ಸಂಸತ್ ಆವರಣದಲ್ಲಿ ಕಸ ಗುಡಿಸಿದ ಹೇಮಾ ಮಾಲಿನಿ, ಅನುರಾಗ್ ಠಾಕೂರ್

Hema Malini Anurag Thakur

– ಟ್ರೋಲ್ ಆದ ಹೇಮಾ ಮಾಲಿನಿ

ನವದೆಹಲಿ: ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ಹಾಗೂ ಸಂಸದೆ ಹೇಮಾ ಮಾಲಿನಿ ಸೇರಿದಂತೆ ಅನೇಕರು ಸಂಸತ್ ಆವರಣವನ್ನು ಸ್ವಚ್ಛಗೊಳಿಸಿದರು.

ಸ್ವಚ್ಛ ಭಾರತ್ ಅಭಿಯಾನದ ನಿಮಿತ್ತ ಇಂದು ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಕೆಲ ಸಂಸದರು ಕಸ ಗುಡಿಸಿದರು. ಆದರೆ ಹೇಮಾ ಮಾಲಿನಿ ಅವರು ಕಸ ಗುಡಿಸಲು ಬಾರದೇ ಪೇಚಾಡಿದರು.

ಮಹಾತ್ಮ ಗಾಂಧಿಯವರ 150ನೇ ಜನ್ಮದಿನದ ನಿಮಿತ್ತ ಸಂಸತ್ ಆವರಣದಲ್ಲಿ ಸ್ವಚ್ಛ ಭಾರತ್ ಅಭಿಯಾನ ನಡೆಸಲು ಸ್ಪೀಕರ್ ಅವರು ಅವಕಾಶ ನೀಡಿದ್ದು ಶ್ಲಾಘನೀಯ. ಮುಂದಿನ ವಾರ ನನ್ನ ಕ್ಷೇತ್ರವಾದ ಮಥುರಾಕ್ಕೆ ತೆರಳುತ್ತೇನೆ. ಅಲ್ಲಿಯೂ ಸ್ವಚ್ಛ ಭಾರತ್ ಅಭಿಯಾನ ಮಾಡುತ್ತೇನೆ ಎಂದು ಸಂಸದೆ ಹೇಮಾ ಮಾಲಿನಿ ಹೇಳಿದ್ದಾರೆ.

ಕಸ ಗುಡಿಸಲು ಪೇಚಾಡಿದ ಹೇಮಾ ಮಾಲಿನಿ ಅವರನ್ನು ನೆಟ್ಟಿಗರು ಕುಟುಕಿದ್ದಾರೆ. ‘ಹೇಮಾ ಜಿ, ಚಲನಚಿತ್ರಗಳಲ್ಲಿ ಮಾಡಿದ್ದಕ್ಕಿಂತ ಇಂದು ಸಂಸತ್ ಆವರಣದಲ್ಲಿ ಮಾಡಿದ ನಟನೆ ಚನ್ನಾಗಿದೆ ಎಂದು ವಿಕಾಸ್ ವಿಕ್ರಂ ತಿವಾರಿ ಎಂಬವರು ವ್ಯಂಗ್ಯವಾಡಿದ್ದಾರೆ.

ಹೇಮಾ ಮಾಲಿನಿ ಅವರೇ ನೀವು ಪೊರಕೆಯನ್ನು ಹಿಡಿಯುವುದನ್ನು ಮೊದಲು ಕಲಿಯಬೇಕು. ನಿಮ್ಮ ಮನೆಯಲ್ಲಿ ಕೆಲಸ ಮಾಡುವ ನೌಕರರ ಜೊತೆಗೆ ನೀವು ಮೊದಲು ಕೈಗೂಡಿಸಿ ಎಂದು ನೆಟ್ಟಿಗರು ಲೇವಡಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *