ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿತದ ವಿರುದ್ಧ ಬಿಜೆಪಿ (BJP) ಪ್ರತಿಭಟನೆ (Protest) ನಡೆಸಿದ್ದು, ಬಳಿಕ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ನೇತೃತ್ವದಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಕಾಂಗ್ರೆಸ್ (Congress) ವಿರುದ್ಧ ಇಂದು (ಬುಧವಾರ) ಆಯೋಜಿಸಿದ್ದ ಬಿಜೆಪಿ ಪ್ರತಿಭಟನೆಯ ಬಳಿಕ ಬಸವರಾಜ ಬೊಮ್ಮಾಯಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲೇ ರಾಜ್ಯದಲ್ಲಿ ದಂಗಲ್ ಶುರುವಾಗಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಸಬ್ ರಿಜಿಸ್ಟರ್ ವರ್ಗಾವಣೆಯಲ್ಲಿ ಸಿಂಡಿಕೇಟ್ ಹಾವಳಿ ಇಲ್ಲದಂತೆ ನಿಯಮ ಜಾರಿ: ಕೃಷ್ಣಭೈರೇಗೌಡ
Advertisement
Advertisement
ಸಾಮಾನ್ಯ ಜನರಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ಇದೆ. ಜೈನ ಮುನಿಗಳು, ಸರ್ವಸಂಗ ಪರಿತ್ಯಾಗಿಗಳಿಗೆ ರಕ್ಷಣೆ ಇಲ್ಲವಾಗಿದೆ. ಕೊಲೆಗಳು, ಸುಲಿಗೆಗಳು ಹೆಚ್ಚಾಗಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದು ಬಿದ್ದರೂ ಸರ್ಕಾರಕ್ಕೆ ಏನೂ ಅನಿಸುತ್ತಿಲ್ಲ. ನಮ್ಮ ಕಾರ್ಯಕರ್ತರ ಕಗ್ಗೊಲೆಯಾಗಿದೆ. ಪೊಲೀಸ್ ವ್ಯವಸ್ಥೆ ಸಂಪೂರ್ಣ ವಿಫಲವಾಗಿದ್ದು, ನಿಷ್ಕ್ರಿಯವಾಗಿದೆ. ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುತ್ತಿದೆ. ಅಲ್ಲದೆ ನಮ್ಮ ಕಾರ್ಯಕರ್ತರ ಮೇಲೆ ಕೇಸುಗಳನ್ನು ಹಾಕುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಇದನ್ನೂ ಓದಿ: ಮುಂದ್ರಾಕ ಶುಲ್ಕ ಹೆಚ್ಚಳ ಇಲ್ಲ, ಜಮೀನು ಮೌಲ್ಯ ಪರಿಷ್ಕರಣೆ: ಕೃಷ್ಣಭೈರೇಗೌಡ
Advertisement
