ಬೆಂಗಳೂರು: ರಾಜ್ಯ ಬಿಜೆಪಿ ನಾಯಕರ ಹೊಸ ಪ್ಲಾನ್‍ನಂತೆ ಅತೃಪ್ತ ಶಾಸಕರು ಹೊಸ ಆಟ ಶುರು ಮಾಡ್ತಿದ್ದು, ಇಂದು ಕಾಂಗ್ರೆಸ್ ಅತೃಪ್ತ ಶಾಸಕರ ಟೀಂ ಮುಂಬೈನಿಂದ ಬೆಂಗಳೂರಿಗೆ ಬರಲಿದೆ. ಈ ಮೂಲಕ ನಾಳೆ ನಡೆಯುವ ಬಜೆಟ್ ಅಧಿವೇಶನಕ್ಕೆ ನಿರ್ಧಾರ ಮಾಡಿದ್ದಾರೆ.
ನಂಬರ್ 14 ಟಾರ್ಗೆಟ್ ರೀಚ್ ಆದ್ರೆ ಮಾತ್ರ ಕಾಂಗ್ರೆಸ್ ಅತೃಪ್ತ ಶಾಸಕರು ರಾಜೀನಾಮೆ ನೀಡಲಿದ್ದಾರೆ. 14 ಶಾಸಕರು ಅತೃಪ್ತ ಟೀಂ ಸೇರಿದ್ರೆ ಫೆಬ್ರವರಿ 14ಕ್ಕೂ ಮುನ್ನ ರಾಜೀನಾಮೆ ಕೊಡಲು ಯೋಜನೆ ರೂಪಿಸಲಾಗಿದೆ. ಒಂದು ವೇಳೆ ಅತೃಪ್ತರ ಟೀಂ 10ಕ್ಕೆ ಏರಿಕೆಯಾಗದಿದ್ದರೇ ಬಿಲ್ ಬೀಳಿಸಲು ಮಹಾಪ್ಲಾನ್ ಮಾಡಿಕೊಳ್ಳಲಾಗಿದೆ. 7 ಮಂದಿ ಕೈ ಶಾಸಕರಿಂದ ಕ್ರಾಸ್ ವೋಟಿಂಗ್ ಮಾಡಿ ಬಿಲ್ ಬೀಳಿಸಲು ಮಹಾನ್ ಸ್ಕೆಚ್ ಹಾಕಲಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
ಬಿಲ್ ಬಿದ್ದರೆ ಸಹಜವಾಗಿಯೇ ಸರ್ಕಾರದ ಬಲ ಕುಸಿದಿದೆ ಅನ್ನೋ ಸಂದೇಶ ರವಾನೆಯಾಗುತ್ತದೆ. ಈ ವೇಳೆ ಮುಖ್ಯಮಂತ್ರಿ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ಸಲ್ಲಿಸಬಹುದು. ಇತ್ತ ನಮ್ಮ ಬಳಿ ಸಂಖ್ಯಾ ಬಲ ಇದೆ ಅಂತಾ ಬಿಜೆಪಿ ಸರ್ಕಾರ ರಚಿಸಲು ಮುಂದಾಗಬಹುದು. ಆಗ ಸ್ಪೀಕರ್ ಕೂಡ ಬದಲಾಯಿಸಿ ನೂತನ ಸ್ಪೀಕರ್ ಆಯ್ಕೆಗೆ ಚುನಾವಣೆ ನಡೆಯುತ್ತದೆ. ಮತ್ತೆ ಕ್ರಾಸ್ ವೋಟಿಂಗ್ ಮಾಡಿಸಿ ಸ್ಪೀಕರ್ ಕೆಳಗಿಳಿಸಿ ನೂತನ ಸ್ಪೀಕರ್ ಆಯ್ಕೆ ಮಾಡುವುದು. ನೂತನ ಸ್ಪೀಕರ್ ಮೂಲಕ ಅನರ್ಹತೆ ಅಸ್ತ್ರವನ್ನು ಮುಂದೂಡುವುದು, ಸರ್ಕಾರ ರಚಿಸಲಾಗುತ್ತದೆ. ಇದನ್ನೂ ಓದಿ: ಸಿಎಲ್‍ಪಿ ಸಭೆಗೆ ಗೈರಾಗುವ ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್‌ಗೆ ಶಿಫಾರಸ್ಸು: ಸಿದ್ದರಾಮಯ್ಯ
ಅತೃಪ್ತರು ಅನರ್ಹಗೊಂಡ್ರೆ ಸರ್ಕಾರದ ಪರಿಸ್ಥಿತಿ ಏನಾಗುತ್ತೆ..?
