ಬೆಂಗಳೂರು: ವಕ್ಫ್ ಆಸ್ತಿ (Waqf Board) ಕಬಳಿಕೆ ಪ್ರಕರಣ ಕುರಿತು ಅನ್ವರ್ ಮಾಣಿಪ್ಪಾಡಿ ನೀಡಿರುವ ವರದಿಯನ್ನು ಸದನದಲ್ಲಿ ಮಂಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಒತ್ತಾಯಿಸಿ ಆಡಳಿತ ಪಕ್ಷದ ಸದಸ್ಯರೇ ಸದನದಲ್ಲಿ ಆಗ್ರಹಿಸಿ ಗದ್ದಲವೆಬ್ಬಿಸಿದ ಘಟನೆ ಇಂದು ವಿಧಾನ ಪರಿಷತ್ (Legislative Council) ಕಲಾಪದಲ್ಲಿ ನಡೆಯಿತು.
ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ (Raghupati rao Malkapure) ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡರು. ಈ ವೇಳೆ ಸದನದಲ್ಲಿ ದಿಢೀರ್ ಎದ್ದು ನಿಂತ ಬಿಜೆಪಿಯ ಸದಸ್ಯ ಸಚೇತಕ ನಾರಾಯಣಸ್ವಾಮಿ, ವಕ್ಫ್ ಆಸ್ತಿ ಕಬಳಿಕೆ ಕುರಿತ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸದನದಲ್ಲಿ ಮಂಡಿಸುವಂತೆ ಸರ್ಕಾರಕ್ಕೆ ಸೂಚಿಸಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಸಬರ್ಬನ್ ರೈಲ್ವೇ ಯೋಜನೆಗೆ ದಿ.ಅನಂತ್ ಕುಮಾರ್ ಹೆಸರು: ಸೋಮಣ್ಣ
Advertisement
Advertisement
ವರದಿ ಸಲ್ಲಿಸಿ ಎರಡು ವರ್ಷವಾಗಿದೆ. ಆ ವರದಿ ಸದನದಲ್ಲಿ ಮಂಡಿಸುವಂತೆ ಸರ್ಕಾರಕ್ಕೆ ಸೂಚಿಸಬೇಕು ಎಂದರು. ಇದಕ್ಕೆ ಬಿಜೆಪಿಯ ಸದಸ್ಯರಾದ ರವಿಕುಮಾರ್, ತೇಜಸ್ವಿನಿಗೌಡ ಸೇರಿದಂತೆ ಇತರ ಕೆಲ ಸದಸ್ಯರು ಸಾತ್ ನೀಡಿದರು. ಕೂಡಲೇ ವರದಿಯನ್ನು ಕಂದಾಯ ಸಚಿವರು ಮಂಡಿಸಬೇಕು ಎಂದು ಒತ್ತಾಯಿಸಿದರು.
Advertisement
ಈ ವೇಳೆ ಮಾತನಾಡಿದ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ, ವಿರೋಧ ಪಕ್ಷದ ಕೆಲಸ ನೀವೇ ಮಾಡಿದರೆ ಅವರೇನು ಮಾಡಬೇಕು? ಆಡಳಿತ ಪಕ್ಷದ ಸದಸ್ಯರಾಗಿ ನೀವೇ ಹೀಗೆ ಮಾಡಿದರೆ ಹೇಗೆ? ಒಬ್ಬೊಬ್ಬರಾಗಿ ಮಾತನಾಡಿ ಎಂದರು.
Advertisement
ಇದಕ್ಕೆ ಪ್ರತಿಯಾಗಿ ಪ್ರತಿಪಕ್ಷ ನಾಯಕ ಹರಿಪ್ರಸಾದ್ (Hariprasad) ಮಾತನಾಡಿ, ಸರ್ಕಾರ ಅವರದ್ದೇ. ಯಾರು ತನಿಖೆ ಮಾಡುವುದು ಬೇಡ ಎಂದಿದ್ದಾರೆ. ಆದರೆ ಮೊದಲು ಪ್ರಶ್ನೋತ್ತರ ತೆಗೆದುಕೊಳ್ಳಿ ನಂತರ ಅವರ ಮಾತು ಆಲಿಸಿ ಎಂದರು. ಆಡಳಿತ ಪಕ್ಷದ ಸದಸ್ಯರ ಮಾತಿಗೆ ಅವಕಾಶ ನೀಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಸರ್ಕಾರಿ ಜಮೀನು ಅಕ್ರಮವಾಗಿ ಒತ್ತುವರಿಯಾಗಿದೆ – ಒಪ್ಪಿಕೊಂಡ ಸರ್ಕಾರ
ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾಪತಿಗಳು, ನಮ್ಮ ಕಾರ್ಯ ಪದ್ದತಿ ಪ್ರಕಾರ ಪ್ರಶ್ನೋತ್ತರ ತೆಗೆದುಕೊಳ್ಳಲಿದ್ದೇವೆ. ನೀವು ಯಾವುದೇ ನೋಟಿಸ್ ಕೂಡ ನೀಡಿಲ್ಲ ಎಂದು ಬಿಜೆಪಿ ಸದಸ್ಯರಿಗೆ ಸೂಚಿಸಿ ಪ್ರಶ್ನೋತ್ತರ ಕಲಾಪ ಆರಂಭಿಸಲು ಮುಂದಾದರು. ಆದರೂ ಇದಕ್ಕೆ ಅವಕಾಶ ನೀಡದೆ ಬಿಜೆಪಿ ಸದಸ್ಯ ರವಿಕುಮಾರ್, ಪ್ರಾಣೇಶ, ನಾರಾಯಣಸ್ವಾಮಿ, ತೇಜಸ್ವಿನಿಗೌಡ ವರದಿ ಮಂಡಿಸಲು ಸರ್ಕಾರದಕ್ಕೆ ಆದೇಶ ಮಾಡಿ ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಹರಿಪ್ರಸಾದ್, ಸರ್ಕಾರವೇ ಅಲ್ಲಿ ಇಲ್ಲ ಅದಕ್ಕೆ ನೀವು ಹೇಳುತ್ತಿದ್ದೀರಿ. ನಿಮಗೆ ಧಮ್ಮು ತಾಕತ್ತು ಇಲ್ಲ. ಧಮ್ಮಿರುವುದು 40 ಪರ್ಸೆಂಟ್‌ಗೆ ಮಾತ್ರ. ವಕ್ಫ್ ಬೋರ್ಡ್‌ನಲ್ಲಿ ಇವರಿಗೆ 40 ಪರ್ಸೆಂಟ್ ಸಿಕ್ಕಿಲ್ಲ. ಅದಕ್ಕೆ ಈಗ ಈ ರೀತಿ ಮಾಡುತ್ತಿದ್ದಾರೆ ಎಂದರು.
ಇದಕ್ಕೆ ಟಾಂಗ್ ನೀಡಿದ ಸರ್ಕಾರಿ ಮುಖ್ಯ ಸಚೇತಕ ನಾರಾಯಣಸ್ವಾಮಿ, ನಿಮ್ಮದು 85 ಪರ್ಸೆಂಟ್ ಸರ್ಕಾರ. ರಾಜೀವ್ ಗಾಂಧಿಯೇ ಹೇಳಿದ್ದರು ಎನ್ನುವುದನ್ನು ಉಲ್ಲೇಖಿಸಿದರು. ಈ ವೇಳೆ ಬಿಜೆಪಿ ಸದಸ್ಯರಾದ ತೇಜಸ್ವಿನಿ, ರವಿಕುಮಾರ್ ಯಾವಾಗ ವರದಿ ಮಂಡಿಸುತ್ತೀರಾ ಅಂತ ಸರ್ಕಾರದಿಂದ ಭರವಸೆ ಕೊಡಿಸಿ ಎಂದರು. ಇದನ್ನೂ ಓದಿ: ಕಾಂಗ್ರೆಸ್ ವಿರೋಧ ಪಕ್ಷ ಆಗಿರಲು ನಾಲಾಯಕ್: ನಳಿನ್ ಕುಮಾರ್ ಕಟೀಲ್
ಈ ವೇಳೆ ಪ್ರಶ್ನೋತ್ತರ ಕಲಾಪವನ್ನು ಆರಂಭಿಸಲಾಯಿತು. ಆದರೆ ಪ್ರಶ್ನೆಯೇ ಕೇಳಿಸದಂತೆ ಬಿಜೆಪಿ ಸದಸ್ಯರು ಗದ್ದಲ ಮಾಡಿದ್ದರಿಂದ ಕುಪಿತರಾದ ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್ ಇದೇನು ಮಾರುಕಟ್ಟೆಯಾ? ಇವರನ್ನು ಕೂರಿಸಿ ಎಂದರು. ಗದ್ದಲ ಹೆಚ್ಚಾಗಿದ್ದರಿಂದ ಸದನದಕ್ಕೆ ಮಾಹಿತಿ ನೀಡಲು ಎದ್ದುನಿಂತ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ (Shashikala jolle) ಮಾಣಿಪ್ಪಾಡಿ ವರದಿ ಕುರಿತು ಮಾತು ಆರಂಭಿಸಿದರು. ಆದರೆ ಇದಕ್ಕೆ ಸಚಿವ ಅಶ್ವತ್ಥ ನಾರಾಯಣ (Ashwath Narayan) ಬೇಡವೆಂದು ಸೂಚಿಸಿದ್ದರಿಂದ ಉತ್ತರ ಮೊಟಕುಗೊಳಿಸಿದರು. ನಂತರ ಸಭಾಪತಿ ಪ್ರಶ್ನೋತ್ತರ ಕಲಾಪ ಆರಂಭಿಸಿ ಗದ್ದಲಕ್ಕೆ ತೆರೆ ಎಳೆದರು.