– ಒಂದು ದಿನದ ಪರಿಸರ ನಾಟಕ ಅಗತ್ಯವಿಲ್ಲ
ಕಾರವಾರ: ಪರಿಸರ ದಿನ ಆಚರಣೆಯೇ ಒಂದು ಹಾಸ್ಯಾಸ್ಪದ ವಿಷಯವಾಗಿದೆ ಎಂದು ಕೇಂದ್ರ ಮಾಜಿ ಸಚಿವ ಅನಂತ್‍ಕುಮಾರ್ ಹೆಗಡೆ ಹೇಳಿದ್ದಾರೆ.
ಈ ಕುರಿತು ಫೇಸ್‍ಬುಕ್‍ನಲ್ಲಿ ಅನಿಸಿಕೆ ಹಂಚಿಕೊಂಡಿರುವ ಅನಂತ್‍ಕುಮಾರ್ ಹೆಗ್ಡೆ ಅವರು, ಹಿಂದೂಗಳಿಗೆ ಪರಿಸರ ದಿನಾಚರಣೆ ವಿಷಯವಲ್ಲ. ಪರಿಸರದ ಜೊತೆಗೆ ಬದುಕುವುದು ಹಿಂದೂಗಳ ಸಂಪ್ರದಾಯ. ಪರಿಸರ ರಕ್ಷಣೆ ನಮ್ಮ ಕರ್ತವ್ಯ. ನಮ್ಮ ಜೀವನ ಪದ್ಧತಿ ಮೂಲ ಸನಾತನ ಆಶಯದಂತೆ ನಡೆದಲ್ಲಿ ಒಂದು ದಿನದ ಪರಿಸರ ದಿನದ ನಾಟಕ ಅಗತ್ಯವಿರುವುದಿಲ್ಲ ಎಂದು ತಿಳಿದ್ದಾರೆ.
ಹಿಂದೂಗಳು ಪರಿಸರ ರಕ್ಷಣೆ ಬದುಕಿನಲ್ಲಿ ನಡೆಸಿಕೊಂಡು ಬಂದಿರುವುದಾಗಿದೆ ಹಾಗೂ ಬದುಕಿನ ಹಾದಿ ಇದಾಗಿದೆ. ಹಿಂದೂ ಜೀವನದ ಪದ್ಧತಿ ಪ್ರಬುದ್ಧವಾಗಿದೆ. ಮತಿಗೆಟ್ಟ ಮೂಲಭೂತವಾದಿಗಳು ಮಾತ್ರ ಇನ್ನೊಂದು ಕೋಮಿನ ವಿಚಾರಕ್ಕೆ ಹೋಲಿಸುತ್ತಾರೆ. ಅದಕ್ಕೆ ನಾವು ಏನೂ ಮಾಡಲು ಬರುವುದಿಲ್ಲ ಎಂದರು.
ಪರಿಸರ ರಕ್ಷಣೆ ಹಿಂದೂಗಳಿಗೆ ಟಾಸ್ಕ್ ಅಲ್ಲ. ತಾಯಿಯ ಸೇವೆ ಮಗನ ಜನ್ಮಜಾತ ಕರ್ತವ್ಯ. ಅದು ಕೆಲಸವಲ್ಲ, ಕರ್ತವ್ಯ. ಪರಿಸರನ್ನು ಉಳಿಸಿ, ಬೆಳೆಸಿಕೊಂಡು ಮುಂದಿನ ತಲೆಮಾರಿಗೆ ಹೀಗೆ ಇಡಬೇಕು ಎಂದು ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.