– ಮುನಿರತ್ನ ಆರೋಗ್ಯ ವಿಚಾರಿಸಿದ ಬಿವೈವಿ
ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರ ಬಂದಾಗಿನಿಂದ ವಿರೋಧ ಪಕ್ಷದ ಶಾಸಕರ ಮೇಲೆ ದಬ್ಬಾಳಿಕೆ ಆಗುತ್ತಿದೆ. ಇದ್ಯಾವುದು ಸರ್ಕಾರದ ಕುಮ್ಮಕ್ಕು ಇಲ್ಲದೆ ಆಗಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B.Y Vijayendra) ಕಿಡಿಕಾರಿದ್ದಾರೆ.
Advertisement
ಮೊಟ್ಟೆ ದಾಳಿಗೆ ಒಳಗಾಗಿ ಆಸ್ಪತ್ರೆಯಲ್ಲಿರುವ ಶಾಸಕ ಮುನಿರತ್ನರನ್ನು (Munirathna) ಭೇಟಿಯಾಗಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಈ ವೇಳೆ, ಮುನಿರತ್ನ ಮೇಲಿನ ದಾಳಿ ಸಣ್ಣ ಪ್ರಕರಣದ್ದಲ್ಲ. ಅವರ ಮೇಲೆ ಷಡ್ಯಂತ್ರ ಬಹಳ ಕಾಲದಿಂದ ನಡೆಯುತ್ತಿದೆ. ಇದರಿಂದ ಕಾರ್ಯಕರ್ತರ ಮನಸ್ಸಿಗೆ ಬಹಳ ಬೇಜಾರಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
Advertisement
Advertisement
ಸಿಟಿ ರವಿ ಪ್ರಕರಣದಲ್ಲಿ ಪೊಲೀಸರು ಹೇಗೆ ನಡೆಸಿಕೊಂಡಿದ್ದಾರೆ ಗೊತ್ತಿದೆ. ಈ ಸರ್ಕಾರ ಪೊಲೀಸರನ್ನ ಬಳಸಿಕೊಂಡು ದಬ್ಬಾಳಿಕೆ ಮಾಡುತ್ತಿದೆ. ಬೆದರಿಕೆ, ಒತ್ತಡ ಹಾಕಿ ಏನೂ ಮಾಡಲು ಆಗಲ್ಲ. ಜನಪ್ರತಿನಿಧಿಗಳನ್ನ ಬೆದರಿಸುವುದು ಅಕ್ಷಮ್ಯ ಅಪರಾಧ ಎಂದಿದ್ದಾರೆ.
Advertisement
ಮುನಿರತ್ನ ಅವರಿಗೆ ನೀಡಿದ್ದ ಗನ್ ಮ್ಯಾನ್ ವಾಪಸ್ ಪಡೆದಿದ್ದಾರೆ. ಅವರು ಜನಪ್ರತಿನಿಧಿ ಅಲ್ವಾ? ಮುನಿರತ್ನ ಅವರು ಗಟ್ಟಿಯಾಗಿದ್ದಾರೆ. ಅವರನ್ನ ಕುಗ್ಗಿಸುವ ಕೆಲಸ ಮಾಡಿದ್ದಾರೆ. ನಮ್ಮ ಶಾಸಕರ ವಿರುದ್ಧ ಷಡ್ಯಂತ್ರದ ವಿರುದ್ಧ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ಅವರು ಹೇಳಿದ್ದಾರೆ.