twitter.com/QReaeNMRQ8
— Virendraa Sachdeva (@Virend_Sachdeva) December 10, 2024
ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ವಿರುದ್ಧ ಸದಾ ಭ್ರಷ್ಟಾಚಾರ ಆರೋಪ ಮಾಡುವ ಬಿಜೆಪಿಯು, ಈಗ ಶೇಶ್ ಮಹಲ್ ಇನ್‌ಸೈಡ್ ವೀಡಿಯೋವೊಂದನ್ನ ಹಂಚಿಕೊಂಡಿದೆ. ದೆಹಲಿಯ 6 ಫ್ಲಾಗ್‌ಸ್ಟಾಫ್ ರಸ್ತೆಯಲ್ಲಿರುವ ಅಧಿಕೃತ ಬಂಗಲೆಯನ್ನು ಅರವಿಂದ್ ಕೇಜ್ರಿವಾಲ್ ಇನ್ನೂ ಔಪಚಾರಿಕವಾಗಿ ಖಾಲಿ ಮಾಡಿಲ್ಲ ಎಂದು ಬಿಜೆಪಿ (BJP) ಆರೋಪಿಸಿದೆ. ಇದನ್ನೂ ಓದಿ: ಬ್ರೇಕ್ ಫೇಲ್ ಆಗಿ ನಿಯಂತ್ರಣ ತಪ್ಪಿದ ಬಸ್ – 6 ಮಂದಿ ಸಾವು, 49 ಮಂದಿಗೆ ಗಾಯ
ಬಂಗಲೆ ಒಳಗಿನ ಸಂಪೂರ್ಣ ವೀಡಿಯೋವನ್ನು ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಶೇಶ್ ಮಹಲ್ ಒಳಗಿನ ಹೈಟೆಕ್ ಜಿಮ್, ಮಿನಿ ಸ್ಪಾ ಕೇಂದ್ರ, ಬಾತ್ ಟಬ್, ಹೈಟೆಕ್ ಚೌಚಾಲಯ ಇವೆಲ್ಲವೂ ಐಷಾರಾಮಿ ಜೀವನವನ್ನು ಅನಾವರಣಗೊಳಿಸಿದೆ.
ತನ್ನನ್ನು ಸಾಮಾನ್ಯ ವ್ಯಕ್ತಿ ಎಂದು ಕರೆದುಕೊಳ್ಳುವ ಅರವಿಂದ್ ಕೇಜ್ರಿವಾಲ್ ಅರಮನೆ ಬಗ್ಗೆ ನಾವು ಸತ್ಯವನ್ನು ಹೇಳುತ್ತಿದ್ದೇವೆ. ಇಂದು ಅದರ ದರ್ಶನ ಮಾಡಿಸುತ್ತೇವೆ. ಸಾರ್ವಜನಿಕ ಹಣ ದುರುಪಯೋಗಪಡಿಸಿಕೊಂಡು ತನಗಾಗಿ 7-ಸ್ಟಾರ್ ರೆಸಾರ್ಟನ್ನೇ ನಿರ್ಮಾಣ ಮಾಡಿದ್ದಾರೆ ಎಂದು ಅಧ್ಯಕ್ಷ ವೀರೇಂದ್ರ ಸಚ್‌ದೇವ್ ತಮ್ಮ ಎಕ್ಸ್ ಖಾತೆಯಲ್ಲಿ ಆರೋಪಿಸಿದ್ದಾರೆ.
ಜಿಮ್ ಮತ್ತು ಸೌನಾ ಕೊಠಡಿ ಹಾಗೂ ಜಕುಜಿ (ಬಾತ್ ಟಬ್) ಕೊಠಡಿಗಳ ವೆಚ್ಚ 3.75 ಕೋಟಿ ರೂ., ಬಂಗಲೆಗೆ ಮಾಡಲಾಡ ಮಾರ್ಬಲ್ ಗ್ರಾನೈಟ್ ದೀಪಾಲಂಕಾರದ ವೆಚ್ಚ 1.9 ಕೋಟಿ ರೂ.ಗಳಷ್ಟಿದೆ. ಇದಲ್ಲದೇ ಇನ್ನಷ್ಟು ಕೆಲಸಕ್ಕೆ 1.5 ಕೋಟಿ ರೂ. ಬೇಕಾಗುತ್ತದೆ. ಇದರೊಂದಿಗೆ 35 ಲಕ್ಷ ರೂ. ವೆಚ್ಚದ ಜಿಮ್ ಹಾಗೂ ಸ್ಪಾ ಫಿಟ್ಟಿಂಗ್ ಸೌಲಭ್ಯವಿದೆ ಎಂದು ಎಕ್ಸ್ ಖಾತೆಯಲ್ಲಿ ಮಾಹಿತಿ ವಿವರಿಸಿದ್ದಾರೆ. ಅಲ್ಲದೇ ಸಾಮಾನ್ಯ ಮನುಷ್ಯ ಎಂದು ಹೇಳಿಕೊಳ್ಳುವ ಅರವಿಂದ್ ಕೇಜ್ರಿವಾಲ್ ಅವರಿಗೆ ನಾಚಿಗೇಡುತನ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ -ಹೋರಾಟಗಾರರ ಮೇಲೆ ಲಾಠಿಚಾರ್ಜ್
ಮುಂದುವರಿದು, ತಮ್ಮ ಮಕ್ಕಳ ಮೇಲೆ ಪ್ರಮಾಣ ಮಾಡಿ, ಸರ್ಕಾರಿ ಮನೆ, ಕಾರು, ಭದ್ರತೆ ತೆಗೆದುಕೊಳ್ಳುವುದಿಲ್ಲ ಎಂದು ಪೊಳ್ಳು ಭರವಸೆ ನೀಡುವವರು ದೆಹಲಿ ತೆರಿಗೆದಾರರ ಹಣವನ್ನ ಲೂಟಿ ಮಾಡುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿರುವ ಸಂದರ್ಭದಲ್ಲಿ ಕೋಟಿ ಕೋಟಿ ಖರ್ಚು ಮಾಡುವ ಅಧಿಕಾರ ಕೊಟ್ಟಿದ್ದು ಯಾರು ಎಂದು ಬಿಜೆಪಿ ನಾಯಕ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಸಿಹಿ ತಿನಿಸು, ನಾಟಿ ಶೈಲಿ ಊಟ ಅಂದ್ರೆ ಪ್ರಾಣ – ಟೆನ್ನಿಸ್ ಕ್ರೀಡೆ ಫೇವರೆಟ್; ಎಸ್‌ಎಂಕೆ ಬಾಲ್ಯದ ಸ್ವಾರಸ್ಯ!