ಬೆಂಗಳೂರು: ಸದ್ಯ ರಾಜಾದ್ಯಂತ ಸಂಚಲನ ಸೃಷ್ಟಿಸಿರುವ `ಸಿದ್ದು ನಿಜಕನಸುಗಳು’ (Siddu NijaKanasugalu) ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಈಗ ಆಯೋಜಿಸಿದ್ದಕ್ಕಿಂತಲೂ ದೊಡ್ಡಮಟ್ಟದಲ್ಲಿ ನಡೆಸಲು ಆಡಳಿತ ಪಕ್ಷ ಬಿಜೆಪಿ (BJP) ಪ್ಲಾನ್ ಮಾಡಿರುವುದಾಗಿ ಮೂಲಗಳು ತಿಳಿಸಿವೆ.
`ಸಿದ್ದು ನಿಜ ಕನಸುಗಳು’ ಪುಸ್ತಕದಿಂದ ವಿಚಲಿತರಾಗಿದ್ದ ಸಿದ್ದರಾಮಯ್ಯ (Siddaramaiah) ಅಂಡ್ ಟೀಂ ಪುಸ್ತಕ ಬಿಡುಗಡೆ ಅಂತಾ ಘೋಷಣೆ ಆಗ್ತಿದ್ದಂತೆ ಕೋರ್ಟ್‌ನಿಂದ (Court) ತಡೆಯಾಜ್ಞೆ ತಂದಿದೆ. ಇದೇ ಸಿದ್ದರಾಮಯ್ಯ ಅವರ ವೀಕ್ನೆಸ್ ಅನ್ನ ಬಳಸಿಕೊಳ್ಳೋಕೆ ಬಿಜೆಪಿ ಪ್ಲಾನ್ ಮಾಡಿದೆ. ಸಿದ್ದರಾಮಯ್ಯರನ್ನೇ ನೇರ ಟಾರ್ಗೆಟ್‌ಗೆ ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ.
Advertisement
Advertisement
ಹೌದು. ಸಿದ್ದರಾಮಯ್ಯ ಅವರನ್ನ ಮಾತ್ರವೇ ಟಾರ್ಗೆಟ್ ಮಾಡ್ತಿರೋ ಬಿಜೆಪಿ, ಮತ್ತೆ ಪುಸ್ತಕ ರಿಲೀಸ್‌ಗೆ ಸಿದ್ಧತೆ ನಡೆಸಿದೆ. ಕೋರ್ಟ್ನ ತಡೆಯಾಜ್ಞೆ ತೆರವುಗೊಳಿಸೋಕೆ ವಿಶೇಷ ವಕೀಲರ ತಂಡವನ್ನ ಸಿದ್ಧತೆ ಮಾಡಿಕೊಂಡಿದೆ. ತಡೆಯಾಜ್ಞೆ ತೆರವಾಗುತಿದ್ದಂತೆ ಈಗ ಆಯೋಜಿಸಿದ್ದಕ್ಕಿಂತಲೂ ದೊಡ್ಡ ಮಟ್ಟದ ಕಾರ್ಯಕ್ರಮದಲ್ಲಿ ಸಿದ್ದು ನಿಜಕನಸುಗಳು ಕೃತಿ ಬಿಡುಗಡೆಗೆ ಪ್ಲಾನ್ ಮಾಡಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆಗೆ ತಡೆಯಾಜ್ಞೆ
Advertisement
Advertisement
ಹಾಗಾದ್ರೆ ಬಿಜೆಪಿ ಪ್ಲಾನ್ ಏನಿದೆ?: ಅದಕ್ಕಾಗಿ ವಿಶೇಷ ಲಾಯರ್‌ಗಳ ತಂಡ ಸಿದ್ಧತೆ ಮಾಡಕೊಂಡಿರೋ ಕಮಲ ಪಾಳಯ ಸಿದ್ದು ನಿಜ ಕನಸುಗಳು ಪುಸ್ತಕಕ್ಕೆ ಕೋರ್ಟ್ ಕೊಟ್ಟಿರೋ ತಡೆಯಾಜ್ಞೆ ತೆರವು ಮಾಡಲು ಕ್ರಮವಹಿಸೋದು. ತಡೆಯಾಜ್ಞೆ ತೆರವಾದ ಕೂಡಲೇ ಮತ್ತೆ ಸಿದ್ದರಾಮಯ್ಯ ವಿರುದ್ಧ ಅಟ್ಯಾಕ್ ಮಾಡೋದು. ಈಗ ಮಾಡಿದ ಕಾರ್ಯಕ್ರಮಕ್ಕಿಂತ ದೊಡ್ಡ ಕಾರ್ಯಕ್ರಮ ಮಾಡಿ ಪುಸ್ತಕ ರಿಲೀಸ್ ಮಾಡುವುದು. ಇದನ್ನೂ ಓದಿ: ಸಿದ್ದು ನಿಜಕನಸು ಪುಸ್ತಕಕ್ಕೆ ಸಿದ್ದರಾಮಯ್ಯ ಕೌಂಟರ್- ಸರಣಿ ಪೋಸ್ಟರ್ ಮೂಲಕ ತಿರುಗೇಟು
ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ಸಿದ್ದು ನಿಜ ಕನಸುಗಳು ಪುಸ್ತಕ ರಿಲೀಸ್ ಮಾಡೋದು. ಕೊಲೆಯಾದ ಹಿಂದೂ ಕಾರ್ಯಕರ್ತರ ಕುಟುಂಬ ಸದಸ್ಯರು, ಮತಾಂತರಕ್ಕೆ ಬಲಿಯಾದ ಕೊಡಗು ಭಾಗದ ಜನರನ್ನ ಕರೆಸಿ ಕಾರ್ಯಕ್ರಮದಲ್ಲಿ ಮಾತನಾಡಿಸುವುದು. ಕೇವಲ ಬೆಂಗಳೂರು ಮಾತ್ರವಲ್ಲ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಪುಸ್ತಕ ಬಿಡುಗಡೆ ಮಾಡಲು ಪ್ಲಾನ್. ಪಕ್ಷದ ಪ್ರಮುಖ ಮನೇತೃತ್ವದಲ್ಲೇ ಪ್ರಮುಖ ಜಿಲ್ಲೆಗಳಲ್ಲಿ ಪುಸ್ತಕ ಬಿಡುಗಡೆ ಮಾಡಲು ಯೋಜನೆ ರೂಪಿಸಿರುವುದಾಗಿ ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಕೋರ್ಟ್ ತಡೆಯಾಜ್ಞೆ: ಸೋಮವಾರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಪುರಭವನದಲ್ಲಿ `ಸಿದ್ದು ನಿಜಕನಸುಗಳು ಸಂಪುಟ-1′ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವಥ್ ನಾರಾಯಣ (CN Ashwath Narayan) ಅವರು ಪುಸ್ತಕ ಬಿಡುಗಡೆಗೊಳಿಸಬೇಕಿತ್ತು. ಈ ಪುಸ್ತಕ ಬಿಡುಗಡೆಯಾಗುತ್ತಿದೆ ಎಂಬ ವಿಚಾರ ತಿಳಿದು ಪುರಭವವನದ ಬಳಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದರು. ಪುಸ್ತಕ ಬಿಡುಗಡೆ ವಿಚಾರ ಚರ್ಚೆ ಆಗುತ್ತಿದ್ದಂತೆ ಸಿದ್ದರಾಮಯ್ಯ ಪುತ್ರ ಯತೀಂದ್ರ (Yathindra Siddaramaiah) ಅವರು ಕೋರ್ಟ್ ಮೊರೆ ಹೋಗಿ ತಡೆ ನೀಡುವಂತೆ ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ ನಗರದ ಸಿಟಿ ಸಿವಿಲ್ ಕೋರ್ಟ್ (City Civil Court) ಪುಸ್ತಕ ಬಿಡುಗಡೆಗೆ ತಡೆ ನೀಡಿದೆ. ಪುಸ್ತಕ ಬಿಡುಗಡೆ, ಮಾರಾಟ ಅಲ್ಲದೇ ಮಾಧ್ಯಮ ಪ್ರಸಾರಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿ ಮುಂದಿನ ವಿಚಾರಣೆಯನ್ನು ಫೆ.9ಕ್ಕೆ ಮುಂದೂಡಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k