ಲಕ್ನೋ: ನನ್ನ ಕ್ಷೇತ್ರದಲ್ಲಿ ಮಾಂಸ ತಿನ್ನಂಗಿಲ್ಲ ಎಂದ ಲೋನಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ನಂದ ಕಿಶೋರ್ ವಿವಾದಾತ್ಮಕ ಹೇಳಿಕೆ ನಂತರ ತಮ್ಮ ಹೇಳಿಕೆಯನ್ನು ಬದಲಿಸಿ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಕ್ಷೇತ್ರದಲ್ಲಿ ಮಾಂಸದ ಅಂಗಡಿಗಳು ವ್ಯಾಪಾರ ನಡೆಸಿದರೆ ಅಧಿಕಾರಿಗಳೇ ಹೊಣೆಯಾಗುತ್ತಾರೆ. ಲೋನಿಯಲ್ಲಿ ಒಂದೇ ಒಂದು ಮಾಂಸದ ಅಂಗಡಿ ಕಂಡು ಬಂದರೂ ನಾನು ಅಧಿಕಾರಿಗಳಿಗೆ ಹೇಳಲು ಬಯಸುತ್ತೇನೆ. ಲೋನಿಯಲ್ಲಿ ರಾಮರಾಜ್ಯವಿದೆ. ರಾಮರಾಜ್ಯದಲ್ಲಿ ಮಾಂಸದ ಅಂಗಡಿಗಳಿಗೆ ಅನುಮತಿ ನೀಡಬೇಕೇ? ಎಂದು ಅವರು ಕಾರ್ಯಕ್ರಮವೊಂದರಲ್ಲಿ ನೆರೆದಿದ್ದವರಿಗೆ ಕೇಳಿದರು. ಜನರು ಹಾಲು ಮತ್ತು ತುಪ್ಪವನ್ನು ಸೇವಿಸಬೇಕು ಎಂದೂ ಹೇಳಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‍ಗೆ ಹೀನಾಯ ಸೋಲು – ಬಿಜೆಪಿಗಿಂತಲೂ, ಕಾಂಗ್ರೆಸ್‍ಗೆ ಡೇಂಜರ್ ಆ ಪಕ್ಷ!
ಮಾಂಸದ ಅಂಗಡಿಗಳಿಗೆ ಅನುಮತಿ ಇಲ್ಲ ಎಂಬ ತಮ್ಮ ಹೇಳಿಕೆ ವಿವಾದಕ್ಕೆ ಗುರಿಗಾಗುತ್ತಿದಂತೆ, ಶಾಸಕ ನಂದ ಕಿಶೋರ್ ತಮ್ಮ ಹೇಳಿಕೆಯಿಂದ ಯೂ ಟರ್ನ್ ಹೊಡೆದಿದ್ದಾರೆ. ಸಂಪೂರ್ಣ ನಿಷೇಧದ ಅರ್ಥದಲ್ಲಿ ನಾನು ಹೇಳಿಲ್ಲ, ಬದಲಿಗೆ ಯಾವುದೇ ಅಕ್ರಮ ಅಥವಾ ಪರವಾನಗಿ ರಹಿತ ಅಂಗಡಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ರೈತರ ಬೇಡಿಕೆ ಈಡೇರಿಸದಿದ್ದರೆ ಆಗುತ್ತೆ ಹಿಂಸಾಚಾರ: ಮೇಘಾಲಯ ರಾಜ್ಯಪಾಲ ಎಚ್ಚರಿಕೆ
ಮಾಂಸ ತಿನ್ನುವುದನ್ನು ನಿಷೇಧಿಸುವುದಿಲ್ಲ. ಪರವಾನಗಿ ಇಲ್ಲದೆ ಯಾವುದೇ ಅಂಗಡಿಯನ್ನು ಅನುಮತಿಸಲಾಗುವುದಿಲ್ಲ. ಮಾಂಸವನ್ನು ತಿನ್ನಲು ಬಯಸುವವರು ದೆಹಲಿಗೆ ಹೋಗಬಹುದು ಖಾಸಗಿವಾಹಿನಿಯೊಂದಕ್ಕೆ ಹೇಳಿದ್ದಾರೆ.