ರಾಹುಲ್‌ ಗಾಂಧಿಗೆ ಮತ್ತೆ ಸಂಕಷ್ಟ – FIR ದಾಖಲಿಸುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

Public TV
2 Min Read
Rahul Gandhi Holds Up Constitution Booklet During Oath

ಮುಂಬೈ: ಮಹಾರಾಷ್ಟ್ರ ಚುನಾವಣಾ ಪ್ರಚಾರ (Maharashtra Election Campaign) ಸಭೆಗಳಲ್ಲಿ ಸಂವಿಧಾನದ ಕುರಿತು ಸುಳ್ಳು ಹರಡುತ್ತಿದ್ದಾರೆ, ರಾಜ್ಯಗಳ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ?(Rahul Gandhi) ವಿರುದ್ಧ ಬಿಜೆಪಿಯು ಚುನಾವಣಾ ಆಯೋಗಕ್ಕೆ (Election Commissi Of India) ದೂರು ನೀಡಿದೆ.

ELECTION COMMISSION OF INDIA

ಬಿಜೆಪಿ (BJP) ನಿಯೋಗವು ಸೋಮವಾರ (ನ.11) ಮುಖ್ಯ ಚುನಾವಣಾಧಿಕಾರಿಗಳನ್ನ ಭೇಟಿಯಾಗಿ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಮಾಡಲಾಗಿದ್ದು, ರಾಹುಲ್‌ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ಜೊತೆಗೆ ರಾಹುಲ್‌ ಗಾಂಧಿ ವಿರುದ್ಧ ಎಫ್‌ಐಆರ್‌ ದಾಖಳಿಸುವಂತೆ ಆಗ್ರಹಿಸಿದೆ. ಇದನ್ನೂ ಓದಿ: ಪಟಾಕಿ ಸಿಡಿಸುವುದು ಮೂಲಭೂತ ಹಕ್ಕು ಎನ್ನುವವರು ಕೋರ್ಟ್‌ಗೆ ಬರಲಿ – ಶಾಶ್ವತ ಪಟಾಕಿ ನಿಷೇಧದ ಬಗ್ಗೆ ಪ್ರಸ್ತಾಪಿಸಿದ ಸುಪ್ರೀಂ

bjp flag

ಈ ಕುರಿತು ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್, ಬಿಜೆಪಿ ನಿಯೋಗವು ಇಂದು ಮುಖ್ಯ ಚುನಾವಣಾ ಆಯುಕ್ತರನ್ನ ಭೇಟಿ ಮಾಡಿ, ರಾಹುಲ್‌ ಗಾಂಧಿ ವಿರುದ್ಧ ದೂರು ಸಲ್ಲಿಸಿದ್ದೇವೆ. ಮಹಾರಾಷ್ಟ್ರ ಚುನಾವಣಾ ಪ್ರಚಾರ ಸಭೆಗಳಲ್ಲಿ ರಾಹುಲ್‌ ಗಾಂಧಿ ಸುಳ್ಳುಗಳನ್ನೇ ಹರಡುತ್ತಿದ್ದಾರೆ ಎಂಬುದನ್ನು ಆಯೋಗಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: Manipur | ಭದ್ರತಾ ಪಡೆಗಳೊಂದಿಗೆ ಭಾರಿ ಗುಂಡಿನ ಚಕಮಕಿ – 11 ಶಂಕಿತ ಕುಕಿ ಬಂಡುಕೋರರು ಬಲಿ!

ಬಿಜೆಪಿ ಸಂವಿಧಾನವನ್ನು (Indian Constitution) ನಾಶ ಮಾಡಲು ಹೊರಟಿದೆ ಎಂದು ಮತ್ತೆ ರಾಹುಲ್‌ ಸುಳ್ಳು ಹಬ್ಬಿಸುತ್ತಿದ್ದಾರೆ. ಇಂತಹ ಹೇಳಿಕೆಗಳನ್ನು ನಿಲ್ಲಿಸುವಂತೆ ಸೂಚನೆ ನೀಡಬೇಕು, ಜೊತೆಗೆ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 353ರ ಅಡಿಯಲ್ಲಿ ರಾಹುಲ್ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಮನವಿ ಮಾಡಿದ್ದೇವೆ ಎಂದಿದ್ದಾರೆ.

ನವೆಂಬರ್ 6 ರಂದು ಮುಂಬೈನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ರಾಹುಲ್ ಗಾಂಧಿ ಮಹಾರಾಷ್ಟ್ರದ ವೆಚ್ಚದಲ್ಲಿ ಇತರ ರಾಜ್ಯಗಳಲ್ಲಿ ಆಪಲ್ ಐಫೋನ್‌ಗಳು ಮತ್ತು ಬೋಯಿಂಗ್ ವಿಮಾನಗಳನ್ನು ತಯಾರಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರ ಸಂಬಂಧ ಸಹ ಬಿಜೆಪಿ ದೂರು ನೀಡಿತ್ತು. ಅದೇ ಸಭೆಯಲ್ಲಿ ರಾಹುಲ್‌ ʻಬಿಜೆಪಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಜೊತೆಗೆ ಸೇರಿ ಸಂವಿಧಾನ ನಾಶಮಾಡಲು ಬಯಸಿದೆʼ ಎಂದು ಆರೋಪಿಸಿದ್ದರು. ಈ ಸಂಬಂಧ ಇಂದು ಬಿಜೆಪಿ ನಿಯೋಗ ದೂರು ನೀಡಿದೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20 ರಂದು ಚುನಾವಣೆ ನಡೆಯಲಿದೆ. ನವೆಂಬರ್‌ 23ರಂದು ಫಲಿತಾಂಶ ಪ್ರಕಟವಾಗಲಿದೆ. ಇದನ್ನೂ ಓದಿ: ಶಿಗ್ಗಾಂವಿ ʻಕೈʼ ಅಭ್ಯರ್ಥಿ ಯಾಸೀರ್ ಖಾನ್ ಮೇಲೆ ರೌಡಿಶೀಟರ್ ಕೇಸ್‌ ಇದೆ: ಎಸ್ಪಿ ಅಂಶುಕುಮಾರ್ ಆರೋಪ

Share This Article