Bengaluru CityDistrictsKarnatakaLatestLeading NewsMain Post

ಹೌದು ನಾವು ಗಾಂಧಿ ಕುಟುಂಬದ ಗುಲಾಮರು, ಬಿಜೆಪಿಯವ್ರು ಸತ್ಯವನ್ನೇ ಹೇಳಿದ್ದಾರೆ: ಡಿಕೆಶಿ

Advertisements

ಬೆಂಗಳೂರು: ಸೋನಿಯಾ ಗಾಂಧಿಯವರೇ ನಮ್ಮ ತಾಯಿ ರಾಹುಲ್ ಗಾಂಧಿ ನಮ್ಮ ಸಹೋದರ. ಅವರ ಜೊತೆ ನಾವು ಇದ್ದೇವೆ, ಹೆದರಿಕೊಳ್ಳಬೇಡಿ. ನಿಮಗೂ ಒಳ್ಳೆಯ ಕಾಲ ಬರುತ್ತೆ. ದೇಶಕ್ಕೆ ಗಾಂಧಿ ಕುಟುಂಬ ಗುಲಾಮರೂ ಹೌದು. ಭಾರತಾಂಬೆಯ ಕೆಲಸ ಮಾಡಿದ್ದು ಗಾಂಧಿ ಕುಟುಂಬ. ಅವರು ಹೇಳ್ತಿದ್ದರಲ್ಲಾ ನಾವು ಗುಲಾಮರು ಅಂತ, ಹೌದು ನಾವು ಗುಲಾಮರೇ. ನಾವು ಭಾರತಾಂಬೆಯ ಕೆಲಸ ಮಾಡ್ತಿದ್ದೇವೆ. ಜನರ ಸೇವೆ ಮಾಡ್ತಿದ್ದೇವೆ, ಭಾರತ ತಾಯಿ ಸೇವೆ ಮಾಡ್ತಿದ್ದೇವೆ. ಭಾರತ ತಾಯಿ ಮಕ್ಕಳಾದ ನಾವು ಭಾರತದ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸೋನಿಯಾ ಗಾಂಧಿಯವರು ಈಗ ವಿಚಾರಣೆ ಎದರಿಸುತ್ತಿದ್ದಾರೆ. ಅವರ ಜೊತೆಗೆ ಕಾಂಗ್ರೆಸ್ ಪಕ್ಷ ಇದೆ. ನ್ಯಾಷನಲ್ ಹೆರಾಲ್ಡ್ ನ್ನ ಸೋನಿಯಾ ಗಾಂಧಿ ಸ್ವಂತ ಆಸ್ತಿಯೆಂದು ಹೇಳಿಲ್ಲ. ನಮ್ಮ ನಾಯಕರಿಗೆ ಕಿರುಕುಳ ಕೊಟ್ಟು ಜೈಲಿಗೆ ಹಾಕಲಿ. ಪ್ರಧಾನಮಂತ್ರಿ ಸ್ಥಾನ ತ್ಯಾಗ ಮಾಡಿದ್ದ ಮಹಿಳೆಗೆ ಕಿರುಕುಳ ಕೊಡ್ತಿದ್ದಾರೆ. ಯಾವ ಆಸ್ತಿ ಮಾಡಿಕೊಂಡಿದ್ದಾರೆ ಎಂದುಪ್ರಶ್ನಿಸುವ ಮೂಲಕ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾಂಗ್ರೆಸ್ ಪ್ರತಿಭಟನೆಗೆ ಬಂದ ನಟಿ ಭಾವನಾಗೆ ಹಿಗ್ಗಾಮುಗ್ಗ ತರಾಟೆ!

ಈ ದೇಶದಲ್ಲಿ ಇಡಿ ಸಿಬಿಐ ದುರ್ಬಳಕೆ ನಡೆಯುತ್ತಿದೆ. ಸಾವಿರಾರು ವಿರೋಧ ಪಕ್ಷದ ನಾಯಕರ ಬಾಯಿಯನ್ನ ಮುಚ್ಚಲು ಹೊರಟಿದ್ದಾರೆ. ಬಿಜೆಪಿಯವರ ಒಬ್ಬರ ಮೇಲೂ ಕ್ರಮ ಕೈಗೊಂಡಿಲ್ಲ. ಅವರ ಪಕ್ಷದ ಒಬ್ಬರನ್ನೂ ಅರೆಸ್ಟ್ ಮಾಡಿಲ್ಲ, ವಿಚಾರಣೆ ಸಹ ಮಾಡಿಲ್ಲ. 75 ವರ್ಷದ ಸ್ವಾತಂತ್ರೋತ್ಸವ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಸಂವಿಧಾನದ ತಂದು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಪ್ರಜಾಪ್ರಭುತ್ವ ಕಾರಣದಿಂದ ನೀವು ಪಿಎಂ ಆಗಿದ್ದೀರಾ. ಕಟ್ಟಿದ ಸಂಸ್ಥೆಗಳನ್ನ ಒಡೆದು ಹಾಕುತ್ತೀದ್ದೀರಾ ಎಂದು ಕಿಡಿಕಾರಿದರು.

ಈಗ ಪ್ರತಿಭಟನೆ ಮಾಡ್ತಿರೋರು ಜೈಲಿಗೆ ಹೋಗಿ ಬಂದವರು ಎಂಬ ಸಿ.ಟಿ ರವಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಟಿ ರವಿ ವಿರುದ್ಧ ಡಿಕೆಶಿ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಅವನು ಯಾವಾನಾದ್ರು ಏನಾದರೂ ಮಾತಾಡಿಕೊಳ್ಳಲಿ. ಮಹಾತ್ಮ ಗಾಂಧೀಜಿ ಜೈಲಿಗೆ ಹೋಗವ್ರೆ, ಸರ್ದಾರ್ ವಲ್ಲಭಭಾಯಿ ಪಟೇಲ್ ಹೋಗವ್ರೆ, ನೆಹರು ಹೋಗವ್ರೆ. ನಾವು ಏನು ಮಂಚಕ್ಕಾಗಿ ಜೈಲಿಗೆ ಹೋಗಿದ್ವಾ..? ಅಥವಾ ಇನ್ನೊಂದಕ್ಕೆ ಹೋಗಿದ್ವಾ..? ಎಂದು ತಿರುಗೇಟು ಕೊಟ್ಟರು.

Live Tv

Leave a Reply

Your email address will not be published.

Back to top button