ಬೆಂಗಳೂರು: ನಮ್ಮ ಕಡೆ ಮದುವೆಯಲ್ಲಾದರೂ ಅರಿಶಿನ ಕುಂಕುಮ ಇಡ್ತಾರೆ. ಆದರೆ ರಾಹುಲ್ ಗಾಂಧಿ (Rahul Gandhi) ಅವರ ಅಮ್ಮ ಮದುವೆಯಲ್ಲೂ ಹಣೆಗೆ ಕುಂಕುಮ ಇಟ್ಟಿದ್ರೋ ಇಲ್ಲವೋ ಗೊತ್ತಿಲ್ಲ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ವ್ಯಂಗ್ಯವಾಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸೋಮನಾಥಪುರ ದೇಗುಲ (Somanathapura Temple) ಪುನರುತ್ಥಾನ ಮಾಡೋದಕ್ಕೆ ವಿರೋಧ ಮಾಡಿದ ಕುಟುಂಬ ಯಾವುದು ಅಂತ ಗೊತ್ತಿದೆ. ಹಾಗೆ ಮಾಡಬೇಕಿದ್ರೆ ಸ್ವಾತಂತ್ರ್ಯ ಬಂದಾಗಲೇ ಮಾಡುತ್ತಿದ್ರು. ಕುಂಕುಮ ಕಂಡ್ರೆ ಹೆದರುವವರು, ಎಲೆಕ್ಷನ್ (Election) ಬಂದಾಗ ಹಣೆ ತುಂಬ ಬೊಟ್ಟು ಇಡ್ತಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ‘ಕಾಂತಾರ’ ಒಟ್ಟು ಬಜೆಟ್ ಎಷ್ಟು?: ಪಕ್ಕಾ ಲೆಕ್ಕಕೊಟ್ಟ ರಿಷಬ್ ಶೆಟ್ಟಿ ತಂದೆ
Advertisement
Advertisement
ನೆಹರು ನನ್ನನ್ನ ಕತ್ತೆ ಅಂತ ಬೇಕಾದ್ರೆ ಕರೀರಿ, ಹಿಂದೂ ಅಂತ ಕರೀಬೇಡಿ ಅಂದಿದ್ರು. ಈಗ ರಾಹುಲ್ ಗಾಂಧಿ (Rahul Gandhi) ಶಿವ ಭಕ್ತ (Lord Shiva) ಅಂತ ಹೇಳ್ತಿದ್ದಾರೆ. ಶಿವನ ಭಕ್ತಿ ನಿಜವಾಗಿಯೂ ಇದ್ರೆ ಒಳ್ಳೆಯದು. ಅದು ನಾಟಕ ಆಗಬಾರದು. ಇವರ ಅಮ್ಮ ಕುಂಕುಮ ಇಡ್ತಾರೋ ಇಲ್ಲವೋ. ನಮ್ಮ ಕಡೆ ಮದುವೆಯಲ್ಲಾದ್ರೂ ಅರಿಶಿಣ, ಕುಂಕುಮ ಇಡ್ತಾರೆ. ಇವರು ಮದುವೆಯಲ್ಲೂ (Marriage) ಇಟ್ಟಿದ್ರೋ ಇಲ್ಲವೋ ಗೊತ್ತಿಲ್ಲ ಎಂದು ರಾಹುಲ್ ಹಾಗೂ ಸೋನಿಯಾ ಗಾಂಧಿ (Sonia Gandhi) ಕುರಿತು ಟೀಕಿಸಿದ್ದಾರೆ. ಇದನ್ನೂ ಓದಿ: SC-ST ಮೀಸಲಾತಿ ಹೆಚ್ಚಳ – ಅ.20ರಂದು ಸಿಎಂ ಬೊಮ್ಮಾಯಿ ಸುಗ್ರೀವಾಜ್ಞೆ!
Advertisement
Advertisement
`ನನ್ನ ಶಕ್ತಿ ಶಿವ’ ಎಂಬ ರಾಹುಲ್ ಗಾಂಧಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಟಿ ರವಿ, ಅಕಸ್ಮಾತ್ ಅವರು ಹಾಗೆ ಹೇಳಿದ್ದಿದ್ರೆ, ರಾಮಮಂದಿರ ನಿರ್ಮಿಸಲು ಮೋದಿಯೇ ಬರಬೇಕು ಅಂತಿರ್ಲಿಲ್ಲ. ಶಿವನನ್ನೇ ನಂಬಿದ್ದಾರೆ ಅಂದ್ರೆ ಪುನರುತ್ಥಾನ ಯಾವಾಗಲೋ ಆಗಿಹೋಗ್ತಿತ್ತು. ಅವರ ಬಾಯಲ್ಲಿ ತಾವೊಬ್ಬ ಶಿವಭಕ್ತ ಅಂತ ಹೇಳಿಕೊಳ್ಳುವ ಮಟ್ಟಕ್ಕೆ ಬೆಳವಣಿಗೆ ಆಗಿರೋದು ಸ್ವಾಗತಾರ್ಹ ಬೆಳವಣಿಗೆ. ಅವರ ಹೇಳಿಕೆಯನ್ನು ಅವರು ರಾಜಕೀಯವಾಗಿ ಬಳಕೆ ಮಾಡಿಕೊಳ್ಳೋದು ಬೇಡ ಎಂದು ಸಲಹೆ ನೀಡಿದ್ದಾರೆ.
ಪಾದಯಾತ್ರೆಯಲ್ಲಿ (Bharat Jodo Yatra) ಮೋದಿಯನ್ನು (Narendra Modi) ಬೈಯುತ್ತಾ ರಾಹುಲ್ ಗಾಂಧಿ ವಿದೂಷಕನ ಪಾತ್ರ ಮಾಡಿದ್ದಾರೆ. ಭಸ್ಕಿ ಮಾಡುವ ಚೀಪ್ ಮೆಂಟಾಲಿಟಿ ತೋರಿಸಿದ್ದಾರೆ. ಇದು ಬಿಟ್ಟು ಪಾದಯಾತ್ರೆಯಲ್ಲಿ ಇನ್ನೇನಿದೆ? ಎಂದು ಪ್ರಶ್ನಿಸಿದ್ದಾರೆ.