ಟೈಂ ಪಾಸ್ ಮಾಡಲು ಕಷ್ಟ, ಅದಕ್ಕೆ ಲೋಕಸಭೆಗೆ ಸ್ಪರ್ಧೆ – ಡಾ.ಕೆ.ಸುಧಾಕರ್ ಸ್ಪರ್ಧೆ ಬಗ್ಗೆ ಎಸ್‌.ಆರ್.ವಿಶ್ವನಾಥ್ ಹೇಳಿದ್ದೇನು?

Public TV
2 Min Read
S.R.Vishwanath 768x444 1

ನವದೆಹಲಿ: ವಿಧಾನಸಭೆಯಲ್ಲಿ ಸೋಲು‌ ಕಂಡಿರುವ ಮಾಜಿ ಸಚಿವ ಡಾ.ಕೆ.ಸುಧಾಕರ್ (K.Sudhakar) ನಾಲ್ಕು ವರ್ಷ ಸುಮ್ಮನೆ ಟೈಂ ಪಾಸ್ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಲೋಕಸಭೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ನನ್ನ ಮುಂದೆ ಹೇಳಿದ್ದಾರೆ ಎಂದು ದೆಹಲಿಯಲ್ಲಿ ಶಾಸಕ ಎಸ್‌.ಆರ್.ವಿಶ್ವನಾಥ್ (S.R.Vishwanath) ತಿಳಿಸಿದ್ದಾರೆ. ದೆಹಲಿಯಲ್ಲಿ ಬಿ.ಎಸ್‌.ಯಡಿಯೂರಪ್ಪ (B.S.Yediyurappa) ಭೇಟಿ ಬಳಿಕ ಮಾತನಾಡಿದ ಅವರು ವಾಗ್ದಾಳಿ ನಡೆಸಿದರು.

ಚಿಕ್ಕಬಳ್ಳಾಪುರದಲ್ಲಿ (Chikkaballapura) ಬಚ್ಚೇಗೌಡರು ರಾಜಕೀಯ ನಿವೃತ್ತಿ ಘೋಷಿಸಿದಾಗ ಯಾರು ಅಭ್ಯರ್ಥಿ ಇರಲಿಲ್ಲ. ಎಲ್ಲ ನಾಯಕರು ನನ್ನ ಪುತ್ರ ಅಲೋಕ್ ವಿಶ್ವಾನಾಥ್‌ನ ಕಣಕ್ಕಿಳಿಸಲು ಸೂಚಿಸಿದರು. ಈ ಹಿನ್ನೆಲೆ ನಾವು ಎಲ್ಲ ತಯಾರಿ ಮಾಡಿಕೊಂಡಿದ್ದೇವೆ. ಆದರೆ ಈ ನಡುವೆ ಬಂದ ಸುಧಾಕರ್ ನಾಲ್ಕು ವರ್ಷ ಇಲ್ಲಿ ಏನು ಮಾಡುವುದು? ಟೈಂ ಪಾಸ್ ಮಾಡಲು ಕಷ್ಟ. ಅದಕ್ಕೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ನನ್ನ ಮುಂದೆ ಹೇಳಿದ್ದಾರೆ. ಅದರೆ ಇದು ಟೈಂ ಪಾಸ್ ಮಾಡುವ ವಿಷಯವಲ್ಲ ಎಂದು ಹೇಳಿದರು. ಇದನ್ನೂ ಓದಿ: ಮಾ.22ರ ಬಳಿಕ ಬಿಜೆಪಿ ಅಂತಿಮ ಪಟ್ಟಿ; 5 ಕ್ಷೇತ್ರದಲ್ಲಿ ಎರಡು ಕಗ್ಗಂಟು – ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ಡೌಟು

K Sudhakar

ದೆಹಲಿಯಲ್ಲಿ ನಾನು ಯಾವ ನಾಯಕರನ್ನೂ ಭೇಟಿ ಮಾಡಿಲ್ಲ. ಬಿ.ಎಸ್.ಯಡಿಯೂರಪ್ಪ ಜೊತೆಗೆ ಬಂದಿದ್ದೇನೆ. ಅಲೋಕ್ ಮಗ ಎನ್ನುವುದಕ್ಕಿಂತ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾನೆ. ನ್ಯೂಯಾರ್ಕ್‌ನಿಂದ ಪದವಿ ಪಡೆದಿದ್ದಾನೆ. ಲಂಡನ್‌ನಲ್ಲಿ ಐವತ್ತು ದೇಶಗಳ ಆಡಳಿತ, ಪಾಲಿಸಿಗಳ ಅಧ್ಯಯನ ಮಾಡಿದ್ದಾನೆ. ಅವನು ರಾಜಕೀಯಕ್ಕೆ ಬಂದ್ರೆ ಪಕ್ಷಕ್ಕೆ, ಸಮಾಜಕ್ಕೆ ಅನುಕೂಲವಾಗಲಿದೆ ಎಂದರು.

ಸರ್ವೆಯಲ್ಲೂ ಅಲೋಕ್ ಹೆಸರು ಇದೆ. ಸುಧಾಕರ್ ಅವರು ಈ‌ ಮೊದಲು ಲೋಕಸಭೆಗೆ ಕೇಳಿರಲಿಲ್ಲ. ಅವರು ನಿಲ್ಲಲ್ಲ ಅಂದಿದ್ದಕ್ಕೆ ನಾವು ಮಗನ ಸ್ಪರ್ಧೆಗೆ ಚಿಂತಿಸಿದ್ದೆವು. ಅಲೋಕ್‌ಗೆ ಟಿಕೆಟ್ ನೀಡಿದರೆ 25 ವರ್ಷ ಕ್ಷೇತ್ರ ಪಕ್ಷಕ್ಕೆ ಇರಲಿದೆ. ನಾವು ಈಗಾಗಲೇ ಪ್ರಚಾರ ಆರಂಭಿಸಿದ್ದೇವೆ. ಯಲಹಂಕ ಕ್ಷೇತ್ರ ದೊಡ್ಡ ಲೀಡ್ ಕೊಡಲಿದೆ. ಹೀಗಾಗಿ ಅಲೋಕ್ ಆದರೆ ಹೆಚ್ಚು ಲೀಡ್ ಸಿಗಲಿದೆ. ಮೋದಿ ಮುಖದ ಜೊತೆಗೆ ಜನ ಒಪ್ಪುವ ಅಭ್ಯರ್ಥಿ ಬೇಕು ಎಂದು ಮಾತನಾಡಿದರು. ಇದನ್ನೂ ಓದಿ: ಏ.19, 26ರ ಚುನಾವಣಾ ದಿನಾಂಕ ಬದಲಾಯಿಸುವಂತೆ ಆಯೋಗಕ್ಕೆ ಮುಸ್ಲಿಂ ಸಂಘಟನೆಗಳಿಂದ ಮನವಿ

Share This Article