ಜೈಪುರ್: ಉದಯಪುರದ ಅಂಬೆರಿ ಬಳಿ ಉದಯಪುರ-ರಾಜ್ಸಮಂದ್ ಹೆದ್ದಾರಿಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ (Accident) ರಾಜಸ್ಥಾನದ (Rajasthan) ರಾಜಸಮಂದ್‌ನ ಬಿಜೆಪಿ (BJP) ಶಾಸಕಿ ದೀಪ್ತಿ ಕಿರಣ್ ಮಹೇಶ್ವರಿ (Deepti Kiran Maheshwari) ಅವರ ಪಕ್ಕೆಲಬು ಮುರಿತವಾಗಿದೆ. ಈ ಅಪಘಾತದಲ್ಲಿ ಅವರ ಆಪ್ತ ಸಹಾಯಕ ಮತ್ತು ಚಾಲಕ ಸಹ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ರಾಜಸಮಂದ್‌ನಿಂದ ಬರುತ್ತಿದ್ದ ಮಹೇಶ್ವರಿ ಅವರ ಕಾರು ಅಂಬೆರಿ ಬಳಿ ಗುಜರಾತ್ ನೋಂದಾಯಿತ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಶಾಸಕಿಗೆ ಪಕ್ಕೆಲಬು ಮುರಿದಿದೆ. ಅವರ ಆಪ್ತ ಸಹಾಯಕ ಜೈ ಮತ್ತು ಚಾಲಕ ಧರ್ಮೇಂದ್ರ ಸಹ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ದೇವರ ವಿರುದ್ಧವೇ ಸೇಡು – 10 ವರ್ಷಗಳಿಂದ ದೇವಸ್ಥಾನದ ಹುಂಡಿ ಹಣ ಕದಿಯುತ್ತಿದ್ದ HIV ಸೋಂಕಿತ ಅರೆಸ್ಟ್
ಗಾಯಾಳುಗಳನ್ನು ಉದಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಜರಾತ್ ನೋಂದಾಯಿತ ವಾಹನದಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹಾಸನ | ಶಾಲೆಯಲ್ಲಿ ಮಕ್ಕಳ ನಡುವೆ ಗಲಾಟೆ – ತಂದೆಯ ಕೊಲೆಯಲ್ಲಿ ಅಂತ್ಯ