ಬೆಳಗಾವಿ: ಹಿಂದೂ ಧರ್ಮಕ್ಕೆ ಸಂಕಷ್ಟ ಬಂದಾಗ ಪ್ರತಿಯೊಬ್ಬರು ತಲ್ವಾರ್ ಹಿಡಿದು ಹೊರಬರಬೇಕು ಎಂದು ಹೈದರಾಬಾದ್ ಭಾಗ್ಯನಗರ ಶಾಸಕ ರಾಜಾಸಿಂಗ್ ಠಾಕೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯ ಗಣೇಶ ಭಾಗನಲ್ಲಿ ನಡೆದ ಹಿಂದೂಪರ ಕಾರ್ಯಕರ್ತರ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ನಿಮಗೆ ಒಂದು ಧರ್ಮದ ಕೆಲಸ ಒಪ್ಪಿಸಲು ಬಯಸುತ್ತೇನೆ. ದೇಶ, ಧರ್ಮದ ಸಲುವಾಗಿ ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ದೇಶದಲ್ಲಿ ಮೋದಿ ಸರ್ಕಾರ ಇದೆ. ಕರ್ನಾಟಕದಲ್ಲೂ ಬಿಜೆಪಿ ಸರ್ಕಾರ ಇದೆ. ಆದರೆ, ಧರ್ಮಕ್ಕೆ ಸಂಕಟ ಬಂದಾಗ ಸರ್ಕಾರ ಮುಂದೆ ಬರಲ್ಲ. ನೀವೇ ಮುಂದೆ ಬರಬೇಕು. ಧರ್ಮಕ್ಕೆ ಸಂಕಷ್ಟ ಎದುರಾದರೆ ನೀವೇ ಕೈಯಲ್ಲಿ ತಲ್ವಾರ್ ಹಿಡಿದು ಹೊರಬರಬೇಕು ಎಂದರು. ಇದನ್ನೂ ಓದಿ: ಹಿಂದೂ ಹಿಂದೂಗಳ ಮಧ್ಯೆ, ಭಾಷೆಗಳ ಮಧ್ಯೆ ಜಗಳ ಹಚ್ಚಲು ಷಡ್ಯಂತ್ರ: ರಾಜಾಸಿಂಗ್ ಠಾಕೂರ್
ಹಿಂದೂಗಳನ್ನು ಮತಾಂತರ ಮಾಡುವ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಗ್ರಾಮದಲ್ಲೊಂದು ಸೇನೆ ನಿರ್ಮಿಸುವುದಾಗಿ ಹಿಂದೂ ಕಾರ್ಯಕರ್ತರು ಸಂಕಲ್ಪ ಮಾಡಬೇಕು. ಮತಾಂತರ ತಡೆಯಲು ಈ ಸೇನೆ ಕಾರ್ಯಪ್ರವೃತ್ತರಾಗಬೇಕು. ಎಲ್ಲೆಡೆ ಈಗ ಹಣ ನೀಡಿ ಮತಾಂತರ ಮಾಡಲಾಗುತ್ತಿದೆ ಎಂದು ಪ್ರಚೋದನಾತ್ಮಕವಾಗಿ ಹೇಳಿಕೆ ನೀಡಿದರು. ಇದನ್ನೂ ಓದಿ: ಉಡುಪಿ ಭಾಷಣ ವಿವಾದ – ಹೇಳಿಕೆಯನ್ನು ಹಿಂಪಡೆದ ತೇಜಸ್ವಿ ಸೂರ್ಯ