ನವದೆಹಲಿ: ಒಟ್ಟು 894 ಕೋಟಿ ರೂ. ಆಸ್ತಿಯನ್ನು ಘೋಷಿಸಿಕೊಳ್ಳುವ ಮೂಲಕ ಭಾರತದ ಶ್ರೀಮಂತ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ.
ಅಸೋಷಿಯೇಷನ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಎಆರ್) ಸಂಸ್ಥೆ 2015-16ನೇ ಸಾಲಿನಲ್ಲಿ ಪಕ್ಷಗಳ ಆಸ್ತಿಯ ವಿವರಗಳನ್ನು ಪ್ರಕಟಿಸಿದ್ದು, ಕಾಂಗ್ರೆಸ್ 759 ಕೋಟಿ ರು. ಆಸ್ತಿ ಹೊಂದುವ ಮೂಲಕ ಪಟ್ಟಿಯಲ್ಲಿ 2ನೇ ಸ್ಥಾನ ಗಳಿಸಿದೆ.
Advertisement
ಯಾವ ಪಕ್ಷದ ಆಸ್ತಿ ಎಷ್ಟು?
ಬಿಜೆಪಿ 893.88 ಕೋಟಿ ರೂ., ಕಾಂಗ್ರೆಸ್ 758.79 ಕೋಟಿ ರೂ., ಬಿಎಸ್‍ಪಿ 559 ಕೋಟಿ ರೂ., ಸಿಪಿಎಂ 437.78 ಕೋಟಿ ರೂ., ಎಐಟಿಸಿ 44.99 ಕೋಟಿ ರೂ., ಎನ್‍ಸಿಪಿ 14.54 ಕೋಟಿ ರೂ., ಸಿಪಿಐ 10.18 ಕೋಟಿ ರೂ. ಆಸ್ತಿಯನ್ನು ಹೊಂದಿದೆ.
Advertisement
ಸಾಲ ಎಷ್ಟಿದೆ?
ಕಾಂಗ್ರೆಸ್ 329.43 ಕೋಟಿ ರೂ., ಬಿಜೆಪಿ 24.99 ಕೋಟಿ ರೂ., ಎಐಟಿಸಿ 12.07 ಕೋಟಿ ರೂ., ಸಿಪಿಐ 8.79 ಕೋಟಿ ರೂ., ಸಿಪಿಐಎಂ 20.285 ಕೋಟಿ ರೂ., ಬಿಎಸ್‍ಪಿ 1.63 ಕೋಟಿ ರೂ., ಎನ್‍ಸಿಪಿಗೆ 95 ಲಕ್ಷ ರೂ. ಸಾಲವಿದೆ.
Advertisement
2004-05ರಲ್ಲಿ ಬಿಜೆಪಿ 123.93 ಕೋಟಿ ರುಪಾಯಿ ಆಸ್ತಿ ಹೊಂದಿತ್ತು. 11 ವರ್ಷದಲ್ಲಿ ಅದರ ಆಸ್ತಿ ಪ್ರಮಾಣ ಹೆಚ್ಚಾಗಿದ್ದು ಈಗ 893.88 ಕೋಟಿ ರೂ. ಆಗಿದೆ. ಕಾಂಗ್ರೆಸ್ ಆಸ್ತಿ ಪ್ರಮಾಣ ಇದೇ ಅವಧಿಯಲ್ಲಿ 167.35 ಕೋಟಿ ರೂ. ಇದ್ದರೆ ಈಗ 758.79 ಕೋಟಿ ರೂ. ಆಗಿದೆ.
Advertisement
2004-05 ರ ಅವಧಿಯಲ್ಲಿ ಕಾಂಗ್ರೆಸ್ ಗೆ 8 ಕೋಟಿ ರೂ. ಸಾಲವಿದ್ದರೆ ಈಗ 329.43 ಕೋಟಿ ರೂ.ಗೆ ಏರಿಕೆಯಾಗಿದೆ. ಈ ಅವಧಿಯಲ್ಲಿ ಬಿಜೆಪಿಗೆ 14.29 ಕೋಟಿ ರೂ. ಸಾಲವಿದ್ದರೆ 2015-16 ಅವಧಿಯ ವೇಳೆಗೆ 24.99 ಕೋಟಿ ರೂ.ಗೆ ಏರಿಕೆಯಾಗಿದೆ.
ಇದನ್ನೂ ಓದಿ: 4 ವರ್ಷದಲ್ಲಿ ರಾಜಕೀಯ ಪಕ್ಷಗಳಿಗೆ 956.77 ಕೋಟಿ ರೂ. ದೇಣಿಗೆ: ಯಾವ ಪಕ್ಷಕ್ಕೆ ಎಷ್ಟು ಕೋಟಿ ಬಂದಿದೆ? ಕೊಟ್ಟವರು ಯಾರು?
Kolkata Press Conference – ADR report on assets and liabilities of National parties released pic.twitter.com/noD2zx6IOT
— ADR India & MyNeta (@adrspeaks) October 16, 2017