ಶಿಮ್ಲಾ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರು ಹಿಮಾಚಲ ಪ್ರದೇಶದ ರಾಜ್ಯಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆಯನ್ನು ರಾಜ್ಯಸಭಾ ಅಧ್ಯಕ್ಷರು ಅಂಗೀಕರಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ (Rajyasabha Election) ಗುಜರಾತ್‌ನಿಂದ ಸದನಕ್ಕೆ ಆಯ್ಕೆಯಾದ ಕಾರಣ ಹಿಮಾಚಲ ಪ್ರದೇಶದ ರಾಜ್ಯಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೆಪಿ ನಡ್ಡಾ ಅವರು ಗುಜರಾತ್‌ನಿಂದ ರಾಜ್ಯಸಭಾ ಸದಸ್ಯರಾಗಿ 13 ದಿನಗಳ ಹಿಂದೆ ಫೆಬ್ರವರಿ 20 ರಂದು ಅವಿರೋಧವಾಗಿ ಆಯ್ಕೆಯಾದರು.
Advertisement
Advertisement
ಲೋಕಸಭಾ ಚುನಾವಣೆಗೆ (Loksabha Election 2024) ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಹೊರಬಂದ ನಂತರ ನಡ್ಡಾ ರಾಜೀನಾಮೆ ನೀಡಿದರು. ಹಿಮಾಚಲದಿಂದ ನಡ್ಡಾ ಅವರ ಅಧಿಕಾರಾವಧಿಯಲ್ಲಿ 14 ದಿನಗಳಿದ್ದವು. ಆದರೆ ಅದಕ್ಕೂ ಮೊದಲು ನಡ್ಡಾ ಅವರು ರಾಜ್ಯಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಖಾಸಗಿ ಫೋರೆನ್ಸಿಕ್ ವರದಿ ತರಿಸಿ ಬಹಿರಂಗಪಡಿಸಿದ ಬಿಜೆಪಿ ನಡೆ ದೇಶದ್ರೋಹದ ಕೆಲಸ: ಪ್ರಿಯಾಂಕ್ ಖರ್ಗೆ
Advertisement
BJP National President JP Nadda resigned from his position as Rajya Sabha MP from Himachal Pradesh as he has been elected to the House from Gujarat in the recently held Rajya Sabha elections. https://t.co/B9Td0uGLyO
— ANI (@ANI) March 4, 2024
Advertisement
ಫೆ. 27 ರಂದು ಚುನಾವಣೆ: ಫೆಬ್ರವರಿ 27 ರಂದು 15 ರಾಜ್ಯಗಳ 56 ಸ್ಥಾನಗಳಿಗೆ ರಾಜ್ಯಸಭಾ ಚುನಾವಣೆ ನಡೆದಿತ್ತು. ಈ ಪೈಕಿ 41 ಸ್ಥಾನಗಳಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಗೆದ್ದಿದ್ದಾರೆ. ಯುಪಿಯಲ್ಲಿ 10, ಹಿಮಾಚಲದಲ್ಲಿ 1 ಮತ್ತು ಕರ್ನಾಟಕದ 4 ಸ್ಥಾನಗಳಿಗೆ ಮತದಾನ ನಡೆದಿದೆ. ಈ ಪೈಕಿ ಯುಪಿಯ 10 ಸ್ಥಾನಗಳ ಪೈಕಿ 8 ಬಿಜೆಪಿ ಮತ್ತು 2 ಎಸ್‌ಪಿ ಪಾಲಾಗಿದೆ. ಹಿಮಾಚಲದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ 3 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 1 ಸ್ಥಾನವನ್ನು ಗೆದ್ದಿದೆ.