ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದ ಜಾಹೀರಾತಿನಲ್ಲಿ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಭಾವಚಿತ್ರ

Public TV
1 Min Read
s.t.somshekar congress

ಮೈಸೂರು: ಕಾಂಗ್ರೆಸ್‌ (Congress) ಪಕ್ಷ ಸೇರ್ಪಡೆ ಕಾರ್ಯಕ್ರಮದ ಜಾಹೀರಾತಿನಲ್ಲಿ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ (S.T.Somshekar) ಭಾವಚಿತ್ರ ಇರುವುದು ಕುತೂಹಲ ಮೂಡಿಸಿದೆ.

ಬಿಜೆಪಿ ನಾಯಕರಾಗಿದ್ದ ಹೆಚ್‌.ವಿ.ರಾಜೀವ್‌ ಬುಧವಾರ ಕಾಂಗ್ರೆಸ್‌ ಸೇರ್ಪಡೆಯಾಗುತ್ತಿದ್ದಾರೆ. ಈ ಸಂಬಂಧ ಜಾಹೀರಾತು ಪ್ರಕಟಿಸಲಾಗಿತ್ತು. ಜಾಹೀರಾತಿನಲ್ಲಿ ಎಸ್‌.ಟಿ.ಸೋಮಶೇಖರ್‌ ಅವರ ಭಾವಚಿತ್ರವೂ ಇದೆ. ಇದನ್ನೂ ಓದಿ: ಇಂದು ಮಂಡ್ಯ‌ ಮೈತ್ರಿ ಅಭ್ಯರ್ಥಿ ಘೋಷಣೆ – ಸಕ್ಕರೆ ನಾಡಿನಿಂದ ಹೆಚ್‌ಡಿಕೆ ಸ್ಪರ್ಧೆ ಫಿಕ್ಸ್?

d.k.shivakumar s.t.somshekar

ಬಿಜೆಪಿ ಆಡಳಿತದಲ್ಲಿ ಎಸ್‌.ಟಿ.ಸೋಮಶೇಖರ್‌ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಈ ವೇಳೆ ಸೋಮಶೇಖರ್‌ ಜೊತೆ ರಾಜೀವ್‌ ಆಪ್ತರಾಗಿದ್ದರು.

ಈಗಾಗಲೇ ಕಾಂಗ್ರೆಸ್‌ ನಾಯಕರ ಜೊತೆ ಎಸ್‌.ಟಿ.ಸೋಮಶೇಖರ್‌ ಕಾಣಿಸಿಕೊಳ್ಳುತ್ತಿದ್ದಾರೆ. ರಾಜ್ಯಸಭಾ ಚುನಾವಣಾ ಸಂದರ್ಭದಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಿದ್ದರು. ಈಗ ಎಸ್‌ಟಿಎಸ್‌ ನೇತೃತ್ವದಲ್ಲಿ ಆಪ್ತ ಕಾಂಗ್ರೆಸ್‌ ಸೇರ್ಪಡೆಯಾಗುತ್ತಿರುವುದು ಚರ್ಚೆ ಹುಟ್ಟುಹಾಕಿದೆ. ಇದನ್ನೂ ಓದಿ: ಹಾಟ್ ಫೋಟೋ ಹಾಕಿ ಕೆಣಕಿದ್ದ ಸುಪ್ರಿಯಾಗೆ ಕಂಗನಾ ತಿರುಗೇಟು

Share This Article