ದಿನಕ್ಕೊಂದು ತಿರುವು ಪಡೆಯುತ್ತಿರುವ ರಾಜಕೀಯ ಚದುರಂಗದಾಟದ ಅಂಕೆ-ಸಂಖ್ಯೆ ಸಹ ಹಾವು ಏಟಿ ಆಟದಂತಾಗಿದೆ. ಆರಕ್ಕೇರಿದರೆ ಸರ್ಕಾರ ಹಾವಿನ ಬಾಯಿಗೆ.. ಮೂರಕ್ಕಿಳಿದರೆ ವಿಪಕ್ಷ ಏಣಿಯಿಂದ ಕೆಳಗೆ ಎಂಬಂತಾಗಿದೆ ರಾಜ್ಯ ರಾಜಕಾರಣದ ಸ್ಥಿತಿ. ವಿಧಾನಸಭೆಯಲ್ಲಿ ಒಟ್ಟು 224 ಸದಸ್ಯರಿದ್ದು, ದೋಸ್ತಿ ಸರ್ಕಾರದ ಸಂಖ್ಯಾ ಬಲ 118 ಆಗಿದೆ. ಅದರಲ್ಲಿ ವಿಪಕ್ಷ ಬಿಜೆಪಿ 104 ಪಕ್ಷೇತರರು ಇಬ್ಬರು ಸೇರಿ ಒಟ್ಟು 106 ಸಂಖ್ಯಾಬಲವಿದೆ. ಕಾಂಗ್ರೆಸ್‍ನ ಸಂಭವನೀಯ ಬಂಡಾಯ ಶಾಸಕರ ಸಂಖ್ಯೆ 5 ಆಗಿದ್ದು, ಐವರು ರಾಜೀನಾಮೆ ನೀಡಿದರೆ ಅಥವಾ ಅನರ್ಹರಾದ್ರೆ ದೋಸ್ತಿಗಳ ಬಲ 113ಕ್ಕೆ ಕುಸಿತವಾಗುತ್ತದೆ. 113 ಸರಳ ಬಹುಮತವಾಗಲಿದೆ. ಹೀಗಾಗಿ ಅತೃಪ್ತರು ಅನರ್ಹಗೊಂಡರೆ ಸರ್ಕಾರಕ್ಕೆ ಯಾವುದೆ ಅಪಾಯವಿಲ್ಲ ಎನ್ನುವಂತಾಗುತ್ತದೆ. ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ವಿದ್ಯಮಾನ-ರೆಬೆಲ್ ಶಾಸಕರ ಅನರ್ಹತೆಗೆ ಕಾಂಗ್ರೆಸ್ ನಿರ್ಧಾರ!
ಬಜೆಟ್ ಅನುಮೋದನೆ ವೇಳೆ 8 ಮಂದಿ ಅಡ್ಡ ಮತದಾನ ಮಾಡಿದ್ರೆ ಸರ್ಕಾರಕ್ಕೆ ಸಂಕಷ್ಟ ಎದುರಾಗಲಿದ್ದು, ಐವರಿಂದ ರಾಜೀನಾಮೆ ಕೊಡಿಸಿದ್ರು ಸರ್ಕಾರ ಬೀಳಿಸಲು ಇನ್ನೂ 8 ಶಾಸಕರ ರಾಜೀನಾಮೆ ಅನಿವಾರ್ಯವಾಗುತ್ತದೆ. ಶಾಸಕರ ರಾಜೀನಾಮೆ ಅಥವಾ ಅನರ್ಹತೆಯಿಂದ ಮ್ಯಾಜಿಕ್ ನಂ.113 ಹಿಂದು-ಮುಂದಾಗುವ ಸಾಧ್ಯತೆಗಳಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv