ಪಣಜಿ: ಗೋವಾ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ಸ್ಥಾಪಿಸುವ ಉದ್ದೇಶದಿಂದ ಮನೋಹರ್ ಪರಿಕ್ಕರ್ ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ.
ಪರಿಕ್ಕರ್ ಸಿಎಂ ಆಗುವುದಾದರೆ ಬೆಂಬಲ ನೀಡೋದಾಗಿ ಇತರೆ ಪಕ್ಷ ಹಾಗೂ ಪಕ್ಷೇತರ ಶಾಸಕರು ಪಟ್ಟು ಹಿಡಿದಿದ್ದಾರೆ. ಆದರೆ ಅವರು ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
Advertisement
ಎಂಜಿಪಿಯ 3, ಜಿಎಫ್‍ಪಿಯ 3, ಇಬ್ಬರು ಪಕ್ಷೇತರು, ಏಕೈಕ ಎನ್‍ಸಿಪಿ ಶಾಸಕ ಪರಿಕ್ಕರ್‍ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಮೂಲಕ 22 ಶಾಸಕರ ಬೆಂಬಲ ಪರಿಕ್ಕರ್‍ಗೆ ಸಿಕ್ಕಿದೆ. 17 ಸ್ಥಾನ ಗೆದ್ರೂ ಕಾಂಗ್ರೆಸ್‍ಗೆ ಹಿನ್ನಡೆಯಾಗಿದೆ. ಬಿಜೆಪಿ 13 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
Advertisement
ಅತ್ತ ಮಣಿಪುರದಲ್ಲೂ ಬಿಜೆಪಿಗೆ 31 ಶಾಸಕರ ಬೆಂಬಲ ಇದ್ದು ನಾವೇ ಸರ್ಕಾರ ರಚಿಸ್ತೇವೆ ಅಂತ ಮಣಿಪುರ ಬಿಜೆಪಿ ಉಸ್ತುವಾರಿ ರಾಮ್ ಮಾಧವ್ ಹೇಳಿದ್ದಾರೆ. ಬಹುಮತಕ್ಕೆ 31 ಸ್ಥಾನಗಳ ಅಗತ್ಯ ಇದೆ. ಕಾಂಗ್ರೆಸ್ 28 ಸ್ಥಾನಗಳನ್ನ ಗೆದ್ರೆ ಬಿಜೆಪಿ 21ರಲ್ಲಿ ಗೆಲುವು ಸಾಧಿಸಿದೆ.
Advertisement
ದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ಗೋವಾ ಹಾಗೂ ಮಣಿಪುರದಲ್ಲಿ ಸರ್ಕಾರ ರಚನೆ ಹಾಗೂ ಉತ್ತರಪ್ರದೇಶ ಹಾಗೂ ಉತ್ತರಾಖಂಡ್‍ನ ಸಿಎಂ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆದಿದೆ.
Advertisement
Panaji: Defence Minister Manohar Parrikar with BJP, MGP, Goa Forward Party and 3 Independent MLAs pic.twitter.com/GeoGZ2VuG5
— ANI (@ANI_news) March 12, 2017
Definitely it was difficult as it was a new department (Def Min) but I am happy no corruption allegation levelled on our Govt: M Parrikar pic.twitter.com/jMp5qqiRMQ
— ANI (@ANI_news) March 12, 2017
This is a mandate given by the people, though we fell short of majority. Together we have completed the magic figure of 21: Manohar Parrikar pic.twitter.com/2dIy4ANPng
— ANI (@ANI_news) March 12, 2017