– 3 ತಿಂಗಳಿಂದ ಮರ್ಯಾದೆ ಹೋಗ್ತಿರೋದು ಸಿಎಂ ಪತ್ನಿಗೆ ಗೊತ್ತಾಗಿಲ್ವಾ?
ಮೈಸೂರು: ಈ ಬಾರಿಯ ಜಂಬೂ ಸವಾರಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಪುಷ್ಪಾರ್ಚನೆ ಮಾಡೋದೆ ಅನುಮಾನ. ಅಷ್ಟರಲ್ಲೇ ಅವರು ರಾಜೀನಾಮೆ ನೀಡುವ ಸಂದರ್ಭ ಬರಲಿದೆ ಎಂದು ಬಿಜೆಪಿ (BJP) ಶಾಸಕ ಶ್ರೀವತ್ಸ (Siddaramaiah) ಭವಿಷ್ಯ ನುಡಿದಿದ್ದಾರೆ.
Advertisement
ಮೈಸೂರಿನಲ್ಲಿ ಅವರು `ಪಬ್ಲಿಕ್ ಟಿವಿ’ ಜೊತೆ ಮಾತಾಡಿದರು. ಈ ವೇಳೆ, ಮುಡಾ ಸೈಟ್‍ನ್ನು ವಾಪಸ್ ನೀಡಲು ಸಿಎಂ ಪತ್ನಿ ಪಾರ್ವತಿಯವರು ಬರೆದ ಪತ್ರದ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ಇನ್ನೂ 10 ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಆಗುತ್ತವೆ. ಸಿಎಂ ಅವರ ಇವತ್ತಿನ ಸ್ಥಿತಿಗೆ ಅವರ ಸುತ್ತಲಿನ ಹಿತಶತ್ರುಗಳ ಸಲಹೆಗಳೇ ಕಾರಣ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ವಿಮಾನ ಪತನಗೊಂಡ 56 ವರ್ಷಗಳ ಬಳಿಕ 4 ಮೃತದೇಹಗಳು ಪತ್ತೆ
Advertisement
Advertisement
ಸಿಎಂ ಪತ್ನಿ ಮುಡಾ ಸೈಟ್ ವಾಪಸ್ ಕೊಡುವ ಬಗ್ಗೆ ಪತ್ರ ಬರೆದಿದ್ದಾರೆ. ಅವರಿಗೆ ಮೂರು ತಿಂಗಳಿಂದ ತಮ್ಮ ಪತಿಯ ಮಾರ್ಯದೆ ಹೋಗ್ತಿದೆ ಎಂದು ಗೊತ್ತಾಗಲಿಲ್ವಾ? ಈಗ ಇಡಿ ಎಂಟ್ರಿ ಆದ ಮೇಲೆ ಗೊತ್ತಾಯ್ತಾ ಎಂದು ಪ್ರಶ್ನಿಸಿದ್ದಾರೆ.
Advertisement
ಸಿಎಂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಯೋಚಿಸಿರಬಹುದು. ಮಧ್ಯಪ್ರದೇಶದ ಒಂದು ಪ್ರಕರಣದಲ್ಲಿ ಸಾರ್ವಜನಿಕ ಜೀವನದಲ್ಲಿ ಇರುವವರು ತಮಗೆ ಬೇಕಾದಾಗ ಪ್ರಕರಣದಲ್ಲಿ ರಾಜಿಯಾದರೆ ಕೇಸ್ ಬೀಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ 2019 ರಲ್ಲಿ ಹೇಳಿದೆ. ಈ ತೀರ್ಪು ಸಿಎಂಗೂ ಅನ್ವಯ ಆಗಲಿದೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: MUDA Scam| ಇಡಿಯಿಂದ ಮತ್ತೊಂದು ಕೇಸ್ – 18 ಅಧಿಕಾರಿಗಳ ವಿರುದ್ಧ ECIR ದಾಖಲು