ಬೆಳಗಾವಿ: ವಿಧಾನ ಸಭೆಯ ಪ್ರತಿಪಕ್ಷ ನಾಯಕ ಆರ್ ಅಶೋಕ್ (R Ashok) ಕಾರ್ಯವೈಖರಿಗೆ ಬಿಜೆಪಿಯಲ್ಲೇ (BJP) ಅಪಸ್ವರ ಕೇಳಿಬಂದಿದೆ. ಬಿಜೆಪಿಯ ಕೆಲ ಶಾಸಕರು ಅಶೋಕ್ ಕಳೆದ ವಾರ ನಡೆದ ಕಲಾಪಗಳಲ್ಲಿ ಸರಿಯಾಗಿ ಕಾರ್ಯನಿರ್ವಹಣೆ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮುಖ್ಯವಾಗಿ ಆರ್‌ಎಸ್‌ಎಸ್ (RSS) ಮತ್ತು ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ (Panchamasali Reservation) ಅಶೋಕ್ ನಡೆಗೆ ಕಮಲ ಶಾಸಕರು ಅತೃಪ್ತಿ ಹೊಂದಿರುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ತಿಳಿದುಬಂದಿದೆ.
Advertisement
Advertisement
ಅಸಮಾಧಾನ ಯಾಕೆ?
ಪಂಚಮಸಾಲಿ ಮೀಸಲಾತಿ ಪ್ರತಿಭಟನೆಯ ವೇಳೆ ಆರ್‌ಎಸ್‌ಎಸ್‌ನವರು ಬಂದು ಕಲ್ಲು ಹೊಡೆದರು ಎಂಬ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ಹೇಳಿಕೆಗೆ ಸಂಘದ ಹಿನ್ನೆಲೆಯ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ. ಕಾಶಪ್ಪನವರ್ ಹಾಗೂ ಕಾಂಗ್ರೆಸ್ ವಿರುದ್ಧ ಅಶೋಕ್ ಅವರು ಸರಿಯಾಗಿ ಖಂಡಿಸಿ ತಿರುಗೇಟು ನೀಡಬೇಕಿತ್ತು. ಆದರೆ ಅಶೋಕ್ ಸರಿಯಾಗಿ ಹೇಳಿಕೆಯನ್ನು ಖಂಡಿಸಲಿಲ್ಲ.
Advertisement
ಸ್ಪೀಕರ್ ಅವರು ಪಕ್ಷಪಾತಿ ಧೋರಣೆ ತಳೆದಿರುವ ಆರೋಪ ವಿಚಾರದಲ್ಲೂ ಶಾಸಕರಿಗೆ ಅಶೋಕ್ ಸಾಥ್ ಕೊಡಲಿಲ್ಲ. ಸ್ಪೀಕರ್ ಕಚೇರಿಗೆ ಘೇರಾವ್ ಹಾಕಲು ಕೆಲ ಶಾಸಕರು ಮುಂದಾದಾಗ ಅಶೋಕ್ ದ್ವಂದ್ವ ಮನಸ್ಸಿನಿಂದ ಸಹಕಾರ ನೀಡಿದ್ದರು. ಇದನ್ನೂ ಓದಿ: ಮಂತ್ರಿ ಮಾಡದ್ದಕ್ಕೆ ಸಿಟ್ಟು – ಪಕ್ಷಕ್ಕೆ ರಾಜೀನಾಮೆ ನೀಡಿದ ಶಿವಸೇನಾ ಶಾಸಕ
Advertisement
ಬೆಳಿಗ್ಗೆ ಚರ್ಚೆ ಮಾಡಿ ಬಂದಿರುತ್ತೇವೆ. ಆದರೆ ಸದನ ನಡೆಯುವಾಗ ಬೇರೆಯೇ ಆಗಿರುತ್ತದೆ. ಆಡಳಿತ ಪಕ್ಷದ ಕೆಲವು ಸದಸ್ಯರು ಚರ್ಚೆ ಹಳಿ ತಪ್ಪಿಸಲು ಪದೇ ಪದೇ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ. ಅವರ ಬಾಯಿ ಮುಚ್ಚಿಸುವ ಕೆಲಸ ಮಾಡುವುದಿಲ್ಲ. ವಿರೋಧ ಪಕ್ಷದ ನಾಯಕರೆಂಬ ಬೆಲೆ ಕೊಡದೇ ವರ್ತಿಸುತ್ತಾರೆ.
ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಮತ್ತು ಅಶೋಕ್ ಮಧ್ಯೆಯೂ ಸರಿಯಾದ ಸಮನ್ವಯತೆ ಸೃಷ್ಟಿಯಾಗುತ್ತಿಲ್ಲ. ಸದನದಲ್ಲಿ ಹಾಗೂ ಸದನದ ಹೊರಗೆ ಅಶೋಕ್ ಒಂದು ದಿಕ್ಕು, ವಿಜಯೇಂದ್ರ ಇನ್ನೊಂದು ದಿಕ್ಕು ಎಂಬಂತೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.