– ನೂರಕ್ಕೆ ನೂರರಷ್ಟು ಬಿಜೆಪಿ ಅಧಿಕಾರಕ್ಕೆ ಬರಲಿದೆ
– ರಮೇಶ್ ಜಾರಕಿಹೊಳಿಯಿಂದ ಕಾಂಗ್ರೆಸ್‍ಗೆ ಆಪರೇಷನ್
ಬೆಳಗಾವಿ: ಒಬ್ಬ ಶಾಸಕನಿಂದ ರಾಜೀನಾಮೆ ಕೊಡಿಸುವುದು ಹುಡುಗಾಟಿಕೆ ಮಾತಲ್ಲ ಎಂದು ಬಿಜೆಪಿ ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಶಾಸಕರು, ನಾವು ಆಪರೇಷನ್ ಕಮಲ ನಡೆಸುತ್ತಿಲ್ಲ. ಲೋಕಸಭಾ ಚುನಾವಣೆ ಹೀನಾಯ ಸೋಲಿನಿಂದಾಗಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ನಮ್ಮ ಸಂಪರ್ಕದಲ್ಲಿ ಯಾವುದೇ ಶಾಸಕರು ಇಲ್ಲ. ಆಪರೇಷನ್ ಮಾಡಲು ನಾವು ವೈದ್ಯರಲ್ಲ. ಕಾಂಗ್ರೆಸ್‍ನವರೇ ಬಿಜೆಪಿ ಶಾಸಕರನ್ನು ಸೇಳೆಯುವ ತಂತ್ರ ರೂಪಿಸುತ್ತಿದ್ದಾರೆ ಎಂದು ಹೇಳಿದರು.
Advertisement
Advertisement
ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ಬಿಜೆಪಿ ಅಧಿಕಾರಕ್ಕೆ ಬರಲಿದೆ. ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್‍ಗೆ ಆಪರೇಷನ್ ಮಾಡುತ್ತಿದ್ದಾರೆ. ಬಿಜೆಪಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ ಬಂದರೂ ಸ್ವಾಗತ ಮಾಡುತ್ತೇವೆ. ಒಂದು ವಾರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
ನನಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬೇಡ. ಅದನ್ನು ನಿಭಾಯಿಸುವ ತಾಕತ್ತು ನನಗಿಲ್ಲ. ಮುಖ್ಯಮಂತ್ರಿಯಾಗುವ ಪವರ್ ಕೂಡ ನನಗಿಲ್ಲ. ಕೇವಲ ಮಂತ್ರಿಯಾಗಿ ಕೆಲಸ ಮಾಡುತ್ತೇನೆ. ನಮಗೆ ಯಾವುದೇ ಆಸೆ ಇಲ್ಲ. ರೈತರ ಪರವಾಗಿ ಇರುವ ಸರ್ಕಾರದಲ್ಲಿದ್ದು ಕೆಲಸ ಮಾಡುತ್ತೇನೆ ಎಂದರು.
Advertisement
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದರೂ ನಾನು ಹೋಗಲ್ಲ. ಎಚ್.ಡಿ.ದೇವೇಗೌಡ, ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ ಎಲ್ಲರೂ ನನ್ನ ಸಂಪರ್ಕದಲ್ಲಿ ಇದ್ದಾರೆ. ಅವರು ದಿನನಿತ್ಯ ಕರೆಯುತ್ತಾರೆ ಅದನ್ನು ಹೇಳಲಿಕ್ಕೆ ಆಗಲ್ಲ ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗದ ನಾಯಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಡಬೇಕು. ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಬೇಕು. ಅವರಿಗೆ ಎಲ್ಲ ರೀತಿಯ ಯೋಗ್ಯತೆ ಇದೆ. ಆದಷ್ಟು ಬೇಗ ಯತ್ನಾಳ್ ಅವರು ರಾಜ್ಯಾಧ್ಯಕ್ಷರಾಗಲಿ ಅಂತ ಆಗ್ರಹಿಸುವೆ ಎಂದು ಶಾಸಕ ಯತ್ನಾಳ್ ಅವರ ಪರ ಬ್ಯಾಟ್ ಬೀರಿದರು.