ಚಿಕ್ಕೋಡಿ: ಬಿಜೆಪಿಯಲ್ಲಿ 75 ವರ್ಷವಾದರೆ ಮನೆಗೆ ಕಳುಹಿಸುತ್ತಾರೆ. ಆದರೆ ಕಾಂಗ್ರೆಸ್‌ನಲ್ಲಿ 90 ವರ್ಷ ಆದರೂ ಚುನಾವಣೆಗೆ ನಿಲ್ಲಿಸುತ್ತಾರೆ ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ವ್ಯಂಗ್ಯವಾಡಿದರು.
ಚಿಕ್ಕೋಡಿಯಲ್ಲಿ ಆಯೋಜಿಸಿದ್ದ ವಾಯುವ್ಯ ಶಿಕ್ಷಕರ ಪದವೀಧರ ಮತಕ್ಷೇತ್ರ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉದ್ಯೋಗ ಕಳೆದುಕೊಂಡ ಬಳಿಕ ಉದ್ಯೋಗ ಹುಡುಕಾಡುವ ಕೆಲಸವನ್ನು ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಮಾಡುತ್ತಿದ್ದಾರೆ. ಪ್ರಕಾಶ್ ಹುಕ್ಕೇರಿ ಮೊದಲು ಪಂಚಾಯಿತಿ ಸದಸ್ಯನಾಗಿ, ರಾಜ್ಯದ ವಿಧಾನ ಪರಿಷತ್, ವಿಧಾನಸಭೆ, ಲೋಕಸಭೆ ಸದಸ್ಯರಾಗಿ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
Advertisement
Advertisement
ಅವರು ಒಂದು ಕಡೆ ಶಿಕ್ಷಕರೂ ಅಲ್ಲ, ಪದವೀಧರರೂ ಅಲ್ಲ, ಉದ್ಯೋಗವೂ ಬರಲ್ಲ. ಅವರಿಗೆ ಬರುವುದು ರಾಜಕಾರಣ ಒಂದೇ. ಇಂದು ಅವರನ್ನು ವಾಯುವ್ಯ ಶಿಕ್ಷಕ ಮತಕ್ಷೇತ್ರ ಅಭ್ಯರ್ಥಿಯಾಗಿ ಕಾಂಗ್ರೆಸ್‌ನಿಂದ ಕಣಕ್ಕಿಳಿಸಿದ್ದಾರೆ. ನಮ್ಮದು ಕೂಡ ಅವರಂತಹದೇ ರಾಜಕಾರಣ. ಆದರೆ ನಾವು ಸ್ವಲ್ಪ ಬೇರೆ ಉದ್ಯೋಗವೂ ಮಾಡುತ್ತೇವೆ ಎಂದರು. ಇದನ್ನೂ ಓದಿ: ಧೀಮಂತ ಜನ ನಾಯಕ: ಪ್ರಚಾರ ಸಮಯದಲ್ಲಿ ತಂದೆ ಸಾಧನೆಯನ್ನು ಗುಣಗಾನ ಮಾಡಿದ ವಿಜಯೇಂದ್ರ
Advertisement
ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿಗೆ 77 ವರ್ಷ. ಬಿಜೆಪಿಯಲ್ಲಿ 75 ವರ್ಷವಾದರೆ ಮನೆಗೆ ಕಳುಹಿಸುತ್ತಾರೆ. ಆದರೆ ಕಾಂಗ್ರೆಸ್‌ನಲ್ಲಿ 90 ವರ್ಷ ಆದರೂ ಚುನಾವಣೆಗೆ ನಿಲ್ಲಿಸುತ್ತಾರೆ ಎಂದು ಕುಟುಕಿದರು.
Advertisement
ಅರುಣ್ ಶಹಾಪುರ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿಯಿಂದ ಅಭ್ಯರ್ಥಿಯಾಗಿ ಚುನಾವಣೆ ಕಣಕ್ಕಿಳಿದಿದ್ದಾರೆ. ಅವರು ಶಿಕ್ಷಕರಾಗಿದ್ದು, ಶಿಕ್ಷಕರ ಬಗ್ಗೆ ಅವರಿಗೆ ಕಾಳಜಿಯೂ ಇದೆ. ಪದವೀಧರ ಕ್ಷೇತ್ರಕ್ಕೆ ಹಣಮಂತ ನಿರಾಣಿ ಬಿಜೆಪಿಯಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರು ಕೂಡ ಪದವೀಧರರಿದ್ದಾರೆ. ಕಾಂಗ್ರೆಸ್‌ನಿಂದ ಅಭ್ಯರ್ಥಿ ಸಿಗದ ಕಾರಣ ಅವನ್ಯಾವನೊ ಒಬ್ಬನನ್ನು ನಿಲ್ಲಿಸಿದ್ದಾರೆ, ಅವನ ಹೆಸರೂ ಗೊತ್ತಿಲ್ಲ. ಮೊದಲು ಅವನ ಅಣ್ಣ, ಅಜ್ಜ, ಅಪ್ಪ, ತಮ್ಮ ಕಾಂಗ್ರೆಸ್‌ನಲ್ಲಿ ಇದ್ದರಂತೆ. ಹೀಗಾಗಿ ಅವನನ್ನು ಹುಡುಕಾಡಿ ತಂದು ಕಣಕ್ಕಿಳಿಸಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಯೋಗ, ಯೋಗ್ಯತೆ ಇದ್ದವರು ಸಿಎಂ ಆಗ್ತಾರೆ: ಸಿ.ಟಿ.ರವಿ
ಕಾಂಗ್ರೆಸ್ ಪದವೀಧರ ಅಭ್ಯರ್ಥಿ ಸುನಿಲ್ ಸಂಖ ಯಾರು ಎಂಬುದೇ ಗೊತ್ತಿಲ್ಲ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಮನೆಗೆ ಕಳುಹಿಸುವ ಕೆಲಸ ಮಾಡಿ ಎಂದು ಉಮೇಶ್ ಕತ್ತಿ ಹೇಳಿದರು.