ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆಯೇ ವಿಶ್ವಾಸ ಮತಯಾಚನೆ ಮಾಡುವ ಅಗ್ನಿ ಪರೀಕ್ಷೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವಾಸಮತ ಸಾಬೀತು ಮಾಡುವ ಸಲುವಾಗಿ ಯಡಿಯೂರಪ್ಪನವರು ಫುಲ್ ಟೆನ್ಷನ್ ನಲ್ಲಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಮನೆಯಿಂದ ವಿಧಾನಸೌಧಕ್ಕೆ ಬರುವಾಗ ಕಾರ್ ಚಾಲಕನ ಮೇಲೆ ಕೈ ಮಾಡಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.
ವಿಧಾನಸೌಧ ಪ್ರವೇಶಿಸುವಾಗ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಕರೆ ಮಾಡಿದಾಗ, ಯೆಸ್ ಸರ್, ನೋ ಪ್ರಾಬ್ಲಂ-ಉಮೇಶ್ ಕತ್ತಿ ಹ್ಯಾಂಡಲ್ ಮಾಡ್ತಾರೆ, ಡೋಂಟ್ ವೆರಿ ಅಂತಾ ಒಳ ಹೋಗಿದ್ದಾರೆ. ಈ ಮೊದಲು ಕಾರಿನಿಂದ ಹೊರ ಬಂದಾಗ ಪಬ್ಲಿಕ್ ಟಿವಿ ವರದಿಗಾರ ಕೆಲವು ಪ್ರಶ್ನೆಗಳನ್ನು ಕೇಳಲು ಮುಂದಾದಗ ಮೊದಲೆರೆಡು ಪ್ರಶ್ನೆಗಳಿಗೆ ಉತ್ತರಿಸಿದ್ರು. ಮೂರನೇ ಪ್ರಶ್ನೆ ಕೇಳುತ್ತಿದ್ದಂತೆ ಕೋಪಗೊಂಡು ವರದಿಗಾರನ್ನು ಹಿಂದಕ್ಕೆ ತಳ್ಳಿ ಮುನ್ನಡೆದ್ರು.
Advertisement
ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಂತರ ಗುರುವಾರ ಬೆಳಗ್ಗೆ ಯಡಿಯೂರಪ್ಪವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿಯಾಗಿ ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿದ್ದವು. ಇಂದು ಅರ್ಜಿಯನ್ನು ವಿಚಾರಣೆ ನಡೆಸಿದ ತ್ರಿ ಸದಸ್ಯ ಪೀಠ ಶನಿವಾರ 4ಗಂಟೆಯೊಳಗಾಗಿ ವಿಧಾನಸಭೆಯಲ್ಲಿ ಬಹುಮತ ಸಾಧಿಸಬೇಕೆಂದು ಮಹತ್ವವಾದ ತೀರ್ಪನ್ನು ನೀಡಿದೆ.