ಬೆಂಗಳೂರು: ಪಿಎಸ್‍ಐ ಅಕ್ರಮ ನೇಮಕಾತಿ ಹಗರಣದ ನಂಟು ಕಾಂಗ್ರೆಸ್ ಜೊತೆ ಅಕ್ಷಯವಾಗುತ್ತಿದೆ. ಹಗರಣದ ಮೂಲ ಕೆಪಿಸಿಸಿಯ ಭ್ರಷ್ಟಾಧ್ಯಕ್ಷ ಮತ್ತು ಖರ್ಗೆ ಕುಟುಂಬದ ಸುತ್ತ ತಿರುಗುತ್ತಿದೆ ಎಂದು ಬಿಜೆಪಿ ಟ್ವೀಟ್ ಮಾಡಿ ಕಿಡಿಕಾರಿದೆ.
ಟ್ವೀಟ್‍ನಲ್ಲಿ ಏನಿದೆ?: ನೇಮಕಾತಿ ಹಗರಣದ ನಂಟು ಕಾಂಗ್ರೆಸ್ ಜೊತೆ ಅಕ್ಷಯವಾಗುತ್ತಿದೆ. ಹಗರಣದ ಮೂಲ ಕೆಪಿಸಿಸಿಯ ಭ್ರಷ್ಟಾಧ್ಯಕ್ಷ ಮತ್ತು ಖರ್ಗೆ ಕುಟುಂಬದ ಸುತ್ತ ತಿರುಗುತ್ತಿದೆ. ರಾಜಕೀಯ ಅಸ್ಥಿರತೆ ಮೂಡಿಸಲು ಟೂಲ್ ಕಿಟ್ ಮಾದರಿಯಲ್ಲಿ ತಂತ್ರ ಹೆಣೆದ ಕಾಂಗ್ರೆಸ್ಸಿಗರು ಈಗ ಅದರೊಳಗೆ ತಾವೇ ಬಿದ್ದು ಬೇಸಗೆಯಲ್ಲೂ ಗಡ ಗಡ ನಡುಗುತ್ತಿದ್ದಾರೆ.
Advertisement
ನೇಮಕಾತಿ ಹಗರಣದ ನಂಟು @INCKarnataka ಜೊತೆ ಅಕ್ಷಯವಾಗುತ್ತಿದೆ.
ಹಗರಣದ ಮೂಲ ಕೆಪಿಸಿಸಿಯ #ಭ್ರಷ್ಟಾಧ್ಯಕ್ಷ & ಖರ್ಗೆ ಕುಟುಂಬದ ಸುತ್ತ ತಿರುಗುತ್ತಿದೆ.
ರಾಜಕೀಯ ಅಸ್ಥಿರತೆ ಮೂಡಿಸಲು ಟೂಲ್ ಕಿಟ್ ಮಾದರಿಯಲ್ಲಿ ತಂತ್ರ ಹೆಣೆದ ಕಾಂಗ್ರೆಸ್ಸಿಗರು ಈಗ ಅದರೊಳಗೆ ತಾವೇ ಬಿದ್ದು ಬೇಸಗೆಯಲ್ಲೂ ಗಡ ಗಡ ನಡುಗುತ್ತಿದ್ದಾರೆ.#CONgressPSIToolkit
— BJP Karnataka (@BJP4Karnataka) May 2, 2022
ಆರೋಪಿ ದಿವ್ಯಾ ಹಾಗರಗಿ ತನಿಖಾಧಿಕಾರಿಗಳಿಗೆ ನೀಡಿರುವ ಹೇಳಿಕೆ ಪ್ರಕಾರ ರುದ್ರೇಗೌಡ ಪಾಟೀಲ್ ಸಹೋದರರಿಂದ ಹಣ ಪಡೆಯಲಾಗಿದೆ. ಹಾಗಾದರೆ ಹಗರಣದ ಹಿಂದಿರುವ ಶಕ್ತಿಗಳು ಕಾಂಗ್ರೆಸ್ ನಾಯಕರಲ್ಲವೇ? ಕ್ವೀನ್ಸ್ ರಸ್ತೆಯಲ್ಲಿರುವ ಭ್ರಷ್ಟಾಧ್ಯಕ್ಷರ ಅಕ್ರಮ ಹಣದ ಬ್ಯಾಂಕ್ಗೆ ಈ ಹಗರಣದ ಹಣ ತಲುಪಿರಬಹುದೇ? ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಹಾಗೂ ವರ್ತನೆ ನೋಡಿದರೆ ಈ ಹಗರಣದ ಬಗ್ಗೆ ಅಪಾರ ಜ್ಞಾನ ಹಾಗೂ ಸಂಬಂಧ ಹೊಂದಿರುವಂತೆ ಕಾಣುತ್ತಿದೆ.
Advertisement
ಆರೋಪಿ ದಿವ್ಯಾ ಹಾಗರಗಿ ತನಿಖಾಧಿಕಾರಿಗಳಿಗೆ ನೀಡಿರುವ ಹೇಳಿಕೆ ಪ್ರಕಾರ ರುದ್ರೇಗೌಡ ಪಾಟೀಲ್ ಸಹೋದರರಿಂದ ಹಣ ಪಡೆಯಲಾಗಿದೆ.
ಹಾಗಾದರೆ ಹಗರಣದ ಹಿಂದಿರುವ ಶಕ್ತಿಗಳು ಕಾಂಗ್ರೆಸ್ ನಾಯಕರಲ್ಲವೇ?
ಕ್ವೀನ್ಸ್ ರಸ್ತೆಯಲ್ಲಿರುವ #ಭ್ರಷ್ಟಾಧ್ಯಕ್ಷ ರ ಅಕ್ರಮ ಹಣದ ಬ್ಯಾಂಕ್ಗೆ ಈ ಹಗರಣದ ಹಣ ತಲುಪಿರಬಹುದೇ?#CONgressPSIToolkit
— BJP Karnataka (@BJP4Karnataka) May 2, 2022
ಪ್ರಿಯಾಂಕ್ ಅವರೇ, ಸಿಐಡಿ ನೋಟಿಸ್ಗೆ ನೇರವಾಗಿ ಉತ್ತರಿಸಲು ಅಳುಕೇಕೆ? ಹಗರಣದಲ್ಲಿ ನಿಮ್ಮ ಪಾಲು ಹಾಗೂ ಭಾಗ ಏನೆಂಬುದು ಬಯಲಾಗಬಹುದೆಂಬ ಭಯ ನಿಮ್ಮನ್ನು ಕಾಡುತ್ತಿದೆಯೇ? ದಿವ್ಯಾ ಹಾಗರಗಿ ಬಂಧನಕ್ಕೆ 18 ದಿನ ಏಕಾಯ್ತು ಎಂದು ಪ್ರಶ್ನಿಸುವ ಪ್ರಿಯಾಂಕ್ ಖರ್ಗೆ ಅವರಿಗೆ ತಮ್ಮದೇ ಪಕ್ಷದ ಮುಖಂಡರು ಅಕ್ರಮದಲ್ಲಿರುವುದು ಗೊತ್ತೇ ಆಗಿಲ್ಲವೇ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ಜಹಾಂಗೀರ್‌ಪುರಿ ಹಿಂಸಾಚಾರ – ಆರೋಪಿಗಳನ್ನು ಮುಗ್ದರೆಂದ ಜಮಿಯತ್ ನಿಯೋಗ
Advertisement
ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಹಾಗೂ ವರ್ತನೆ ನೋಡಿದರೆ ಈ ಹಗರಣದ ಬಗ್ಗೆ ಅಪಾರ ಜ್ಞಾನ ಹಾಗೂ ಸಂಬಂಧ ಹೊಂದಿರುವಂತೆ ಕಾಣುತ್ತಿದೆ.
ಪ್ರಿಯಾಂಕ್ ಅವರೇ, ಸಿಐಡಿ ನೋಟಿಸ್ಗೆ ನೇರವಾಗಿ ಉತ್ತರಿಸಲು ಅಳುಕೇಕೆ?
