ನವದೆಹಲಿ: ಪೂರ್ವ ದೆಹಲಿಯ ಬಿಜೆಪಿ ಸಂಸದ ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಯುವಪೀಳಿಗೆಗಾಗಿ ಭಗತ್ ಸಿಂಗ್ ಹೆಸರಿನಲ್ಲಿ ಸಾರ್ವಜನಿಕ ಗ್ರಂಥಾಲಯ ತೆರೆದಿದ್ದಾರೆ.
Advertisement
ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಯುವಶಕ್ತಿಯ ಜ್ಞಾನಾರ್ಜನೆಗಾಗಿ ಇದೀಗ ಒಂದು ಸಾರ್ವಜನಿಕ ಗ್ರಂಥಾಲಯ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಆನಂದ್ ವಿಹಾರ್, ಶಹದಾರ, ತ್ರಿಲೋಕಪುರಿ ಮತ್ತು ಮಯೂರ್ ವಿಹಾರ್‌ನಲ್ಲಿ ಕೂಡ ತಲಾ ಒಂದೊಂದು ಗ್ರಂಥಾಲಯ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಒಟ್ಟು ಕ್ಷೇತ್ರದಲ್ಲಿ 5 ಸಾರ್ವಜನಿಕ ಗ್ರಂಥಾಲಯ ಪ್ರಾರಂಭಕ್ಕೆ ನಿರ್ಧರಿಸಲಾಗಿದೆ ಎಂದು ಸಂಸದರ ಕಚೇರಿಯಿಂದ ಸ್ಪಷ್ಟಪಡಿಸಲಾಗಿದೆ. ಇದನ್ನೂ ಓದಿ: ಬಾಲಿವುಡ್ ನಲ್ಲಿ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾ
Advertisement
ಸಾರ್ವಜನಿಕ ಗ್ರಂಥಾಲಯ ದಿನದ 12 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದ್ದು, ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ತೆರೆದಿರಲಿದೆ. ಒಟ್ಟು 50 ಜನ ಕೂತು ಓದುವಂತಹ ಸೌಲಭ್ಯ ಕಲ್ಪಿಸಲಾಗಹಿದೆ. ಜೊತೆಗೆ ಉಚಿತ ವೈಫೈ ಮತ್ತು ಕಂಪ್ಯೂಟರ್‌ಗಳನ್ನು ಕೂಡ ಗ್ರಂಥಾಲಯದಲ್ಲಿ ಬಳಸಬಹುದಾಗಿದೆ.
Advertisement
Bhagat Singh is not just a name, it’s an idea, an emotion. Today we launch 1st #ShaheedBhagatSinghJanLibrary in East Delhi where youth will get access to world class books & computers for free! ???????? pic.twitter.com/HtWF4uO07t
— Gautam Gambhir (@GautamGambhir) March 23, 2022
Advertisement
ಈ ಬಗ್ಗೆ ಟ್ವಿಟ್ಟರ್ ಮೂಲಕ ಸಂತಸ ವ್ಯಕ್ತ ಪಡಿಸಿರುವ ಗಂಭೀರ್, ಭಗತ್ ಸಿಂಗ್ ಕೇವಲ ಹೆಸರಲ್ಲ. ಅದೊಂದು ಶಕ್ತಿ. ಅದೊಂದು ಭಾವನೆ. ಇಂದು ನನ್ನ ಕ್ಷೇತ್ರದಲ್ಲಿ ಮೊದಲ ಸಾರ್ವಜನಿಕ ಗ್ರಂಥಾಲಯವನ್ನು ತೆರೆಯುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: IPL 2022: ಪ್ರೇಕ್ಷಕರಿಗೆ ಸ್ಟೇಡಿಯಂ ಪ್ರವೇಶಿಸಲು ಅನುಮತಿ – ಷರತ್ತುಗಳು ಅನ್ವಯ
ಇದೀಗ ಗೌತಮ್ ಗಂಭೀರ್ 15ನೇ ಆವೃತ್ತಿ ಐಪಿಎಲ್‍ನ ನೂತನ ತಂಡ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾರ್ಚ್ 26 ರಿಂದ ಆರಂಭವಾಗಲಿರುವ ಐಪಿಎಲ್‍ನಲ್ಲಿ ಮೆಂಟರ್ ಆಗಿ ಗೌಂಭೀರ್ ಲಕ್ನೋ ತಂಡದ ಆಟಗಾರರಿಗೆ ನೆರವಾಗಲಿದ್ದಾರೆ.