ಉಡುಪಿ: ಕರ್ನಾಟಕ ವಿಧಾನಸಭಾ ಚುನಾವಣೆಯನ್ನು (Karnataka Election) ಬಿಜೆಪಿ ಹೈಕಮಾಂಡ್ ಸವಾಲಾಗಿ ಸ್ವೀಕರಿಸಿದ್ದು, ಪ್ರಧಾನಿ ಗೃಹ ಸಚಿವರು ಪಕ್ಷದ ರಾಷ್ಟ್ರೀಯ ನಾಯಕರು ಸರತಿ ಸಾಲಿನಲ್ಲಿ ರಾಜ್ಯಕ್ಕೆ ಭೇಟಿ ಕೊಡುತ್ತಿದ್ದಾರೆ. ಬಿಜೆಪಿಯ ಭದ್ರಕೋಟೆ ಉಡುಪಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ (JP Nadda) ಪ್ರವಾಸ ಹೊರಟಿದ್ದಾರೆ. 1,111 ಬೂತ್ ಗಳಿಗೆ ನಡ್ಡಾ ಕ್ಲಾಸ್ ಕೊಡಲಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ 2023 ರಂಗು ಪಡೆಯುತ್ತಿದೆ. ಕಾಂಗ್ರೆಸ್ಸಿಗೆ (Congress) ಅಳಿವು ಉಳಿವಿನ ಪ್ರಶ್ನೆ ಆದರೆ, ಬಿಜೆಪಿಗೆ ಈ ಚುನಾವಣೆ ಪ್ರತಿಷ್ಠೆ. ರಾಜ್ಯ ನಾಯಕರು ಟೊಂಕ ಕಟ್ಟಿಕೊಂಡು ಚುನಾವಣಾ ತಯಾರಿ ನಡೆಸುತ್ತಿದ್ದು, ವಾರಕ್ಕೊಬ್ಬರಂತೆ ಕೇಂದ್ರದ ಬಿಜೆಪಿ ನಾಯಕರು ಕರ್ನಾಟಕಕ್ಕೆ (Karnataka) ಪ್ರವಾಸ ಬರುತ್ತಿದ್ದಾರೆ. ಇಂದು ಉಡುಪಿಯಲ್ಲಿ ನಡ್ಡಾ ಮೂರು ಪ್ರಮುಖ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಕೊಟ್ಟ ಟಾಸ್ಕ್‌ನಲ್ಲಿ ಕರ್ನಾಟಕ ಬಿಜೆಪಿ ಫೇಲ್
ಮಂಗಳೂರಿನಲ್ಲಿ ವಾಸ್ತವ್ಯ ಹೂಡಿರುವ ಅವರು, ಉಡುಪಿ ಜಿಲ್ಲೆಗೆ ಬೆಳಗ್ಗೆ 9:30 ಕ್ಕೆ ಆಗಮಿಸಲಿದ್ದಾರೆ. ಶ್ರೀ ಕೃಷ್ಣ ಮಠ ಭೇಟಿ, ಸ್ವಾಮೀಜಿಗಳ ಜೊತೆ ಸಮಾಲೋಚನೆ ಮತ್ತು ಸಲಹೆಗಳನ್ನು ಪಡೆಯಲಿದ್ದಾರೆ. ಉಡುಪಿಯ ಎಂಜಿಎಂ ಮೈದಾನದಲ್ಲಿ ಜಿಲ್ಲೆಯ 1,111 ಬೂತ್ ಗಳ 14,000 ಕಾರ್ಯಕರ್ತರ ಸಭೆಯನ್ನು ನಡೆಸಲಿದ್ದಾರೆ.
ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಚುನಾವಣೆಗೆ ಈ ಕಾರ್ಯಕ್ರಮದ ಮೂಲಕ ಚಾಲನೆ ಸಿಗಲಿದೆ ಎಂದು ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 20,000 ಸಾರ್ವಜನಿಕರನ್ನು ಒಳಗೊಂಡ ಸಭೆ ಮಧ್ಯಾಹ್ನ ನಡೆಯಲಿದೆ. ನಡ್ಡಾ ಕಾರ್ಯಕ್ರಮದ ಹತ್ತಕ್ಕಿಂತ ಹೆಚ್ಚಿನ ಬ್ಯಾನರ್ ಗಳನ್ನು ಕೆಲ ಕಿಡಿಗೇಡಿಗಳು ಹರಿದು ಹಾಕಿ ಗೊಂದಲ ಸೃಷ್ಟಿ ಮಾಡಿದ್ದಾರೆ.
ಉಡುಪಿ ಕಾರ್ಯಕ್ರಮದ ಬಳಿಕ ಚಿಕ್ಕಮಗಳೂರಿನ ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ಸಂಜೆ 4:45ಕ್ಕೆ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಇದಾದ ಬಳಿಕ ರಾತ್ರಿ 7:45ಕ್ಕೆ ಶೃಂಗೇರಿಗೆ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k
I don’t think the title of your article matches the content lol. Just kidding, mainly because I had some doubts after reading the article.