ಬೆಂಗಳೂರು: ಒಂದೆಡೆ ಸಿದ್ದರಾಮೋತ್ಸವಕ್ಕೆ ತಯಾರಿಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವಿನ ಮುನಿಸು ಇದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಬಿಜೆಪಿ ಟ್ವೀಟ್ ಮೂಲಕ ಕಾಂಗ್ರೆಸ್ ಕಾಲೆಳೆಯುತ್ತಿದೆ.
ಸಿದ್ದರಾಮಯ್ಯ ಎಲ್ಲಾ ಹಂತದಲ್ಲೂ ಕೆಪಿಸಿಸಿ ಅಧ್ಯಕ್ಷರನ್ನು ತುಳಿಯುತ್ತಲೇ ಬಂದಿದ್ದಾರೆ.
ಪದಾಧಿಕಾರಿಗಳ ಪಟ್ಟಿ, ಪ್ರಚಾರ ಸಮಿತಿಗೆ ಅಧ್ಯಕ್ಷರ ನೇಮಕ, ಚುನಾವಣಾ ಟಿಕೆಟ್ ಎಲ್ಲವೂ @siddaramaiah ಮೂಗಿನ ನೇರಕ್ಕೆ ನಡೆದು ಹೋಗಿದೆ.
ಕೆಪಿಸಿಸಿ ಅಧ್ಯಕ್ಷರು ಬರೇ ರಬ್ಬರ್ ಸ್ಟ್ಯಾಂಪ್ ಅಷ್ಟೇ!#ಅಸಹಾಯಕಡಿಕೆಶಿ
— BJP Karnataka (@BJP4Karnataka) July 12, 2022
Advertisement
ಇದೀಗ ಡಿಕೆಶಿ ತಾಯಿ ಗೌರಮ್ಮ ಅವರು ಪಬ್ಲಿಕ್ ಟಿವಿ ಜೊತೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ್ದ ವೀಡಿಯೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ಬಿಜೆಪಿ ಸಿದ್ದರಾಮಯ್ಯಗೆ ಟಾಂಗ್ ನೀಡಿದೆ. ಇದನ್ನೂ ಓದಿ: ಯುರೋಪಿನ ಅತಿ ದೊಡ್ಡ ಗ್ಯಾಸ್ ಪೈಪ್‍ಲೈನ್ ಸ್ಥಗಿತ – ಕೆನಡಾದ ಮೊರೆ ಹೋದ ಜರ್ಮನಿ
Advertisement
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಎಲ್ಲಾ ಹಂತದಲ್ಲೂ ಕೆಪಿಸಿಸಿ ಅಧ್ಯಕ್ಷರನ್ನು ತುಳಿಯುತ್ತಲೇ ಬಂದಿದ್ದಾರೆ. ಪದಾಧಿಕಾರಿಗಳ ಪಟ್ಟಿ, ಪ್ರಚಾರ ಸಮಿತಿಗೆ ಅಧ್ಯಕ್ಷರ ನೇಮಕ, ಚುನಾವಣಾ ಟಿಕೆಟ್ ಎಲ್ಲವೂ ಸಿದ್ದರಾಮಯ್ಯ ಅವರ ಮೂಗಿನ ನೇರಕ್ಕೆ ನಡೆದು ಹೋಗಿದೆ. ಕೆಪಿಸಿಸಿ ಅಧ್ಯಕ್ಷರು ಬರೇ ರಬ್ಬರ್ ಸ್ಟ್ಯಾಂಪ್ ಅಷ್ಟೇ!
Advertisement
ಅಧಿಕಾರಕ್ಕಾಗಿ ಸಿದ್ದರಾಮಯ್ಯ ಏನು ಬೇಕಾದರೂ ಮಾಡುತ್ತಾರೆ!
ಅಂದು ದಲಿತ ನಾಯಕ ಪರಮೇಶ್ವರ್ ಅವರ ವಿರುದ್ಧ ಸಂಚು ನಡೆಸಿ ಬಲಿ ಹಾಕಿದರು,
ಇಂದು ಡಿಕೆಶಿ ಅವರ ರಾಜಕೀಯ ಜೀವನದ ಬಲಿ ತೆಗೆಯಲು ಹೊಂಚು ಹಾಕುತ್ತಿದ್ದಾರೆ.
