ಬಾಯ್‍ಫ್ರೆಂಡ್ ಇಲ್ಲದಿದ್ದರೆ ಹುಡುಗಿಯರು ಸುರಕ್ಷಿತ: ಬಿಜೆಪಿ ಶಾಸಕ

Public TV
1 Min Read
BJP MLA PL shakya

ಭೋಪಾಲ್: ನೀವು ಸುರಕ್ಷಿತವಾಗಿ ಇರಬೇಕಾದರೆ ಬಾಯ್‍ಫ್ರೆಂಡ್ ಸಹವಾಸ ಮಾಡಬೇಡಿ ಎಂದು ಮಧ್ಯಪ್ರದೇಶದ ಗುನಾ ಕ್ಷೇತ್ರದ ಬಿಜೆಪಿ ಶಾಸಕ ಪನ್ನಾಲಾಲ್ ಶಾಕ್ಯ ಅವರು ಹುಡುಗಿಯರಿಗೆ ಸಲಹೆ ನೀಡಿದ್ದಾರೆ.

ಸ್ಥಳೀಯ ಗುನಾ ಸರ್ಕಾರಿ ಕಾಲೇಜಿನಲ್ಲಿ ಮಾತನಾಡಿದ ಅವರು, ಹುಡುಗಿಯರಿಗೆ ಬಾಯ್ ಫ್ರೆಂಡ್ ಏಕೆ ಬೇಕು? ಎಂದು ಪ್ರಶ್ನಿಸಿದ್ದು, ಹುಡುಗಿಯರ ಮೇಲಿನ ದೌರ್ಜನ್ಯಗಳು ನಿಲ್ಲಬೇಕಾದರೆ ಗೆಳೆಯರಿಂದ ದೂರವಿರಬೇಕು ಎಂದು ಹೇಳಿದ್ದಾರೆ.

Minor love

ಇದೇ ವೇಳೆ ತಾವು ಭಾಗವಹಿಸಿದ್ದ ಖಾಸಗಿ ಟಿವಿ ವಾಹಿನಿವೊಂದರ ವೇಳೆಯೂ ತಾನು ಮಧ್ಯಪ್ರದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತ ಪ್ರಶ್ನೆಗೂ ಇದೇ ಉತ್ತರವನ್ನು ನೀಡಿರುವುದಾಗಿ ತಿಳಿಸಿದರು.

ಇಂದಿನ ಯುವಕರಿಗೂ ಗರ್ಲ್ ಫ್ರೆಂಡ್ ಗಳನ್ನು ಮಾಡಿಕೊಳ್ಳದಿರಲು ಸಲಹೆ ನೀಡಿದ ಅವರು, ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಕರಣೆ ಮಾಡದಿರಲು ತಿಳಿಸಿದರು. ಅಲ್ಲದೇ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯು ವಿದೇಶಿ ಸಂಸ್ಕೃತಿ ಪ್ರತಿರೂಪವಾಗಿದ್ದು, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಗೌರವವಿದೆ. ವರ್ಷದಲ್ಲಿ ನಾವು ನಾಲ್ಕು ಬಾರಿ ಮಹಿಳಾ ದಿನ ಆಚರಿಸುತ್ತೇವೆ. ನಾಲ್ಕು ಬಾರಿ ಅವರನ್ನು ಪೂಜಿಸುತ್ತೇವೆ ಎಂದರು.

ಶಾಸಕ ಪನ್ನಾಲಾಲ್ ಈ ಹಿಂದೆಯೂ ಹಲವು ಬಾರಿ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ಇಟಲಿಯಲ್ಲಿ ವಿವಾಹವಾಗಿದ್ದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಕೊಹ್ಲಿ ದೇಶಭಕ್ತನಾಗಲು ಸಾಧ್ಯವಿಲ್ಲ: ಬಿಜೆಪಿ ಶಾಸಕ

Minor Love 2

Share This Article