ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಮತ್ತೆ ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನ ದುರ್ಬಳಕೆ ಆರೋಪ ಕೇಳಿಬಂದಿದೆ. ಕಳೆದ ಮೂರು ಆರ್ಥಿಕ ವರ್ಷಗಳಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಮೀಸಲಾದ ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನ ದುರ್ಬಳಕೆ ಮಾಡಿಕೊಂಡ ಬಗ್ಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ (Chalavadi Narayanaswamy) ದಾಖಲೆ ಬಿಡುಗಡೆ ಮಾಡಿ ಆರೋಪಿಸಿದ್ದಾರೆ.
ಈ ದಾಖಲೆ ಪ್ರಕಾರ 2023-24 ರಲ್ಲಿ ರೂ.10,287.16 ಕೋಟಿ ರೂ. 2024-25 ರಲ್ಲಿ ರೂ.13,992.97 ಕೋಟಿ ರೂ. ಹಾಗೂ 2025-26 ರಲ್ಲಿ ರೂ.13,433.84 ಕೋಟಿ ರೂ. ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿಗಳಿಗೆ (Congress Guarantees) ಬಳಸಿಕೊಳ್ಳಲಾಗಿದೆ. ಸರ್ಕಾರದ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ಗೃಹಲಕ್ಷ್ಮಿ ಯೋಜನೆಯಿಂದ 93,79,763, ಅನ್ನ ಭಾಗ್ಯ ಯೋಜನೆಯಿಂದ 2,85,12,844 ಹಾಗೂ ಯುವನಿಧಿ ಯೋಜನೆಯಿಂದ 1,14,527 ಎಸ್‌ಸಿ-ಎಸ್‌ಟಿ ಸಮುದಾಯದವರಿಗೆ ಸವಲತ್ತುಗಳು ಸಿಕ್ಕಿದೆ. ಇದರ ಜತೆಗೆ ಶಕ್ತಿ ಯೋಜನೆಯಲ್ಲೂ ಕಳೆದ ಮೂರು ವರ್ಷದಲ್ಲಿ ಲಕ್ಷಾಂತರ ಎಸ್‌ಸಿ-ಎಸ್‌ಟಿ ಸಮುದಾಯದ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಹಾಗಾಗಿ ಈ ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನ ಬಳಕೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ರಾಜ್ಯದ ರೈತರ ಜೊತೆ ಚೆಲ್ಲಾಟ, ಪ್ರತಿಭಟನೆಗೆ ಕೇಂದ್ರವೇ ಕಾರಣ – ಸಿದ್ದರಾಮಯ್ಯ ಆಕ್ರೋಶ
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಶ್ರೇಯೋಭಿವೃದ್ಧಿಗಾಗಿ ಮೀಸಲಿಟ್ಟಿರುವ SCSP/TSP ಯೋಜನೆಯ ರೂ.38,000 ಕೋಟಿ ನಿಧಿಯನ್ನು ಕಾಂಗ್ರೆಸ್ ಸರ್ಕಾರವು ಅನ್ಯ ಯೋಜನೆಗಳಿಗೆ ವರ್ಗಾಯಿಸಿ ದುರ್ಬಳಕೆ ಮಾಡಿರುವುದು ಅತ್ಯಂತ ಖಂಡನೀಯ.
ಈ ಕುರಿತು ನಾನು 2023 ರಿಂದಲೂ ವಿಧಾನ ಪರಿಷತ್ತಿನ ಸದನದಲ್ಲಿ ಹಾಗೂ ಹೊರಗಡೆ ನಿರಂತರವಾಗಿ ಸರ್ಕಾರವನ್ನು… pic.twitter.com/oXvQ4etMf9
— Chalavadi Narayanaswamy (@NswamyChalavadi) November 6, 2025
ಆದ್ರೆ ಸರ್ಕಾರದ ಈ ನಡೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ದಾಖಲೆ ಬಿಡುಗಡೆ ಮಾಡಿದ ಛಲವಾದಿ ನಾರಾಯಣ ಸ್ವಾಮಿ ಕಿಡಿ ಕಾರಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಶ್ರೇಯೋಭಿವೃದ್ಧಿಗಾಗಿ ಮೀಸಲಿಟ್ಟಿರುವ SCSP/TSP ಯೋಜನೆಯ ರೂ.38,000 ಕೋಟಿ ನಿಧಿಯನ್ನು ಕಾಂಗ್ರೆಸ್ ಸರ್ಕಾರವು ಅನ್ಯ ಯೋಜನೆಗಳಿಗೆ ವರ್ಗಾಯಿಸಿ ದುರ್ಬಳಕೆ ಮಾಡಿರುವುದು ಅತ್ಯಂತ ಖಂಡನೀಯ. ಯೋಜನೆಯ ಹಣ ದುರ್ಬಳಕೆಯ ಕ್ರಮವನ್ನು ಪದೇ ಪದೇ ಸಮರ್ಥಿಸಿಕೊಳ್ಳುತ್ತಿರುವುದು ವಿಪರ್ಯಾಸ. ಈ ನಿಧಿಗಳನ್ನು ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳು, ಉಚಿತ ವಿದ್ಯುತ್, ಉಚಿತ ಪ್ರಯಾಣದಂತಹ ಸಾಮಾನ್ಯ ಯೋಜನೆಗಳ ವೆಚ್ಚಗಳಿಗೆ ಬಳಸುವ ಮೂಲಕ ಪರಿಶಿಷ್ಟ ಸಮುದಾಯಗಳ ಹಕ್ಕುಗಳನ್ನು ಹರಣ ಮಾಡುತ್ತಿದೆ. ಇದು ಕೇವಲ ಆರ್ಥಿಕ ಅನ್ಯಾಯವಲ್ಲ, ಸಾಮಾಜಿಕ ನ್ಯಾಯದ ಧೋರಣೆಯ ಮೇಲಿನ ಗಂಭೀರ ಅವಮಾನ ಎಂದು ಛಲವಾದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿಯವರೆಗೆ ಬಳಕೆ ಮಾಡಿಕೊಂಡಿರುವ ಹಣವನ್ನು ಮರಳಿ SCSP/TSP ಯೋಜನೆಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬಿಡದಿ ಇಂಟಿಗ್ರೇಟೆಡ್ ಟೌನ್‌ಶಿಪ್ ವಿರುದ್ಧ ತೀವ್ರಗೊಂಡ ರೈತರ ಹೋರಾಟ – ರಸ್ತೆ ತಡೆದು ಪ್ರತಿಭಟನೆ
ಗ್ಯಾರಂಟಿಗಳಿಗೆ ಯಾವಾಗ ಎಷ್ಟು ದುರ್ಬಳಕೆ?
* 2023-24 ರಲ್ಲಿ ರೂ.10,287.16 ಕೋಟಿ.
* 2024-25 ರಲ್ಲಿ ರೂ.13,992.97 ಕೋಟಿ.
* 2025-26 ರಲ್ಲಿ ರೂ.13,433.84 ಕೋಟಿ ರೂ.
ಯಾವ ಗ್ಯಾರಂಟಿಯಲ್ಲಿ ಎಷ್ಟು ಎಸ್‌ಸಿ-ಎಸ್‌ಟಿ ಫಲಾನುಭವಿಗಳಿಗೆ ಲಾಭ!?
* ಗೃಹಲಕ್ಷ್ಮಿ ಯೋಜನೆ – 93,79,763.
* ಅನ್ನ ಭಾಗ್ಯ ಯೋಜನೆ- 2,85,12,844.
* ಯುವನಿಧಿ ಯೋಜನೆ- 1,14,527.

