– ಮತ್ತೆ ಕಾಂಗ್ರೆಸ್ ಸೇರಲಿರುವ ಚಿಂಚನಸೂರ್
ಬೆಂಗಳೂರು: ಬಿಜೆಪಿಗೆ ಒಂದೇ ತಿಂಗಳಲ್ಲಿ ಎರಡನೇ ಘರ್ ವಾಪಸಿ ಶಾಕ್ ಸಿಕ್ಕಿದೆ. ಎಂಎಲ್‍ಸಿ ಪುಟ್ಟಣ್ಣ ಕಾಂಗ್ರೆಸ್ ಸೇರಿದ ಕೆಲವೇ ದಿನಗಳಲ್ಲಿ ಮತ್ತೊಬ್ಬ ಎಮ್‍ಎಲ್‍ಸಿ ಬಾಬೂರಾವ್ ಚಿಂಚನಸೂರ್(Baburao Chinchansur) ಸಹ ಬಿಜೆಪಿ ತೊರೆದಿದ್ದಾರೆ. ಸೋಮವಾರ ಮಧ್ಯಾಹ್ನ ಸಭಾಪತಿ ಬಸವರಾಜ ಹೊರಟ್ಟಿಯವರನ್ನು (Basavaraj Horatti) ಬೆಂಗಳೂರಿನಲ್ಲಿ ಭೇಟಿ ಮಾಡಿ, ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪರಿಷತ್ ಸ್ಥಾನಕ್ಕೆ ಸ್ವಯಿಚ್ಛೆಯಿಂದ ರಾಜೀನಾಮೆ ಸಲ್ಲಿಸುವುದಾಗಿ ಕೈಬರಹದಲ್ಲಿ ಬರೆದ ರಾಜೀನಾಮೆಯನ್ನು ಸಭಾಪತಿ ಅಂಗೀಕರಿಸಿದ್ದಾರೆ.
Advertisement
ಮಂಗಳವಾರ ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ. ಗುರುಮಿಠಕಲ್ ಕ್ಷೇತ್ರದಿಂದ ಅವರಿಗೆ ಕಾಂಗ್ರೆಸ್ ಟಿಕೆಟ್ ಭರವಸೆ ಸಿಕ್ಕಿದೆ ಎನ್ನಲಾಗಿದೆ. ಬಿಜೆಪಿಯಲ್ಲಿ ಟಿಕೆಟ್ ಸಿಗುವುದು ಅನುಮಾನದ ಹಿನ್ನೆಲೆಯಲ್ಲಿ ಚಿಂಚನಸೂರ್ ಮರಳಿ ಕಾಂಗ್ರೆಸ್ ಸೇರಲಿದ್ದಾರೆ. ಇದನ್ನೂ ಓದಿ: ದೇಶದ ಬಗ್ಗೆ ರಾಹುಲ್ ಗಾಂಧಿಯ ಯಾವ ಬಗೆಯ ಬದ್ಧತೆ?- ಬೊಮ್ಮಾಯಿ ವ್ಯಂಗ್ಯ
Advertisement
Advertisement
ಕಲಬುರಗಿ ಸೇರಿದಂತೆ ಕಲ್ಯಾಣ ಜಿಲ್ಲೆಗಳಲ್ಲಿ ಕೋಲಿ ಸಮಾಜದರು ಅಪಾರ ಸಂಖ್ಯೆಯಲ್ಲಿದ್ದಾರೆ. ಕೋಲಿ ಸಮಾಜದ ಪ್ರಭಾವಿ ನಾಯಕರಾಗಿರುವ ಬಾಬುರಾವ್ ಚಿಂಚನಸೂರ್, ಬಿಜೆಪಿ ತೊರೆದು ಕಾಂಗ್ರೆಸ್ (Congress) ಕದ ತಟ್ಟಿರುವುದರಿಂದ ಕಲ್ಯಾಣ ಭಾಗದಲ್ಲಿ ಬಿಜೆಪಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
Advertisement
ಕೆಲ ತಿಂಗಳ ಹಿಂದೆಯೇ ಬಿಜೆಪಿ (BJP) ತೊರೆಯಲು ಮುಂದಾಗಿದ್ದ ಬಾಬುರಾವ್ ಚಿಂಚನಸೂರ್ ಅವರನ್ನು ಸಿಎಂ ಬೊಮ್ಮಾಯಿ ಮನವೊಲಿಸಿ ಪಕ್ಷದಲ್ಲಿ ಉಳಿಯುವಂತೆ ಮಾಡಿದ್ದರು. ಬಳಿಕ ಫೆ.14 ರಂದು ಖರ್ಗೆ ಪುತ್ರನನ್ನು ಸೋಲಿಸುವುದಾಗಿ ಬಿಜೆಪಿ ಕಚೇರಿಯಲ್ಲಿ ಚಿಂಚನಸೂರ್ ಸುದ್ದಿಗೋಷ್ಠಿ ನಡೆಸಿ ತೊಡೆ ತಟ್ಟಿದ್ದರು.
ಚಿಂಚನಸೂರ್ 2018 ರ ಆಗಸ್ಟ್ ನಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಸೋಲಿಸಲು ಚಿಂಚನಸೂರ್, ಮಾಲೀಕಯ್ಯ ಗುತ್ತೇದಾರ್ ಜತೆ ಆಪರೇಷನ್ ಮಾಡಿ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು. ಕಾಂಗ್ರೆಸ್‍ನಲ್ಲಿದ್ದಾಗ ಮಲ್ಲಿಕಾರ್ಜುನ ಖರ್ಗೆಯವರ ಆಪ್ತರಲ್ಲೊಬ್ಬರಾಗಿದ್ದ ಚಿಂಚನಸೂರ್ ಈಗ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆಯವರ ಪ್ರಯತ್ನದಿಂದ ಮರಳಿ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಇದನ್ನೂ ಓದಿ: ಸಿಎಂ ಇಬ್ರಾಹಿಂಗೆ ದೃಷ್ಠಿ ತೆಗೆದು ನೋಟಿನ ಸುರಿಮಳೆ ಸುರಿಸಿದ ಯುವಕ!