ಬೆಂಗಳೂರು: ಇಂದು ಕರ್ನಾಟಕದ ಐದು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದೆ. ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಮೈತ್ರಿ ಸರ್ಕಾರ ಕಿಲ ಕಿಲ ಅಂತಾ ನಗಲು ಆರಂಭಿಸಿದೆ. ಶಿವಮೊಗ್ಗ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೊಟದ ಅಭ್ಯರ್ಥಿಗಳು ಗೆಲುವಿನತ್ತ ಹೆಜ್ಜೆ ಹಾಕುತ್ತಿದ್ದಾರೆ.
ಕರ್ನಾಟಕ ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಭಾರೀ ಹಿನ್ನಡೆಯನ್ನು ಅನುಭವಿಸಿದೆ. ಈ ಕುರಿತು ಟ್ವಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಸಿ.ಟಿ.ರವಿ, ಸೋಲನ್ನು ಕತ್ತಲಿಗೆ ಹೋಲಿಸಿ ಕಣ್ಣೀರಿಡುವ ಜಾಯಮಾನ ನಮ್ಮದಲ್ಲ. ಮುಂದೆ ದೊಡ್ಡ ಗುರಿ ಇದೆ ಎಂದು ಬರೆದು ಕಾರ್ಯಕರ್ತರನ್ನು ತಮ್ಮ ಟ್ವೀಟ್ ಮೂಲಕ ಹುರಿದುಂಬಿಸಿದ್ದಾರೆ.
Advertisement
ಚುನಾವಣಾ ಸೋಲನ್ನು ಕತ್ತಲಿಗೆ ಹೋಲಿಸಿ ಕಣ್ಣೀರಿಡುತ್ತಾ ಕೂರುವ ಜಾಯಮಾನ ನಮ್ಮ @BJP4Karnataka ಕಾರ್ಯಕರ್ತರದ್ದಲ್ಲ.
ಕಾರ್ಯಕರ್ತರೇ ನಮ್ಮ ಶಕ್ತಿ ಮತ್ತು ಸ್ಪೂರ್ತಿ.
ಸ್ನೇಹಿತರೆ ನಮ್ಮ ಮುಂದೆ ಬಹು ದೊಡ್ಡ ಗುರಿಯಿದೆ, ಅದರ ಕಡೆ ಸಾಗೋಣ. ಕರ್ನಾಟಕವನ್ನು ಬೆಳಕಿನತ್ತ ಕೊಂಡೊಯ್ಯೋಣ.
— C T Ravi ???????? ಸಿ ಟಿ ರವಿ (@CTRavi_BJP) November 6, 2018
Advertisement
ಟ್ವೀಟ್ ನಲ್ಲಿ ಏನಿದೆ?
ಚುನಾವಣಾ ಸೋಲನ್ನು ಕತ್ತಲಿಗೆ ಹೋಲಿಸಿ ಕಣ್ಣೀರಿಡುತ್ತಾ ಕೂರುವ ಜಾಯಮಾನ ನಮ್ಮ ಬಿಜೆಪಿ ಕಾರ್ಯಕರ್ತರದ್ದಲ್ಲ. ಕಾರ್ಯಕರ್ತರೇ ನಮ್ಮ ಶಕ್ತಿ ಮತ್ತು ಸ್ಪೂರ್ತಿ. ಸ್ನೇಹಿತರೇ ನಮ್ಮ ಮುಂದೆ ಬಹು ದೊಡ್ಡ ಗುರಿಯಿದೆ. ಅದರ ಕಡೆ ಸಾಗೋಣ. ಕರ್ನಾಟಕವನ್ನು ಬೆಳಕಿನತ್ತ ಕೊಂಡೊಯ್ಯೋಣ. ಜನಾದೇಶವನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದ್ರೆ ಅಪವಿತ್ರ ಮೃತ್ರಿ ಮಾಡಿಕೊಂಡವರ ಹಾಗೆ ನಾವು ಇವಿಎಂ ಯಂತ್ರಗಳನ್ನು ದೂಷಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
Advertisement
ಇತ್ತ ಬಳ್ಳಾರಿ ಗೆಲುವಿನ ಕುರಿತು ಪ್ರತಿಕ್ರಿಯಿಸಿರುವ ಸಚಿವ ಡಿ.ಕೆ.ಶಿವಕುಮಾರ್, ಬಳ್ಳಾರಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನನಗೆ ಜವಾಬ್ದಾರಿ ವಹಿಸಿತ್ತು. ಈ ಸಂದರ್ಭದಲ್ಲಿ ಕೆಲವರು ಅಭಿನಂದಿಸಿದ್ರು, ಇನ್ನು ಕೆಲವರು ಟೀಕೆ ಟಿಪ್ಪಣಿಗಳನ್ನು ಮಾಡಿದ್ರು. ಇವುಗಳನ್ನೆಲ್ಲಾ ನಾನು ಬಹಳ ಸಂತೋಷದಿಂದಲೇ ಸ್ವೀಕರಿಸಿದ್ದೆ. ನಾನು ಈ ಚುನಾವಣೆಯಲ್ಲಿ 3 ಜನಕ್ಕೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ ಎಂದು ಸಂತೋಷ ಹಂಚಿಕೊಂಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
In 2014 General Elections @BJP4India candidate polled 86,993 votes in Mandya.
In by-elections our candidate managed to get 2,44,377 votes.
Huge increase of 1,57,384 votes is indication that people of sugarcane belt are reposing faith in us.
We will capitalize this in 2019.
— C T Ravi ???????? ಸಿ ಟಿ ರವಿ (@CTRavi_BJP) November 6, 2018