ಇಷ್ಟೆಲ್ಲ ತನ್ನ ಸುತ್ತ ನಡೆಯುತ್ತಿದ್ದರೂ, ಕೆಪಿಸಿಸಿ ಅಧ್ಯಕ್ಷರು #ಅಸಹಾಯಕಡಿಕೆಶಿ ಆಗಿರುವುದು ವಿಪರ್ಯಾಸ.
— BJP Karnataka (@BJP4Karnataka) July 12, 2022
Advertisement
ಅಧಿಕಾರಕ್ಕಾಗಿ ಸಿದ್ದರಾಮಯ್ಯ ಏನು ಬೇಕಾದರೂ ಮಾಡುತ್ತಾರೆ. ಅಂದು ದಲಿತ ನಾಯಕ ಪರಮೇಶ್ವರ್ ಅವರ ವಿರುದ್ಧ ಸಂಚು ನಡೆಸಿ ಬಲಿ ಹಾಕಿದರು. ಇಂದು ಡಿಕೆಶಿ ಅವರ ರಾಜಕೀಯ ಜೀವನದ ಬಲಿ ತೆಗೆಯಲು ಹೊಂಚು ಹಾಕುತ್ತಿದ್ದಾರೆ. ಇಷ್ಟೆಲ್ಲ ತನ್ನ ಸುತ್ತ ನಡೆಯುತ್ತಿದ್ದರೂ, ಕೆಪಿಸಿಸಿ ಅಧ್ಯಕ್ಷರು #ಅಸಹಾಯಕಡಿಕೆಶಿ ಆಗಿರುವುದು ವಿಪರ್ಯಾಸ ಎಂದು ಬರೆದುಕೊಂಡಿದೆ.
ಕಣ್ಣರಿಯದಿದ್ದರೂ ಕರುಳರಿಯದೇ ಇರುವುದೇ?
ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಅಲ್ಲಲ್ಲೇ ಕತ್ತಿ ಮಸೆಯುತ್ತಾರೆ ಎಂದು ಡಿಕೆಶಿ ಅವರ ತಾಯಿ ಅಂದೇ ಹೇಳಿದ್ದರು.
ಸಿದ್ದರಾಮಯ್ಯ ಜೊತೆಗೆ ಕೈಮಿಲಾಯಿಸುವಾಗ ಹೆತ್ತ ತಾಯಿ ನೀಡಿರುವ ಎಚ್ಚರಿಕೆಯನ್ನು ಸ್ವಲ್ಪ ಗಮನಿಸಿ.#ಅಸಹಾಯಕಡಿಕೆಶಿ pic.twitter.com/kSf1uiXLjx
— BJP Karnataka (@BJP4Karnataka) July 12, 2022
ಕಣ್ಣರಿಯದಿದ್ದರೂ ಕರುಳರಿಯದೇ ಇರುವುದೇ? ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಅಲ್ಲಲ್ಲೇ ಕತ್ತಿ ಮಸೆಯುತ್ತಾರೆ ಎಂದು ಡಿಕೆಶಿ ಅವರ ತಾಯಿ ಅಂದೇ ಹೇಳಿದ್ದರು. ಸಿದ್ದರಾಮಯ್ಯ ಜೊತೆಗೆ ಕೈಮಿಲಾಯಿಸುವಾಗ ಹೆತ್ತ ತಾಯಿ ನೀಡಿರುವ ಎಚ್ಚರಿಕೆಯನ್ನು ಸ್ವಲ್ಪ ಗಮನಿಸಿ ಎಂದು ಬರೆದುಕೊಂಡಿ ಪಬ್ಲಿಕ್ ಟಿವಿ ವೀಡಿಯೋವನ್ನು ಬಿಜೆಪಿ ಹಂಚಿಕೊಂಡಿದೆ.