ಹಗರಣದಲ್ಲಿ ನಿಮ್ಮ “ಪಾಲು” ಹಾಗೂ ಭಾಗ ಏನೆಂಬುದು ಬಯಲಾಗಬಹುದೆಂಬ ಭಯ ನಿಮ್ಮನ್ನು ಕಾಡುತ್ತಿದೆಯೇ?#CONgressPSIToolkit
— BJP Karnataka (@BJP4Karnataka) May 2, 2022
ಖರ್ಗೆಯವರೇ, 2 ಬಾರಿ ನೋಟಿಸ್ ನೀಡಿದರೂ ತಪ್ಪಿಸಿಕೊಂಡು ಓಡಾಡುತ್ತಿರುವ ನಿಮ್ಮ ಬಗ್ಗೆಯೂ ಜನ ಅನುಮಾನ ಪಡುತ್ತಿದ್ದಾರೆ. ಏನು ಹೇಳುತ್ತೀರಿ ಇದಕ್ಕೆ? ಪಿಎಸ್‍ಐ ನೇಮಕ ಹಗರಣದ ತನಿಖೆಯನ್ನು ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ. ತನಿಖೆಯ ವಿಚಾರದಲ್ಲಿ ಎಲ್ಲಿಯೂ ಎಡವಿಲ್ಲ. ವಿಳಂಬವೂ ಮಾಡಿಲ್ಲ. ಇದನ್ನೂ ಓದಿ: ನಾನು ಬಾಬರಿ ಮಸೀದಿ ಧ್ವಂಸದಲ್ಲಿ ಭಾಗಿಯಾಗಿದ್ದೆ, ಶಿವಸೇನೆ ನಾಯಕರು ಯಾರೂ ಇರಲಿಲ್ಲ : ಫಡ್ನವೀಸ್
Advertisement
ದಿವ್ಯಾ ಹಾಗರಗಿ ಬಂಧನಕ್ಕೆ 18 ದಿನ ಏಕಾಯ್ತು ಎಂದು ಪ್ರಶ್ನಿಸುವ @PriyankKharge ಅವರಿಗೆ ತಮ್ಮದೇ ಪಕ್ಷದ ಮುಖಂಡರು ಅಕ್ರಮದಲ್ಲಿರುವುದು ಗೊತ್ತೇ ಆಗಿಲ್ಲವೇ?
ಖರ್ಗೆಯವರೇ, 2 ಬಾರಿ ನೋಟಿಸ್ ನೀಡಿದರೂ ತಪ್ಪಿಸಿಕೊಂಡು ಓಡಾಡುತ್ತಿರುವ ನಿಮ್ಮ ಬಗ್ಗೆಯೂ ಜನ ಅನುಮಾನ ಪಡುತ್ತಿದ್ದಾರೆ, ಏನು ಹೇಳುತ್ತೀರಿ ಇದಕ್ಕೆ?#CONgressPSIToolkit
— BJP Karnataka (@BJP4Karnataka) May 2, 2022
ಹಗರಣದ ಹಿನ್ನೆಲೆಯಲ್ಲಿ ನೇಮಕಾತಿ ರದ್ದು ಮಾಡಲಾಗಿದೆ. ಆರೋಪಿಗಳನ್ನು ಕಾನೂನು ವ್ಯಾಪ್ತಿಗೆ ಒಳಪಡಿಸಲಾಗುತ್ತಿದೆ. ಇಷ್ಟರ ಮೇಲೂ ಕಾಂಗ್ರೆಸ್ ಏಕೆ ಕಳವಳಗೊಳ್ಳುತ್ತಿದೆ? ಪಿಎಸ್‍ಐ ನೇಮಕ ಹಗರಣದ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ವರ್ತನೆಯೇ ಅನುಮಾನ ಸೃಷ್ಟಿಸುತ್ತಿದೆ. ಸಿದ್ದರಾಮಯ್ಯ ಪರೀಕ್ಷೆ ರದ್ದುಪಡಿಸಿದ್ದು ಸರಿ ಎನ್ನುತ್ತಿದ್ದರೆ, ಭ್ರಷ್ಟಾಧ್ಯಕ್ಷ ಡಿಕೆಶಿ, ಪ್ರಿಯಾಂಕ್ ವಿರೋಧಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರೇ, ನೀವೆಲ್ಲ ಒಂದೆಡೆ ಕೂತು ಮೊದಲು ಒಮ್ಮತದ ನಿರ್ಧಾರ ಕೈಗೊಳ್ಳಿ ಎಂದು ಟೀಕಿಸಿದೆ.