ಜನಸಾಮಾನ್ಯರ ಕೊಲೆ ಆಗುತ್ತಿದೆ. ನಿನ್ನೆ ಬೆಂಗಳೂರಿನಲ್ಲಿ (Bengaluru) ಹಾಡಹಗಲೇ ಐಟಿ ಕಂಪನಿಯ ಇಬ್ಬರು ಮುಖ್ಯಸ್ಥರನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಆ ವ್ಯಕ್ತಿ ಕೃತ್ಯದ ಕುರಿತು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಾಕಿದ್ದಾನೆ. ಕೊಲೆಗಡುಕರ ನಿರ್ಭೀತಿ, ಉದ್ಧಟತನಕ್ಕೆ ಇದು ಸಾಕ್ಷಿಯಂತಿದೆ. ಅವರಿಗೆ ಕಾನೂನು ಸುವ್ಯವಸ್ಥೆ, ಕಾನೂನು, ಪೊಲೀಸರ ಭಯ ಇಲ್ಲದ ಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಫ್ರಾನ್ಸ್ ಪ್ರವಾಸದ ನಡುವೆಯೂ ಅಬುಧಾಬಿಗೆ ಭೇಟಿ ನೀಡಲಿದ್ದಾರೆ ಮೋದಿ
Advertisement
ಆಡಳಿತದಲ್ಲಿ ಬದಲಾವಣೆ ಆಗಿದೆ. ಆಡಳಿತ ವರ್ಗದಿಂದ ನಮಗೆ ರಕ್ಷಣೆ ಸಿಗುತ್ತದೆ ಎಂದು ಎಲ್ಲ ಸಮಾಜಘಾತುಕ ವ್ಯಕ್ತಿಗಳು ಇವತ್ತು ಕರ್ನಾಟಕದ ಎಲ್ಲೆಡೆ ಗಲಾಟೆ, ಹತ್ಯೆಗಳಲ್ಲಿ ತೊಡಗಿದ್ದಾರೆ. ಕೆಳಹಂತದ ಪೊಲೀಸರು ಮತ್ತು ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ನುಡಿದರು. ಪ್ರಾಮಾಣಿಕ ಪೊಲೀಸ್ ಒಬ್ಬರು ಮರಳು ಮಾಫಿಯಾ ತಡೆಯಲು ಹೋದಾಗ ಅವರ ಹತ್ಯೆ ಆಗಿದೆ. ಪೊಲೀಸರ ನೈತಿಕತೆ ಕುಸಿಯುವಂತೆ ಮಾಡಿದ್ದಾರೆ. ಇನ್ನೊಂದೆಡೆ ಹಿರಿಯ ಪೊಲೀಸ್ ಅಧಿಕಾರಿಗಳು ಬಗ್ಗಿನಿಂತು ಈ ಸರ್ಕಾರದ ಮುಂದೆ ಆದೇಶಗಳನ್ನು ಪಾಲಿಸುವಂತೆ ಮಾಡಲಾಗುತ್ತಿದೆ. ಇದರಿಂದ ನ್ಯಾಯನಿಷ್ಠುರ ತನಿಖೆ ಆಗುತ್ತಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗುವ ಲಕ್ಷಣ ಇಲ್ಲವಾಗಿದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಬಂದ್ಮೇಲೂ ಸಾಬ್ರಿಗೆ ರಕ್ಷಣೆ ಇಲ್ಲ: ರೇವಣ್ಣ
ಈಗಲೇ ಇದನ್ನು ಹದ್ದುಬಸ್ತಿನಲ್ಲಿ ಇಡದಿದ್ದರೆ ಜನಸಾಮಾನ್ಯರು ನಿರ್ಭಯವಾಗಿ ಓಡಾಡಲು ಕಷ್ಟ. ಅದಕ್ಕಾಗಿ ಸದನದ ಒಳಗೆ ಹೋರಾಟ ಮಾಡಿದ್ದೇವೆ. ಹೊರಗಡೆಯೂ ಹೋರಾಟ ನಡೆಸಲಾಗುತ್ತಿದೆ. ಈ ದಪ್ಪ ಚರ್ಮದ ಸರ್ಕಾರವು ಹಠಮಾರಿತನ ತೋರುತ್ತಿದೆ. ಜೈನಮುನಿಗಳ (Jain Muni) ಕೊಲೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಹಗುರವಾಗಿ ಪರಿಗಣಿಸಿದ್ದಾರೆ. ಜೈನಮುನಿಗಳ ಹತ್ಯೆಯ ಸಿಬಿಐ (CBI) ತನಿಖೆಯ ನಮ್ಮ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ. ಅದನ್ನು ವಿರೋಧಿಸಿ ಇವತ್ತು ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡಿ ಪಾದಯಾತ್ರೆ ಮಾಡಿ ಘನತೆವೆತ್ತ ಗವರ್ನರ್‌ಗೆ ಎಲ್ಲಾ ಮಾಹಿತಿ ಕೊಟ್ಟಿದ್ದೇವೆ. ಕಲಬುರ್ಗಿ, ಜೇವರ್ಗಿ, ಬೆಳಗಾವಿ, ಸಕಲೇಶಪುರ, ಹಾಸನ, ಮೈಸೂರು, ಚಾಮರಾಜನಗರ, ನಂಜನಗೂಡಿನಲ್ಲಿ ಸೇರಿ ಎಲ್ಲಾ ಕಡೆ ಆದ ದುರ್ಘಟನೆಗಳ ವಿವರ ಕೊಟ್ಟಿದ್ದೇವೆ. ರಾಜ್ಯಪಾಲರು ತಮ್ಮಲ್ಲಿರುವ ಅಧಿಕಾರ ಬಳಸಿ ಡಿಜಿಪಿ, ರಾಜ್ಯ ಮುಖ್ಯ ಕಾರ್ಯದರ್ಶಿಯನ್ನು ಕರೆಸಿಕೊಂಡು ಕಾನೂನು, ಸುವ್ಯವಸ್ಥೆಯನ್ನು ಮರಳಿ ಸ್ಥಾಪಿಸಲು ಸೂಚಿಸಬೇಕು. ಸಿಬಿಐ ತನಿಖೆಗೆ ನಿರ್ದೇಶನ ಕೊಡಬೇಕೆಂದು ಕೋರಿರುವುದಾಗಿ ತಿಳಿಸಿದರು. ಇದನ್ನೂ ಓದಿ: ಟ್ರೋಲ್‍ಗೆ ಕೇರ್ ಮಾಡ್ಬೇಡಿ- ವಿಧಾನಸಭೆಯಲ್ಲಿ ಸ್ಪೀಕರ್ ಕಿವಿಮಾತು
ಇಲ್ಲಿನ ಕಾನೂನು ಸುವ್ಯವಸ್ಥೆ ಕುಸಿತದ ಬಗ್ಗೆ ಕೇಂದ್ರ ಸರಕಾರಕ್ಕೆ ಮಾಹಿತಿ ಕೊಡಲು ಕೋರಿದ್ದೇವೆ. ಡಿಜಿಪಿ, ಮುಖ್ಯ ಕಾರ್ಯದರ್ಶಿಯನ್ನು ಕರೆಸಿಕೊಂಡು ಮಾಹಿತಿ ಪಡೆದು ಸೂಕ್ತ ನಿರ್ದೇಶನ ಕೊಡುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ. ಕಾನೂನು- ಸುವ್ಯವಸ್ಥೆ ಕಾಪಾಡುವುದು ಸರಕಾರದ ಆದ್ಯ ಕರ್ತವ್ಯ. ಅಮಾಯಕರಿಗೆ ತೊಂದರೆ ಆಗಬಾರದು. ಭಯದ ವಾತಾವರಣ ಇರಬಾರದು ಎಂದ ಅವರು, ಕಾನೂನಿನಡಿ ಸೂಕ್ತ ನಿರ್ದೇಶನ ಕೊಡುವುದಾಗಿ ಹೇಳಿದ್ದಾರೆ. ಗವರ್ನರ್ ಅವರ ಕ್ರಮವನ್ನು ಗಮನಿಸುತ್ತೇವೆ. ಅಲ್ಲದೇ ಈ ವಿಚಾರವನ್ನು ಜನರ ಬಳಿಗೆ ಒಯ್ಯುತ್ತೇವೆ. ಕಾನೂನು ಸುವ್ಯವಸ್ಥೆ ಬಗ್ಗೆ ಪ್ರತಿ ಜಿಲ್ಲೆ, ತಾಲೂಕಿನಲ್ಲಿ ಪ್ರತಿಭಟನೆ ಮಾಡಿ ಜನಜಾಗೃತಿ ಕೆಲಸವನ್ನು ನಾವು ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ರಾಗಾ ಸಂಸತ್ ಸದಸ್ಯತ್ವ ಅನರ್ಹ ಖಂಡಿಸಿ ಕಾಂಗ್ರೆಸ್‌ನಿಂದ ಮೌನ ಪ್ರತಿಭಟನೆ
Web Stories